ಮಡಿಕೇರಿ, ಅ. ೭: ಆಕರ್ಷಕ ಶೋಭಾಯಾತ್ರೆಯೊಂದಿಗೆ ನಗರದ ಅಶೋಕಪುರದಲ್ಲಿ ಅಲ್ಲಿನ ಗಣಪತಿ ಉತ್ಸವ ಸಮಿತಿ ವತಿಯಿಂದ ಪ್ರತಿಷ್ಠಾಪಿ ಸಲಾಗಿದ್ದ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು.

ಅಶೋಕಪುರದಲ್ಲಿ ಪ್ರತಿಷ್ಠಾಪಿಸಿದ್ದ ಮೂರ್ತಿಯನ್ನು ಮಂಟಪದಲ್ಲಿಟ್ಟು ವಿಶೇಷ ಪೂಜೆ ಸಲ್ಲಿಸಿ ಶೋಭಾ ಯಾತ್ರೆಗೆ ಚಾಲನೆ ನೀಡಲಾಯಿತು.

ರೂ. ೮ ಲಕ್ಷ ವೆಚ್ಚದಲ್ಲಿ ಈ ಬಾರಿ `ಗಣಪತಿಯಿಂದ ನರಹಂತಕ ದೇವಾಂತಕ ರಾಕ್ಷಸನ ಸಂಹಾರ' ಎಂಬ ಪೌರಾಣಿಕ ಕಥಾಹಂದರವನ್ನು ಸಮಿತಿ ಮಂಟಪದಲ್ಲಿ ಅಳವಡಿಸಿ ಪ್ರದರ್ಶಿಸಿತು. ದಿಂಡಿಗಲ್ಲಿನ ಪ್ರಭಾವಳಿ, ಗಣೇಶ ಸೇರಿದಂತೆ ದೇವಾನುದೇವತೆ, ಅಸುರರ ಕಲಾಕೃತಿಗಳು ಮಂಟಪದ ಅಂದವನ್ನು ಹೆಚ್ಚಿಸಿದ್ದವು. ರಂಗುರAಗಿನ ಕಾಗದದ ಸ್ಫೋಟಕಗಳು, ಚಿಮ್ಮುವ ಬೆಂಕಿ, ಪಟಾಕಿಗಳು ನೋಡುಗರನ್ನು ರೋಮಾಂಚನ ಗೊಳಿಸಿದವು.

(ಮೊದಲ ಪುಟದಿಂದ) ದೇವರು-ಅಸುರನ ನಡುವಿನ ಯುದ್ಧವನ್ನು ಮನಮೋಹಕವಾಗಿ ಪ್ರಸ್ತುತ ಪಡಿಸಲಾಯಿತು.

ಅಶೋಕಪುರದಿಂದ ಹೊರಟ ಮಂಟಪ ಫೀ.ಮಾ. ಕಾರ್ಯಪ್ಪ, (ಮೊದಲ ಪುಟದಿಂದ) ದೇವರು-ಅಸುರನ ನಡುವಿನ ಯುದ್ಧವನ್ನು ಮನಮೋಹಕವಾಗಿ ಪ್ರಸ್ತುತ ಪಡಿಸಲಾಯಿತು.

ಅಶೋಕಪುರದಿಂದ ಹೊರಟ ಮಂಟಪ ಫೀ.ಮಾ. ಕಾರ್ಯಪ್ಪ, ಜನರಲ್ ತಿಮ್ಮಯ್ಯ ವೃತ್ತ, ಮಂಗೇರಿರ ಮುತ್ತಣ್ಣ ವೃತ್ತ, ಇಂದಿರಾ ಗಾಂಧಿ ವೃತ್ತದಲ್ಲಿ ಪ್ರದರ್ಶನ ನೀಡಿತು.

ಓಂಕಾರೇಶ್ವರ ದೇವಾಲಯ ಸಮೀಪದ ಗೌರಿಕೆರೆಯಲ್ಲಿ ಮೂರ್ತಿಯನ್ನು ವಿಸರ್ಜಿಸ ಲಾಯಿತು. ಆ ಮೂಲಕ ಮಡಿಕೇರಿಯಲ್ಲಿ ವಿನಾಯಕನ ವಿಸರ್ಜನೋತ್ಸವಕ್ಕೆ ತೆರೆ ಎಳೆಯಲಾಯಿತು.

ಪೊಲೀಸ್ ಇಲಾಖೆಯಿಂದ ಸೂಕ್ತ ಬಂದೋಬಸ್ತ್ ಕಲ್ಪಿಸಲಾಗಿತ್ತು.