ವೀರಾಜಪೇಟೆ, ಅ. ೬ : ವೀರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಟೋಳಿ ಕಾಲೋನಿ ನಿವಾಸಿ ಹೆಚ್.ಎ. ಪ್ರಕಾಶ್ ಎಂಬವರ ಪತ್ನಿ ಹೆಚ್.ಪಿ. ಆಶಾ (೨೯) ಸಂಘದ ಹಣ ನೀಡಿ ಬರುತ್ತೇನೆ ಎಂದು ಪತಿಗೆ ಹೇಳಿ ಮನೆಯಿಂದ ತೆರಳಿದವರು ನಾಪತ್ತೆಯಾಗಿರುವುದಾಗಿ ವೀರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆಶಾ ಕನ್ನಡ, ಕೊಡವ ಭಾಷೆ ಬಲ್ಲವರಾಗಿದ್ದು. ಕಪುö್ಪ ಮೈಬಣ್ಣ ಹೊಂದಿದ್ದಾರೆ. ೧೦ನೇ ತರಗತಿವರೆಗೆ ಓದಿದ್ದು ಓದು ಬರಹ ತಿಳಿದಿರುತ್ತದೆ. ಕಾಣೆಯಾದವರ ಬಗ್ಗೆ ತಿಳಿದು ಬಂದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ಮತ್ತು ವೀರಾಜಪೇಟೆ ನಗರ ಠಾಣೆ: ೦೮೨೭೪-೨೫೭೩೩೩, ವೀರಾಜಪೇಟೆ ಉಪ ಅಧಿಕ್ಷಕರು : ೦೮೨೭೪-೨೫೭೪೮೮, ವೃತ್ತ ನಿರೀಕ್ಷಕರು : ೦೮೨೭೪-೨೫೬೪೬೨ ಹಾಗೂ ಪೊಲೀಸ್ ಅಧೀಕ್ಷಕರು ಕೊಡಗು ಜಿಲ್ಲೆ: ೦೮೨೭೨-೨೨೯೦೦೦ ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸುವAತೆ ಪೊಲೀಸ್ ಇಲಾಖೆಯ ಪ್ರಕಟಣೆಯಲ್ಲಿ ತಿಳಿಸಿದೆ.