ಪೆರಾಜೆ, ಅ. ೬: ವಿಶೇಷಚೇತನರ ವಿವಿಧೋದ್ದೇಶ ಸಹಕಾರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ಬಿ.ಯಂ. ತಿರುಮಲೇಶ್ವರ ಅಧ್ಯಕ್ಷತೆಯಲ್ಲಿ ಜಿಲ್ಲಾ ವಿಶೇಷಚೇತನರ ಸಂಘದ ಕಚೇರಿಯಲ್ಲಿ ಇತ್ತೀಚೆಗೆ ನಡೆಯಿತು.

ಸಂಘದ ಅಧ್ಯಕ್ಷ ತಿರುಮಲೇಶ್ವರ ಪೆರಾಜೆ ಕಾರ್ಯಕ್ರಮವನ್ನು ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಬಗ್ಗೆ ವಿವರವಾದ ಮಾಹಿತಿ ನೀಡಿ, ಸಂಘದಿAದ ವಿಶೇಷಚೇತನರಿಗೆ ಸಾಧನ ಸಲಕರಣೆಗಳನ್ನು ರಿಯಾಯಿತಿ ದರದಲ್ಲಿ ನೀಡಲಾಗುವುದು ಹಾಗೂ ದುರಸ್ತಿಪಡಿಸಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ವಿಶೇಷಚೇತನರ ಸಬಲೀಕರಣ ಇಲಾಖೆಯ ಅಧಿಕಾರಿಗಳಾದ ವಿಮಲ ಅವರು ಉದ್ಘಾಟಿಸಿ ಮಾತನಾಡಿ ಸಂಘದಲ್ಲಿ ಹಲವಾರು ಎಡರು ತೊಡರುಗಳಾದರು ಛಲ ಬಿಡದೆ ಒಗ್ಗೂಡಿ ನೀವುಗಳು ಸಂಘವನ್ನು ಮುಂದುವರೆಸಿಕೊAಡು ಹೋಗುವುದು ಹೆಮ್ಮೆಯ ವಿಷಯವಾಗಿದೆ ಎಂದರು.

ಜಿಲ್ಲಾ ವಿಶೇಷಚೇತನರಿಗೆ ಸಂಘದ ಅಧ್ಯಕ್ಷ ಜೆ.ಎ. ಮಹೇಶ್ವರರವರು ಮಾತನಾಡಿ ಪ್ರತಿಯೊಬ್ಬರೂ ಒಗ್ಗಟ್ಟಿನಿಂದ ಜವಾಬ್ದಾರಿಯನ್ನು ವಹಿಸಿಕೊಂಡು ಮುಂದುವರೆಯಬೇಕು ಹಾಗೂ ಸಂಘವನ್ನು ಬಲಪಡಿಸಲು ಸಹಕರಿಸಬೇಕು ಆರ್ಥಿಕ ಸಮಸ್ಯೆಗಳನ್ನು ಸುಧಾರಿಸಿಕೊಳ್ಳಲು ವಿವಿಧ ಯೋಜನೆಗಳನ್ನು ಹಾಕಿಕೊಳ್ಳಬೇಕೆಂದು ಸಲಹೆ ನೀಡಿದರು.

ಈ ಕಾರ್ಯಕ್ರಮದಲ್ಲಿ ಉತ್ತರ ಪ್ರದೇಶದಲ್ಲಿ ನಡೆದ ಪಂಚಕುಸ್ತಿಯಲ್ಲಿ ದೇಶಕ್ಕೆ ತೃತೀಯ ಸ್ಥಾನ ಪಡೆದ ರಾಜ್ಯಕ್ಕೆ ಹಾಗೂ ನಮ್ಮ ಜಿಲ್ಲೆಗೆ ಮೊದಲನೇ ಸ್ಥಾನ ಪಡೆದ ವಿಶೇಷಚೇತನರಾದ ಹಾಗೂ ಸಂಘದ ಕಾರ್ಯನಿರ್ವಾಹಣಾಧಿಕಾರಿ ಕೆ.ಎಂ ಹಸನ್ ಅವರನ್ನು ಜಿಲ್ಲಾ ವಿಶೇಷಚೇತನರ ಸಂಘ ಹಾಗೂ ವಿಶೇಷಚೇತನರ ವಿವಿಧೋದ್ದೇಶ ಸಹಕಾರ ಸಂಘದ ವತಿಯಿಂದ ಸನ್ಮಾನಿಸಲಾಯಿತು.

ಈ ಸಂದರ್ಭ ಜಿಲ್ಲಾ ವಿಶೇಷಚೇತನರ ಸಂಘದ ಉಪಾಧ್ಯಕ್ಷರಾದ ರೇವಣ್ಣ, ತಾಲೋಕು ವಿವಿಧೋದ್ದೇಶ ಕಾರ್ಯಕರ್ತರಾದ ರಾಜೇಶ್ ಹಾಗೂ ಕೊಡಗು ರಕ್ಷಣಾ ವೇದಿಕೆಯ ಸಮಾಜ ಸೇವಕರಾದ ರವಿಪಾಪು ಸೇರಿದಂತೆ ವಿಶೇಷಚೇತನರ ವಿವಿಧೋದ್ದೇಶ ಸಹಕಾರ ಸಂಘದ, ಉಪಾಧ್ಯಕ್ಷರು, ನಿರ್ದೇಶಕರುಗಳು, ಸರ್ವ ಸದಸ್ಯರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕರಾದ ಹೇಮಾವತಿ ಪ್ರಾರ್ಥಿಸಿ, ಸಂಘದ ನಿರ್ದೇಶಕ ಹರೀಶ್ ಎನ್.ಎಂ ವಂದಿಸಿದರು.