ಶನಿವಾರಸಂತೆ, ಅ. ೮: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.
ಸಭೆಯಲ್ಲಿ ವಸತಿ ಯೋಜನೆ ಪ್ರಗತಿ, ಜಮಾಬಂದಿ ದಿನಾಂಕ ನಿಗದಿ ಪಡಿಸುವಿಕೆ, ೧೫ ನೇ ಹಣಕಾಸು ಕ್ರಿಯಾ ಯೋಜನೆ ತಯಾರಿಸುವುದು, ಬೀದಿ ದೀಪ ಅಳವಡಿಕೆ ಸಮಸ್ಯೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಹಿರಿಯ ಸದಸ್ಯ ಡಿ.ಪಿ.ಬೋಜಪ್ಪ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಸುವ ಬೀದಿ ದೀಪಗಳ ಖರೀದಿಯಲ್ಲಿ ಅವ್ಯವಸ್ಥೆಯಾಗಿದೆ. ಬೀದಿ ದೀಪಗಳನ್ನು ಕೊಟೇಶನ್ ಮೂಲಕ ಮೊದಲೇ ಖರೀದಿಸಿ ತಂದು ಪಂಚಾಯಿತಿಯಲ್ಲಿ ಸಂಗ್ರಹ ಇಡಬೇಕು. ಅಂಗಡಿಯಿAದ ನೇರವಾಗಿ ಖರೀದಿಸಿದರೆ ಪಂಚಾಯಿತಿಗೆ ನಷ್ಟವಾಗುತ್ತದೆ ಎಂದು ಆಗ್ರಹಿಸಿದರು.
“ಹಿಂದೆ ತಾವು ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಸಾಲ ತೀರಿಸಲಾಗದ ಕಾರಣ, ಬೇರೆ ಕಡೆಯಿಂದ ದೀಪಗಳನ್ನು ಖರೀದಿಸಲಾಗಲಿಲ್ಲ ಎಂದು ಸದಸ್ಯೆ ಪೂರ್ಣಿಮಾ ಕಿರಣ್ ಹೇಳಿದರೆ, ಸದಸ್ಯ ಮನು ಮಹಾಂತೇಶ್ ಮಾತನಾಡಿ, ಉರಿಯದ ಬೀದಿ ದೀಪಗಳ ಸಮಸ್ಯೆ ಬಗೆಹರಿಸಿ, ವಿದ್ಯುತ್ ಕಂಬಗಳಲ್ಲಿ ಶೀಘ್ರ ದೀಪಗಳನ್ನು ಹಾಕುವಂತೆ ಆಗ್ರಹಿಸಿದರು.
ನೇರುಗಳಲೆ ಗ್ರಾಮ ಪಂಚಾಯಿತಿಯಿAದ ವರ್ಗಾವಣೆಗೊಂಡು ಬಂದಿರುವ ನೂತನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಮಾತನಾಡಿ, ಪಂಚಾಯಿತಿಯಲ್ಲಿ ದೀಪಗಳ ಖರೀದಿಗೆ ಮೊದಲೇ ಹಣ ಇಡಬೇಕು. ಪರಸ್ಥಳದಿಂದ ಕೊಟೇಶನ್ ತಂದು ಖರೀದಿಸಬೇಕು ಎಂದು ತಿಳಿಸಿದರು.
ವಸತಿ ಯೋಜನೆ ಪ್ರಗತಿ ಕುರಿತು ನಡೆದ ಚರ್ಚೆಯಲ್ಲಿ ಶನಿವಾರಸಂತೆ, ಅ. ೮: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಪಂಚಾಯಿತಿ ಅಧ್ಯಕ್ಷೆ ಸತ್ಯವತಿ ದೇವರಾಜ್ ಅಧ್ಯಕ್ಷತೆಯಲ್ಲಿ ತುರ್ತು ಸಭೆ ನಡೆಯಿತು.
ಸಭೆಯಲ್ಲಿ ವಸತಿ ಯೋಜನೆ ಪ್ರಗತಿ, ಜಮಾಬಂದಿ ದಿನಾಂಕ ನಿಗದಿ ಪಡಿಸುವಿಕೆ, ೧೫ ನೇ ಹಣಕಾಸು ಕ್ರಿಯಾ ಯೋಜನೆ ತಯಾರಿಸುವುದು, ಬೀದಿ ದೀಪ ಅಳವಡಿಕೆ ಸಮಸ್ಯೆ ಇತ್ಯಾದಿ ಸಮಸ್ಯೆಗಳ ಬಗ್ಗೆ ಗಂಭೀರ ಚರ್ಚೆ ನಡೆಯಿತು.
ಹಿರಿಯ ಸದಸ್ಯ ಡಿ.ಪಿ.ಬೋಜಪ್ಪ ಮಾತನಾಡಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಳವಡಿಸುವ ಬೀದಿ ದೀಪಗಳ ಖರೀದಿಯಲ್ಲಿ ಅವ್ಯವಸ್ಥೆಯಾಗಿದೆ. ಬೀದಿ ದೀಪಗಳನ್ನು ಕೊಟೇಶನ್ ಮೂಲಕ ಮೊದಲೇ ಖರೀದಿಸಿ ತಂದು ಪಂಚಾಯಿತಿಯಲ್ಲಿ ಸಂಗ್ರಹ ಇಡಬೇಕು. ಅಂಗಡಿಯಿAದ ನೇರವಾಗಿ ಖರೀದಿಸಿದರೆ ಪಂಚಾಯಿತಿಗೆ ನಷ್ಟವಾಗುತ್ತದೆ ಎಂದು ಆಗ್ರಹಿಸಿದರು.
“ಹಿಂದೆ ತಾವು ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಸಾಲ ತೀರಿಸಲಾಗದ ಕಾರಣ, ಬೇರೆ ಕಡೆಯಿಂದ ದೀಪಗಳನ್ನು ಖರೀದಿಸಲಾಗಲಿಲ್ಲ ಎಂದು ಸದಸ್ಯೆ ಪೂರ್ಣಿಮಾ ಕಿರಣ್ ಹೇಳಿದರೆ, ಸದಸ್ಯ ಮನು ಮಹಾಂತೇಶ್ ಮಾತನಾಡಿ, ಉರಿಯದ ಬೀದಿ ದೀಪಗಳ ಸಮಸ್ಯೆ ಬಗೆಹರಿಸಿ, ವಿದ್ಯುತ್ ಕಂಬಗಳಲ್ಲಿ ಶೀಘ್ರ ದೀಪಗಳನ್ನು ಹಾಕುವಂತೆ ಆಗ್ರಹಿಸಿದರು.
ನೇರುಗಳಲೆ ಗ್ರಾಮ ಪಂಚಾಯಿತಿಯಿAದ ವರ್ಗಾವಣೆಗೊಂಡು ಬಂದಿರುವ ನೂತನ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ಮಾತನಾಡಿ, ಪಂಚಾಯಿತಿಯಲ್ಲಿ ದೀಪಗಳ ಖರೀದಿಗೆ ಮೊದಲೇ ಹಣ ಇಡಬೇಕು. ಪರಸ್ಥಳದಿಂದ ಕೊಟೇಶನ್ ತಂದು ಖರೀದಿಸಬೇಕು ಎಂದು ತಿಳಿಸಿದರು.
ವಸತಿ ಯೋಜನೆ ಪ್ರಗತಿ ಕುರಿತು ನಡೆದ ಚರ್ಚೆಯಲ್ಲಿ ಕ್ರಿಯಾ ಯೋಜನೆ ಹಣವನ್ನು ೧೩ ಸದಸ್ಯರಿಗೆ ಸಮನಾಗಿ ಹಂಚಬೇಕು ಎಂದರು. ಈ ವಿಚಾರ ಗ್ರಾಮ ಸಭೆಯಲ್ಲಿ ತೀರ್ಮಾನವಾಗಲಿ ಎಂದು ಸದಸ್ಯರಾದ ಮನು ಮಹಾಂತೇಶ್, ನಿತಿನ್ ಹೇಳಿದರು.
ಸಭೆಯಲ್ಲಿ ಅಮೃತಧಾರೆ ಕೆಲಸದ ಬಗ್ಗೆಯೂ ಚರ್ಚೆ ನಡೆಯಿತು. ಪಂಚಾಯಿತಿ ವ್ಯಾಪ್ತಿಯ ೫-೬ ವಿದ್ಯಾಸಂಸ್ಥೆಗಳು ಕೆಲ ಶಿಕ್ಷಕರು, ೨ ಕಲ್ಯಾಣ ಮಂಟಪಗಳು, ರೆಸಾರ್ಟ್, ಹೋಂಸ್ಟೆಗಳು, ಕೋಳಿ ಅಂಗಡಿಗಳು ಕಂದಾಯ ಕಟ್ಟುತ್ತಿಲ್ಲ ಎಂದು ಸದಸ್ಯರು ಆರೋಪಿಸಿದರು.
ಸದಸ್ಯರು ಸಹಕಾರ ನೀಡಿ ಜತೆಗೆ ಬಂದರೆ ತಾವೇ ಸ್ಥಳಗಳಿಗೆ ಭೇಟಿ ನೀಡಿ ಕಂದಾಯ ವಸೂಲಿ ಮಾಡುವುದಾಗಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭರವಸೆ ನೀಡಿದರು.
ತುರ್ತು ಸಭೆ ಮುಕ್ತಾಯ ಹಂತ ತಲುಪುತ್ತಿದ್ದಂತೆ ಸಭೆಗೆ ತಡವಾಗಿ ಆಗಮಿಸಿದ ಸದಸ್ಯ ಕಾಂತರಾಜ್, ಉಪಾಧ್ಯಕ್ಷೆ ಗೋಪಿಕಾ ಅಧ್ಯಕ್ಷರ ಪಕ್ಕದ ಆಸನದಲ್ಲಿ ಕುಳಿತುಕೊಳ್ಳದೇ ಸದಸ್ಯರ ಹಿಂದಿನ ಆಸನದಲ್ಲಿ ಕುಳಿತ ಬಗ್ಗೆ ವಿವಾದ ಎಬ್ಬಿಸಿ, ಉಪಾಧ್ಯಕ್ಷೆ ಅಧ್ಯಕ್ಷರ ಪಕ್ಕದ ಆಸನದಲ್ಲಿ ಕುಳಿತರೇ ಮಾತ್ರ ಸಭೆ ನಡೆಯಬೇಕು. ಇಲ್ಲವಾದರೆ ಬೇಡ ಎಂದು ಹೇಳಿ ಗಲಾಟೆ ಮಾಡಿ ಹೊರ ನಡೆದಾಗ, ಸದಸ್ಯರಾದ ನಿತಿನ್, ಮಹಾಂತೇಶ್ ಹಿಂಬಾಲಿಸಿದರು. ಉಪಾಧ್ಯಕ್ಷೆ ಗೋಪಿಕಾ, “ಅಧ್ಯಕ್ಷರು ತಮಗೆ ಆಸನದಲ್ಲಿ ಕುಳಿತುಕೊಳ್ಳುವುದು ಬಿಡುವುದು ನಿಮ್ಮಿಷ್ಟ ಎಂದು ಹೇಳಿದ್ದು ಅವರು ಕ್ಷಮೆ ಕೇಳುವವರೆಗೂ ತಾವು ಉಪಾಧ್ಯಕ್ಷರ ಆಸನದಲ್ಲಿ ಕುಳಿತುಕೊಳ್ಳುವುದಿಲ್ಲ ಎಂದು ಹೇಳುತ್ತಾ ಅವರೂ ಸಭೆಯಿಂದ ಹೊರ ನಡೆದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಆಯಿಷಾ ವಂದಿಸಿದರು. ಅಧ್ಯಕ್ಷೆ ಸತ್ಯವತಿ, ಉಪಾಧ್ಯಕ್ಷೆ ಗೋಪಿಕಾ ಸದಸ್ಯರಾದ ಡಿ.ಪಿ. ಭೋಜಪ್ಪ, ಸಿ.ಜೆ. ಗಿರೀಶ್, ಎಸ್.ಪಿ. ಭಾಗ್ಯಾ, ಪೂರ್ಣಿಮಾ, ಎಚ್.ಆರ್. ಭವಾನಿ, ನಾಗರತ್ನಾ, ಕೆ.ಎಸ್. ಜಾನಕಿ, ಮಹಾಂತೇಶ್, ನಿತಿನ್, ಕಾಂತರಾಜ್, ಸಿಬ್ಬಂದಿ ಮಂಜುನಾಥ್, ಸಂಜಯ್ ಇದ್ದರು.