ಸಿದ್ದಾಪುರ, ಅ. ೮: ಸತ್ಯ, ಸಮತ್ವ, ಸಮರ್ಪಣೆ ಎಂಬ ಧ್ಯೇಯ ವಾಕ್ಯದಡಿ ಕೇರಳದ ಕಲ್ಲಿಕೋಟೆಯಲ್ಲಿ ಎಸ್‌ಕೆಎಸ್‌ಎಸ್‌ಎಫ್ ೩೫ ನೇ ವಾರ್ಷಿಕ ಐತಿಹಾಸಿಕ ಮಹಾ ಸಮ್ಮೇಳನವು ನಡೆಯಲಿದೆ.

ಕಾರ್ಯಕ್ರಮದ ಪ್ರಚಾರಾರ್ಥ ತಾ. ೧೧ರಂದು ಕೊಡಗು ಜಿಲ್ಲಾ ಎಸ್ ಕೆ ಎಸ್ ಎಸ್ ಎಫ್ ಸಮಿತಿಯು ಹಮ್ಮಿಕೊಂಡಿರುವ ನೂರೇ ಅಜ್ಮೀರ್ ಹಾಗೂ ಮಿಲಾದ್ ಕಾನ್ಫರೆನ್ಸ್, ಜಿಲ್ಲಾ ಸಮ್ಮೇಳನವು ಕುಶಾಲನಗರದಲ್ಲಿ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಫೈಝೀಸ್ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಹಾಗೂ ಎಸ್‌ವೈಎಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಆದ ಎಂ.ವೈ. ಅಶ್ರಫ್‌ಫೈಝಿ ತಿಳಿಸಿದ್ದಾರೆ.