ಗೋಣಿಕೊಪ್ಪಲು, ಅ. ೮: ೪೫ನೇ ವರ್ಷದ ಗೋಣಿಕೊಪ್ಪ ದಸರಾ ಆಚರಣೆಯ ಲೋಗೋವನ್ನು ವೀರಾಜಪೇಟೆ ಕ್ಷೇತ್ರದ ಶಾಸಕ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಅಜ್ಜಿಕುಟ್ಟಿರ ಎಸ್. ಪೊನ್ನಣ್ಣ ಅನಾವರಣ ಮಾಡಿದರು.

ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ವತಿಯಿಂದ ಪಟ್ಟಣದ ಹರಿಶ್ಚಂದ್ರಪುರದಲ್ಲಿರುವ ಮನೆಯಪಂಡ ಯಾರ್ಡ್ನಲ್ಲಿ ಆಯೋಜಿಸಿದ್ದ ರಾಷ್ಟçಮಟ್ಟದ ಆಟೋಕ್ರಾಸ್ ಸ್ಪರ್ಧೆಗೆ ಆಗಮಿಸಿ ಲೋಗೋ ಬಿಡುಗಡೆಗೊಳಿಸಿದರು.

ಬಳಿಕ ಮಾತನಾಡಿದ ಅವರು, ಗೋಣಿಕೊಪ್ಪ ದಸರಾ ವೈಭವಯುತವಾಗಿ ನಡೆಯಬೇಕು. ಜನೋತ್ಸವಕ್ಕೆ ಅರ್ಥ ಬರಬೇಕೆಂದರೆ ಎಲ್ಲರ ಸಹಕಾರ ಅಗತ್ಯ ಎಂದರು.

ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ ಮಾತನಾಡಿ, ದಸರಾ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.

ಸೌತ್ ಕೂರ್ಗ್ ಫಾರ್ಮರ್ಸ್ ಅಸೋಸಿಯೇಷನ್ ಅಧ್ಯಕ್ಷ ಸಿ.ಡಿ. ಮಾದಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಕಳೆದ ೨೩ ವರ್ಷಗಳಿಂದ ಯಶಸ್ವಿಯಾಗಿ ಆಟೋಕ್ರಾಸ್ ಆಯೋಜಿಸುತ್ತಾ ಬರಲಾಗಿದೆ. ದಸರಾ ಸಮಿತಿ ಈ ಕಾರ್ಯಕ್ರಮಕ್ಕೆ ಪೂರಕ ಬೆಂಬಲ ನೀಡುತ್ತಿದೆ ಎಂದರು.

ಪ್ರಮುಖರಾದ ಅಜ್ಜಿಕುಟ್ಟಿರ ನರೇನ್ ಕಾರ್ಯಪ್ಪ, ಯುವ ದಸರಾ ಸಮಿತಿ ಅಧ್ಯಕ್ಷ ನಾಮೇರ ಅಂಕಿತ್ ಪೊನ್ನಪ್ಪ, ದಿಲನ್ ಚಂಗಪ್ಪ, ಶಿವಾಜಿ, ಕೊಕ್ಕಂಡ ರೋಷನ್, ಪ್ರಧಾನ ಕಾರ್ಯದರ್ಶಿ ರಮೇಶ್, ನೂರೆರ ಧನ್ಯ, ಸೌತ್ ಕೂರ್ಗ್ ಫಾರ್ಮರ್ ಅಸೋಸಿಯೇಷನ್‌ನ ನಿರ್ದೇಶಕರಾದ ಗುಮ್ಮಟ್ಟಿರ ಕಿಲನ್, ದರ್ಶನ್ ಸೇರಿದಂತೆ ಇನ್ನಿತರರು ಈ ಸಂದರ್ಭ ಹಾಜರಿದ್ದರು.

- ಹೆಚ್.ಕೆ. ಜಗದೀಶ್‌ಡರ್ಟ್ ಟ್ರಾö್ಯಕ್ ರೈಡ್‌ನಲ್ಲಿ ಶಾಸಕ ಎ.ಎಸ್. ಪೊನ್ನಣ್ಣ ಜೊತೆಯಾದರು. ಮಾಡಿಫೈಡ್ ಕಾರ್‌ನಲ್ಲಿ ಚಾಲಕನೊಂದಿಗೆ ಕೂತು ರ‍್ಯಾಲಿ ಅನುಭವ ಪಡೆದರು. ಅಗತ್ಯ ಸುರಕ್ಷಾ ಕ್ರಮದೊಂದಿಗೆ ಪೊನ್ನಣ್ಣ ಟ್ರಾö್ಯಕ್‌ನಲ್ಲಿ ತೆರಳಿದರು.