ಕೂಡಿಗೆ, ಅ. ೮: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಣಿವೆ ಗ್ರಾಮದ ಪ್ರಗತಿಪರ ರೈತನೊರ್ವ ತನ್ನ ಎರಡು ಎಕರೆಗಳಷ್ಟು ಜಮೀನಿನಲ್ಲಿ ಭತ್ತದ ನಾಟಿ ಮಾಡಿದ್ದು, ಭತ್ತದ ಬೆಳೆಯು ರೋಗಗ್ರಸ್ತವಾಗಿ ಒಣಗುತ್ತಿರುವುದು ಕಂಡುಬರುತ್ತದೆ.
ರೈತ ರಮೇಶ್ ಎಂಬುವರು ಸಹಕಾರ ಸಂಘದ ಮೂಲಕ ಹೊಸ ಭತ್ತದ ತಳಿಯಾದ ಅಂಕೂರ್ ಶಕ್ತಿ ಎಂಬ ಭತ್ತದ ಬೀಜದ ತಳಿಯನ್ನು ಖರೀದಿಸಿ ಸಸಿ ಮಡಿಯನ್ನು ಮಾಡಿ ಗದ್ದೆಯಲ್ಲಿ ನಾಟಿ ಮಾಡಿದ್ದರು.
ನಾಟಿ ಮಾಡಿದ ಒಂದು ತಿಂಗಳವರೆಗೆ ಭತ್ತದ ಬೆಳೆಯು ಹಸಿರುಗಟ್ಟಿ ಉತ್ತಮವಾಗಿ ಬೆಳೆ ಬರುವ ಎಲ್ಲಾ ಲಕ್ಷಣಗಳು ಕಂಡುಬAದರೂ ದಿನಗಳು ಕಳೆಯುತ್ತಾ ಬರುತ್ತಿದಂತೆ ಭತ್ತದ ಬೆಳೆಗೆ ರೋಗ ಬಂದು ಅಗೆ ಒಣಗುತ್ತ ಬರುತ್ತಿರುವುದನ್ನು ಗಮನಿಸಿದ ರೈತ ಕ್ರಿಮಿನಾಶಕ ಔಷಧಿಯನ್ನು ಸಿಂಪಡಣೆ ಮಾಡಿದರೂ ಪೈರುಗಳು ಮಾತ್ರ ಒಣಗುತ್ತ ಬಂದು ಇದೀಗ ಸಂಪೂರ್ಣವಾಗಿ ಎರಡು ಎಕರೆಗಳಷ್ಟು ಬೆಳೆ ಒಣಗಿದೆ.
ರೈತರಾದ ರಮೇಶ್ ಮಾತನಾಡಿ, ಭತ್ತದ ಕಂಪನಿಯವರು ನೀಡಿರುವ ಕಳಪೆ ಬೀಜ ಭತ್ತವಾಗಿರುತ್ತದೆ. ಇದರಿಂದಾಗಿ ನನಗೆ ನಷ್ಟವಾಗಿದೆ ಕಳೆದ ಸಾಲಿನಲ್ಲಿ ಇದೇ ಜಮೀನಿನ ೪೦ ಚೀಲ ಭತ್ತವನ್ನು ಬೆಳೆಲಾಗಿತ್ತು. ಈ ಸಾಲಿನಲ್ಲಿ ಬಾರಿ ಅನ್ಯಾಯವಾಗಿದೆ ಎಂದು ತಿಳಿಸಿದ್ದಾರೆ. ಸಂಬAಧಿಸಿದ ಕಂಪನಿ ಮತ್ತು ಇಲಾಖೆಯವರು ಸ್ಥಳ ಪರಿಶೀಲನೆ ನಡೆಸಿ ಪರಿಹಾರವನ್ನು ಒದಗಿಸುವಂತೆ ಅವರು ಒತ್ತಾಯಿಸಿದ್ದಾರೆ.