ದಕ್ಷಿಣ ಗಂಗೆ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ... ಕಾವೇರಿ ಧಾರ್ಮಿಕ ಜಾತ್ರೆಗೆ ದಿನಗಣನೆ ಶುರು ಆಗಿದೆ. ಅಕ್ಟೋಬರ್ ೧೭ ರಿಂದ ನವೆಂಬರ್ ೧೬ ರವರೆಗೆ ತೊಲ್ಯಾರ್ ಚಂಗ್ರಾAದಿ ಮತ್ತು ಬಿರ್ಚ್ಯಾರ್ ಚಂಗ್ರಾAದಿ ಹೆಸರಿನ ತುಲಾ ಸಂಕ್ರಮಣ ಮತ್ತು ವೃಶ್ಚಿಕ ಸಂಕ್ರಮಣ ಹಬ್ಬ ಪರಂಪರೆಯ ಧಾರ್ಮಿಕ ಸಂಪ್ರದಾಯದಲ್ಲಿ ನಡೆಯಲಿದೆ. ಈ ಸಂದರ್ಭ... ಭಕ್ತಾದಿಗಳಿಗೆ ಎಲ್ಲಾ ಸೌಕರ್ಯಗಳೂ ಸೇರಿದಂತೆ, ಮುಕ್ತವಾದ ಧಾರ್ಮಿಕ ವಾತಾವರಣದಲ್ಲಿ ಕಾವೇರಿಜಾತ್ರೆ ನಡೆಯುವಂತಾಗಬೇಕೆAದು ೨೭.೯.೨೦೨೩ ರಂದು ಭಾಗಮಂಡಲದಲ್ಲಿ ಕ್ಷೇತ್ರ ಶಾಸಕರ ಅಧ್ಯಕ್ಷತೆಯಲ್ಲಿ ನಡೆದ ಸಾರ್ವಜನಿಕ ಭಕ್ತಾದಿಗಳ ಸಭೆಯಲ್ಲಿ ತೀರ್ಮಾನಿಸಿರುವುದು ಸ್ವಾಗತಾರ್ಹವಾಗಿದೆ.

ಪುಣ್ಯ ತೀರ್ಥೋದ್ಭವದಂತಹ ಅಪರೂಪದ ಧಾರ್ಮಿಕ ಉತ್ಸವಕ್ಕೆ ಈ ಬಾರಿ ಹಿಂದೆAದಿಗಿAತ ಹೆಚ್ಚಿನ ಮಹತ್ವ ನೀಡಬೇಕಾಗಿದೆ. ಪ್ರಸಕ್ತ ವರ್ಷ ಮಳೆಯ ಪ್ರಮಾಣ ತೀರಾ ಕಡಿಮೆ ಆದುದರ ಫಲವಾಗಿ ಕಾವೇರಿ ನದಿಯಲ್ಲಿ ನೀರಿನ ಹರಿವು ಬಹಳಷ್ಟು ಕುಸಿದಿದೆ. ತತ್‌ಫಲವಾಗಿ ಕರ್ನಾಟಕದಿಂದ ತಮಿಳುನಾಡಿಗೆ ಹರಿಸಬೇಕಾಗಿರುವ ನೀರಿನ ಪ್ರಮಾಣವೂ ತಗ್ಗಿದ್ದು, ವ್ಯಾಜ್ಯಕ್ಕೆ ನಾಂದಿಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಜಲ ವಿವಾದ ಇತ್ತೀಚೆಗೆ ಮಗದೊಮ್ಮೆ ಉಲ್ಬಣಿಸಿದೆ.

ಹೀಗಿರುವಲ್ಲಿ, ಇದಕ್ಕೆ ಧಾರ್ಮಿಕ ರೂಪದ ಪರಿಹಾರ ಸಾಧ್ಯವಾಗಬಹುದೇ ಎಂಬುದನ್ನು ಒರೆ ಹಚ್ಚಲು ಇದೀಗ ಸಕಾಲವಾಗಿದೆ. ದಿವ್ಯಸ್ತಿçà ರೂಪದಲ್ಲಿದ್ದ ಕಾವೇರಿ... ಜಲರೂಪಿಣಿ ಆಗಿ ಹರಿದುದೇ ಲೋಕೋಪಕಾರಕ್ಕಾಗಿ. ಈ ರೀತಿ ಕಾವೇರಿ ನದಿಯಾಗಿ, ಹರಿಯುವ ಕ್ಷಣದಲ್ಲಿ... ನನ್ನನ್ನು ಭಕ್ತಿಯಿಂದ ನಂಬಿದವರ ಕೈ ಬಿಡೆನು ಎಂಬರ್ಥದ ಅಭಯವನ್ನು ಸ್ಥಳೀಯ ಭಕ್ತರಿಗೆ ನೀಡಿದಳು ಎಂಬುದು ಪೌರಾಣಿಕ ಐತಿಹ್ಯ. ಈಗ ನಾಡಿಗೆ ಜಲಸಂಕಷ್ಟ ಬಂದಿರುವಲ್ಲಿ... ಶ್ರೀ ದೇವಿಯ ಕೃಪಾಕಟಾಕ್ಷ ಬೇಡುವುದು ಸಮಂಜಸ ಆದೀತು ಎಂಬದು ಕೆಲವು ಭಕ್ತರ ಅನಿಸಿಕೆ.

ಇದಕ್ಕೆ ಅನುಗುಣವಾದ ಧಾರ್ಮಿಕ ವಿಧಿ ವಿಧಾನದಲ್ಲಿ ತೀರ್ಥೋದ್ಭವದ ಪರಮಪುಣ್ಯ ಸಂದರ್ಭದಲ್ಲಿ ನಾಡಿನ ಮುಖ್ಯಸ್ಥರು, ಆಡಳಿತ ವರ್ಗದವರು, ಇತರೇ ಹಿರಿಯ ಭಕ್ತರು ಒಂದಾಗಿ ಒಗ್ಗಟ್ಟಿನಲ್ಲಿ ತಲಕಾವೇರಿಯಲ್ಲಿ ಕಲೆತು, ದೃಢ ಸಂಕಲ್ಪದೊAದಿಗೆ ಶ್ರೀ ಕಾವೇರಿ ಮಾತೆಯನ್ನು ಭಕ್ತಿಯಿಂದ ನಮಿಸಿ, ಪೂಜಿಸಿ ಸಂತೃಪ್ತಿಗೊಳಿಸಿ, ನಾಡಿನ ಪರವಾದ ಬೇಡಿಕೆಯನ್ನು ಸಾಮೂಹಿಕವಾಗಿ ಶ್ರೀ ದೇವಿಯ ಪಾದತಳಗಳಿಗೆ ಅರ್ಪಣೆ ಮಾಡಿದುದಲ್ಲಿ... ಶ್ರೀಮಾತೆ ಖಂಡಿತಾ ಒಲಿದು ಜಲಸಂಕಷ್ಟದಿAದ ನಾಡನ್ನು ಪಾರು ಮಾಡಬಲ್ಲಳು ಎಂಬುದು ಹಿರಿಯ ಭಕ್ತರ ಅಚಲ ವಿಶ್ವಾಸ ಆಗಿದೆ. ನಾಡಿನ ಹಿತದೃಷ್ಟಿಯಿಂದ ಇದಕ್ಕಿರುವ ಸಕಲ ವ್ಯವಸ್ಥೆಯನ್ನು ಶ್ರದ್ಧಾಭಕ್ತಿಯಿಂದ ಸಂಬAಧಿಸಿದವರು ಏರ್ಪಡಿಸುವುದು ಉತ್ತಮವಾದೀತು.

ಕಾವೇರಿ ಕ್ಷೇತ್ರ... ಸುಧಾರಣೆ ಕಾರ್ಯ

ಪವಿತ್ರ ಕಾವೇರಿ ಸಂಕ್ರಮಣ ಹಬ್ಬ... ಕಾವೇರಿ ಪುಣ್ಯಜಾತ್ರೆಯ ಸಂದರ್ಭದಲ್ಲಿ ಸ್ಥಳೀಯವಾಗಿ ಕೈಗೊಳ್ಳಬೇಕಾದ ಕೆಲವು ಸುಧಾರಣಾ ಕಾರ್ಯಗಳು ಹೀಗಿವೆ:

v ಭಾಗಮಂಡಲ ಪಟ್ಟಣ ಪ್ರದೇಶದಲ್ಲಿ ಮಧು - ಮಾಂಸ ಮಾರಾಟ ಕ್ರ‍್ರಿಯೆಯನ್ನು (ಮಾಂಸ, ಮೀನು, ಸಾರಾಯಿ, ಬ್ರಾಂಡಿ ಇತ್ಯಾದಿ) ಆ ಸಂದರ್ಭದಲ್ಲಿ ನಿಷೇಧಿಸುವುದು.

v ತ್ರಿವೇಣಿ ಸಂಗಮ, ವಾಹನ ನಿಲುಗಡೆ ಕೇಂದ್ರ, ಟಾಯ್ಲೆಟ್ ಏರಿಯಾ, ಮೇಲ್‌ಸೇತುವೆ ಕಾಮಗಾರಿ ಸ್ಥಳಗಳನ್ನು ಶುದ್ಧಮುದ್ರಿಕೆಯಲ್ಲಿ ಕಾಪಾಡುವುದು.

v ಭಾಗಮಂಡಲ ಕಾವೇರಿ ನದಿ ದಂಡೆಗಳಲ್ಲಿ ಹೊರಗಿನ ಪ್ರವಾಸಿ ಜನರೂ ಸೇರಿದಂತೆ ಯಾರೂ ಬಟ್ಟೆ ಒಗೆಯದಂತೆ, ಈಜದಂತೆ, ಜಲದಾಟ ಆಡದಂತೆ ಎಚ್ಚರ ವಹಿಸುವುದು.

v ತ್ರಿವೇಣಿ ಸಂಗಮದ ಹೊಳೆ ಹರಿವ ನೀರಿನ ಮಟ್ಟವನ್ನು ಮೂರುವರೆ ಅಡಿಗಳಿಗೊಳಪಟ್ಟಂತೆ ಸೀಮಿತಗೊಳಿಸುವುದು.

v ಪಿಂಡ ಪ್ರದಾನದ ವಸ್ತುಗಳ ಮಾರಾಟ ಮಾಡುವುದು; ದರ ಸೂಚನೆಯ ಫಲಕವನ್ನು ಪ್ರದರ್ಶಿಸುವಂತೆ ಹಾಕುವುದು. ಹೊಳೆಯ ಒಂದು ಬದಿಯಲ್ಲಿ ಮಾತ್ರ ಈ ಏರ್ಪಾಡು ಮಾಡುವುದು. ಪಿಂಡ ಪ್ರದಾನ ಕಾರ್ಯ ನಡೆಸುವ ಅರ್ಚಕ ವರ್ಗದವರಿಗೆ ಮಳೆ ಬಿಸಿಲಿನ ರಕ್ಷಣೆ ಒದಗಿಸುವುದು.

v ಭಾಗಮಂಡಲ - ತಲಕಾವೇರಿ ದೇವಸ್ಥಾನದಲ್ಲಿ ಭಕ್ತರು ದೇವರಿಗೆ ಒಪ್ಪಿಸುವ ಹಣ್ಣು, ಕಾಯಿ, ಕರ್ಪೂರ, ಗಂಧದಕಡ್ಡಿ, ಪುಷ್ಪ ಇತ್ಯಾದಿಗಳು ದೇವರ ನಡೆಯಲ್ಲಿಯೇ ‘‘ಅರ್ಪಣೆ’’ ಆಗಬೇಕಲ್ಲದೆ, ಪರಸ್ಥಳದಲ್ಲಿ ಅಲ್ಲ.

v ಬ್ರಹ್ಮಗಿರಿ ಶಿಖರದ ಭದ್ರತೆಯ ಹಿನ್ನೆಲೆಯಲ್ಲಿ... ಬೆಟ್ಟ ಹತ್ತುವುದನ್ನು ಸಂಪೂರ್ಣ ನಿಷೇಧಿಸುವುದು.

v ತಲಕಾವೇರಿಯಲ್ಲಿ ಭಕ್ತಾದಿಗಳ ಭಕ್ತಿಯ ಭಜನೆ, ಗಾಯನ, ಜೈಘೋಷ, ನಾಮಸ್ಮರಣೆ, ದುಡಿಕೊಟ್ಟ್ಪಾಟ್, ತಳಿಯತಕ್ಕಿ ಬೊಳ್‌ಚ... ಇತ್ಯಾದಿ ಧಾರ್ಮಿಕ ಕ್ರಿಯೆಗಳಿಗೆ ಮುಕ್ತ ಅವಕಾಶ ಕಲ್ಪಿಸುವುದು.

v ತೀರ್ಥೋದ್ಭವವಾಗುವ ವೇಳೆಯಲ್ಲಿ ಪವಿತ್ರ ಬ್ರಹ್ಮಕುಂಡಿಕೆ ಸಮೀಪದಲ್ಲಿ ರಾಜಕೀಯ ಮುಖಂಡರು, ಅರ್ಚಕ ವರ್ಗದವರು, ಇತರೇ ಜನರು ನೂಕುನುಗ್ಗಲು ಉಂಟು ಮಾಡುವುದನ್ನು ನಿಯಂತ್ರಿಸುವುದು.

v ತಲಕಾವೇರಿ ತೀರ್ಥಕುಂಡಿಕೆ ಸನಿಹದ ಉದ್ದುದ್ದ ಮೆಟ್ಟಲುಗಳಲ್ಲಿ ಹಿರಿಯ ಸ್ತಿçà ಭಕ್ತರಾದಿಯಾಗಿ ವಯಸ್ಸಾದವರು ಕುಳಿತುಕೊಂಡು, ದೇವೀ ಭಜನೆಗೆ ಅವಕಾಶ ನೀಡುವುದು.

v ತಲಕಾವೇರಿಯಲ್ಲಿ ಪುಣ್ಯ ತೀರ್ಥವನ್ನು ಪ್ರತ್ಯೇಕ ಪ್ಲಾಸ್ಟಿಕ್ ಪೀಪಾಯಿಗಳಲ್ಲಿ ಭರ್ತಿ ಮಾಡಿ, ಹೊರಗಿಟ್ಟು ಭಕ್ತರಿಗೆ ವಿತರಿಸುವ ಕ್ರಮವನ್ನು ಕೈಬಿಟ್ಟು, ಪವಿತ್ರ ಕುಂಡಿಕೆಯಿAದಲೇ ನೀಡುವಂತೆ ಕ್ರಮ ವಹಿಸುವುದು. ಕೊಂಚ ತಡವಾದರೂ, ಮೂಲದಿಂದಲೇ ಪುಣ್ಯತೀರ್ಥ ವಿತರಿಸುವುದು ಶ್ರೇಯಸ್ಕರ.

v ತಲಕಾವೇರಿಯ ತೀರ್ಥ ಕುಂಡಿಕೆಯ ಮೇಲ್ಭಾಗಕ್ಕೆ ಮಳೆ - ಬಿಸಿಲಿನ ಟಾರ್ಪಾಲು, ಹೊದಿಕೆ, ಶೀಟು... ಇತ್ಯಾದಿಗಳನ್ನು ಹಾಕದೇ ಮುಕ್ತವಾಗಿ ತೆರೆದಿರುವಂತೆ ಮಾಡುವುದು.

v ಪುಣ್ಯತೀರ್ಥ ಉಕ್ಕಿ ಬಂದ ಕ್ಷಣದಲ್ಲಿ... ಅರ್ಚಕ ವರ್ಗದವರು... ಕುಂಡಿಕೆಗೆ ನೇರವಾಗಿ ಕೈಗಳನ್ನು ಅದ್ದಿ, ತೀರ್ಥವನ್ನು ಸೇವಿಸಿ ‘‘ಎಂಜಲು’’ ಮಾಡುವ ಕ್ರಿಯೆಯನ್ನು ನಿಲ್ಲಿಸುವುದು.

v ತಲಕಾವೇರಿಯಲ್ಲಿ ಹಿಂದಿನ ಧಾರ್ಮಿಕ ಕ್ರಮದಂತೆ ಮೊದಲಿಗೆ ಶ್ರೀ ಕಾವೇರಿ ದೇವಿಯ ತೀರ್ಥದರ್ಶನ, ಬಳಿಕ ಮೇಲ್‌ಭಾಗದ ದೇವರು - ದೇವಸ್ಥಾನಗಳ ದರ್ಶನ ಮಾಡುವಂತಹ ಹಳೆಯ ಸಂಪ್ರದಾಯವನ್ನು ಮುಂದುವರಿಸುವುದು.

v ತಲಕಾವೇರಿಯ ಸ್ನಾನದ ಕೊಳದ ನೀರಿನ ಮಟ್ಟವೂ ಮೂರುವರೆ ಅಡಿಗಳಿಗೊಳಪಟ್ಟಂತೆ ಇರುವಂತೆ ಏರ್ಪಡಿಸುವುದು.

v ಭಾಗಮಂಡಲ - ತಲಕಾವೇರಿ ಕೇಂದ್ರದಲ್ಲಿ ಪೊಲೀಸರು ಭಕ್ತಾದಿಗಳೊಡನೆ ಸೌಜನ್ಯತೆಯಿಂದ ಜನಮುಖಿ ಆಗಿ, ಸಹಾಯಕರಂತೆ ವರ್ತಿಸಲು ಅಗತ್ಯ ನಿರ್ದೇಶನ ನೀಡುವುದು.

ಹೀಗೆ ಭಯ - ಭಕ್ತಿ, ನಂಬಿಕೆ - ವಿಶ್ವಾಸ, ಶುದ್ಧ - ಮುದ್ರಿಕೆಯಲ್ಲಿ ಪವಿತ್ರ ಕಾವೇರಿ ಹಬ್ಬವು... ಪುಣ್ಯ ಧಾರ್ಮಿಕ ಜಾತ್ರೆಯೂ ನಡೆದು, ನಾಡಿಗೆ ಸನ್ಮಂಗಳ ಆಗಲಿ ಎಂದು ಹಾರೈಸೋಣ.

- ಉಳ್ಳಿಯಡ ಎಂ. ಪೂವಯ್ಯ, ಮಡಿಕೇರಿ. ಮೊ. ೯೪೪೮೭೨೦೧೬೮