ಮಡಿಕೇರಿ, ಅ. ೭ : ಕೂರ್ಗ್ ಹೋಂಸ್ಟೇ ಅಸೋಸಿಯೇಷನ್ ಅಧ್ಯಕ್ಷರಾಗಿದ್ದ ಕೆ. ಭರತ್ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡ ಪಾಲೆಕಂಡ ಬೆನ್ ಗಣಪತಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಇತ್ತೀಚೆಗೆ ಗೋಣಿಕೊಪ್ಪಲಿ ನಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ನೂತನ ಸಮಿತಿ ರಚಿಸಲಾಯಿತು.

ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಪಾಲೆಕಂಡ ಬೆನ್ ಗಣಪತಿಯವರು ತಮ್ಮ ಭಾಷಣ ದಲ್ಲಿ ಹೋಂಸ್ಟೇ ಲೈಸನ್ಸ್ ನವೀ ಕರಣವನ್ನು ತ್ವರಿತಗೊಳಿಸುವ ಹಾಗೂ ಇದಕ್ಕೆ ಸಂಬAಧಿತ ಕಚೇರಿ ಕೆಲಸಗಳನ್ನು ಸರಳ ಗೊಳಿಸುವ ಭರವಸೆಯಿತ್ತರು. ಇದರ ಜೊತೆಗೆ ಅನಧಿಕೃತ ಹೋಂಸ್ಟೇಗಳ ಬಗ್ಗೆಯೂ ಆಡಳಿತ ಕ್ರಮ ಜರುಗಿಸುವಂತಾಗಬೇಕು ಎಂದು ನುಡಿದರು.

ಕಾರ್ಯದರ್ಶಿಯಾಗಿ ಮೀನಾ ಕಾರ್ಯಪ್ಪ, ಉಪಾಧ್ಯಕ್ಷರಾಗಿ ಬಾಬಿ ವರ್ಗಿಸ್, ಸಹ ಕಾರ್ಯ ದರ್ಶಿಯಾಗಿ ನವೀನ್ ಎ.ಕೆ., ಖಜಾಂಚಿಯಾಗಿ ಹೇಮ್ ಮಾದಪ್ಪ, ಆಡಳಿತ ಮಂಡಳಿ ಸದಸ್ಯರಾಗಿ ಶಾಮ್, ಜೋಸೆಫ್, ಪೊನ್ನಣ್ಣ ಎಂ.ಎಸ್., ಮೋಂತಿ ಗಣೇಶ್, ಸವಿತ ಅಪ್ಪಣ್ಣ, ಪ್ರೇಮ್ ಡಿ.ಎಸ್., ನಿಶಾ ಗಣಪತಿ, ಸಾಗರ್ ಕೆ.ಟಿ., ನಿಮ್ಮಿ ಚಂಗಪ್ಪ, ತಿಮ್ಮಯ್ಯ ಸಿ.ಸಿ. ಇವರುಗಳು ಆಯ್ಕೆಯಾದರು.