ಶನಿವಾರಸಂತೆ, ಅ. ೬: ಪೋಷಕರು ಮಕ್ಕಳ ಭವಿಷ್ಯ ಜೀವನದ ವಿಚಾರವಾಗಿ ಗಮನಹರಿಸಿ, ಅತಿಯಾದ ನಂಬಿಕೆ ಬಿಟ್ಟು ಹೊಣೆಯರಿತು ನಡೆಯಬೇಕು ಎಂದು ಹೊಸೂರು ಜುಮ್ಮಾ ಮಸೀದಿಯ ಧರ್ಮಗುರು ಜನಾಬ್ ಶಾಫಿ ಸಅದಿ ಕರೆ ನೀಡಿದರು.

ಪಟ್ಟಣದ ನಂದೀಶ್ವರ ಕಲ್ಯಾಣ ಮಂಟಪದಲ್ಲಿ ಮಿಲಾದ್ ಸಮಿತಿ ವತಿಯಿಂದ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಧಾರ್ಮಿಕ ಪ್ರವಚನ ಕಾಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು. ಧರ್ಮಗಳು ತೋರಿಕೆಗೆ ಆಗದೇ ಆಚರಣೆಗಾಗಿ ಇರಬೇಕು. ಅನ್ಯರ ಸೊತ್ತನ್ನು ಅನುಮತಿಯಿಲ್ಲದೆ ಉಪಯೋಗಿಸಬಾರದು. ಮನುಷ್ಯರ ಗುಣನಡತೆಗಳು ಚೆನ್ನಾಗಿರಬೇಕು. ಮುಗುಳ್ನಕ್ಕರೆ ಅದೇ ದಾನವಾಗಿದ್ದು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಶ್ರೀ ವಿಘ್ನೇಶ್ವರ ಬಾಲಿಕಾ ವಿದ್ಯಾಸಂಸ್ಥೆ ಶಿಕ್ಷಕ ಕೆ.ಪಿ. ಜಯಕುಮಾರ್, ವೀರಶೈವ ಸಮಾಜದ ಅಧ್ಯಕ್ಷ ಹಾಲಪ್ಪ, ಹಾಸನ ಬಾರ್ ಲೈನ್ ಮಸೀದಿಯ ಧರ್ಮಗುರುಗಳಾದ ಮುಫ್ತಿ ಜುಬೇರ್ ಸಾಬ್ ಹಾಗೂ ಹಾಫೀಜ್ ನಜೀರ್ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಶನಿವಾರಸಂತೆ ಜಾಮೀಯ ಮಸೀದಿ ಧರ್ಮಗುರು ಮಹಮ್ಮದ್ ಫಯಾಜ್ ಮೌಝಾನ್, ಪ್ರಮುಖರಾದ ಅನ್ವರ್ ಸಾಬ್, ಚಾಂದ್ ಪಾಷ ಹಾಗೂ ರಾಜ್ಯಮಟ್ಟದ ಕ್ರೀಡಾಕೂಟದಲ್ಲಿ ಕಂಚಿನ ಪದಕ ಗಳಿಸಿದ ಮಹಮ್ಮದ್ ಕೈಫ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಜಾಮೀಯ ಮಸೀದಿ ಅಧ್ಯಕ್ಷ ರಿಶಾಲತ್ ಪಾಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಂದೀಶ್ವರ ಕಲ್ಯಾಣ ಮಂಟಪದ ಮಾಲೀಕ ನೀಲಕಂಠಪ್ಪ ಲಾಯರ್, ಗುಡುಗಳಲೆ ಜುಮ್ಮಾ ಮಸೀದಿ ಅಧ್ಯಕ್ಷ ಕೆ.ಎಂ. ಮುಸ್ತಾಫ್, ಹೊಸೂರು ಜುಮ್ಮಾ ಮಸೀದಿ ಅಧ್ಯಕ್ಷ ಎಚ್.ಪಿ. ಮೊಹಮ್ಮದ್, ಹ್ಯಾಂಡ್ ಪೋಸ್ಟ್ ಮಸ್ಜಿದುನ್ನೂರ್ ಅಧ್ಯಕ್ಷ ಸುಲೈಮಾನ್, ಮುಖಂಡ ಅಕ್ಮಲ್ ಪಾಷ, ಉಪನ್ಯಾಸಕ ಇಲಿಯಾಸ್, ಮಿಲಾದ್ ಸಮಿತಿ ಪದಾಧಿಕಾರಿಗಳಾದ ಮುದಾಸಿರ್, ಯಾÃನ್ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸಾಜಿದಾ ಬಾನು ಧಾರ್ಮಿಕ ಶ್ಲೋಕ ಪಠಿಸಿದರು. ಇಲಿಯಾಸ್ ಕಾರ್ಯಕ್ರಮ ನಿರೂಪಿಸಿದರು.