ವೀರಾಜಪೇಟೆ, ಅ. ೬: ಸಂಗೀತ ಮತ್ತು ನೃತ್ಯ ಎಂಥವರನ್ನೂ ಸೆಳೆಯಬಲ್ಲ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ವರಾರ್ಣವ ಸಂಗೀತ ಶಾಲೆಯ ವಿದ್ವಾನ್ ದಿಲಿಕುಮಾರ್ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬಾಲಾಂಜನೇಯ ದೇವಾಸ್ಥಾನದ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಛದ್ಮವೇಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತ, ಸದಭಿರುಚಿ ಸಾಹಿತ್ಯದ ಅಭ್ಯಾಸದಿಂದ ಉತ್ತಮ ಸಂಸ್ಕಾರ ನಿರ್ಮಾಣ ಸಾಧ್ಯ. ನಮ್ಮ ನಾಡಿನಲ್ಲಿ ಶ್ರೇಷ್ಠ ಸಾಂಸ್ಕöÈತಿಕ ಪರಂಪರೆಯನ್ನು ಕಾಣುತ್ತೇವೆ. ಸಂಗೀತ ಮತ್ತು ನೃತ್ಯ ಶಾಲೆ, ಶ್ರೇಷ್ಠ ಸಂಸ್ಕöÈತಿ ಮತ್ತು ಸಂಪ್ರದಾಯದ ಸಂಕೇತವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾಹಿತಿಗಳಾದ ಪುಷ್ಪಲತಾ ಶಿವಪ್ಪ ಅವರು, ವಿದ್ಯಾರ್ಥಿಗಳು ರಾಮಾಯಣ ಮಹಾಭಾರತದಂತಹ ಕಾವ್ಯಗಳನ್ನು ಹೆಚ್ಚಾಗಿ ಓದಿ ಅದರಲ್ಲಿರುವ ತತ್ವಸಾರವನ್ನು ತಿಳಿದು ತಮ್ಮ ವೀರಾಜಪೇಟೆ, ಅ. ೬: ಸಂಗೀತ ಮತ್ತು ನೃತ್ಯ ಎಂಥವರನ್ನೂ ಸೆಳೆಯಬಲ್ಲ ಮಾಂತ್ರಿಕ ಶಕ್ತಿಯನ್ನು ಹೊಂದಿದೆ ಎಂದು ಸ್ವರಾರ್ಣವ ಸಂಗೀತ ಶಾಲೆಯ ವಿದ್ವಾನ್ ದಿಲಿಕುಮಾರ್ ಅಭಿಪ್ರಾಯಪಟ್ಟರು.
ವೀರಾಜಪೇಟೆಯ ನಾಟ್ಯ ಮಯೂರಿ ನೃತ್ಯ ಶಾಲೆಯ ವತಿಯಿಂದ ಬಾಲಾಂಜನೇಯ ದೇವಾಸ್ಥಾನದ ಸಭಾಂಗಣದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಛದ್ಮವೇಷ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಸಂಗೀತ, ಸದಭಿರುಚಿ ಸಾಹಿತ್ಯದ ಅಭ್ಯಾಸದಿಂದ ಉತ್ತಮ ಸಂಸ್ಕಾರ ನಿರ್ಮಾಣ ಸಾಧ್ಯ. ನಮ್ಮ ನಾಡಿನಲ್ಲಿ ಶ್ರೇಷ್ಠ ಸಾಂಸ್ಕöÈತಿಕ ಪರಂಪರೆಯನ್ನು ಕಾಣುತ್ತೇವೆ. ಸಂಗೀತ ಮತ್ತು ನೃತ್ಯ ಶಾಲೆ, ಶ್ರೇಷ್ಠ ಸಂಸ್ಕöÈತಿ ಮತ್ತು ಸಂಪ್ರದಾಯದ ಸಂಕೇತವಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಸಾಹಿತಿಗಳಾದ ಪುಷ್ಪಲತಾ ಶಿವಪ್ಪ ಅವರು, ವಿದ್ಯಾರ್ಥಿಗಳು ರಾಮಾಯಣ ಮಹಾಭಾರತದಂತಹ ಕಾವ್ಯಗಳನ್ನು ಹೆಚ್ಚಾಗಿ ಓದಿ ಅದರಲ್ಲಿರುವ ತತ್ವಸಾರವನ್ನು ತಿಳಿದು ತಮ್ಮ ಶ್ರೀಕೃಷ್ಣ ಹೇಳಿರುವ ವಿಚಾರಗಳು ಪ್ರಸ್ತುತ, ಕೃಷ್ಣನ ಬದುಕಿನ ಕಥೆಗಳು ನಮ್ಮ ಜೀವನಕ್ಕೂ ಪ್ರೇರಣೆ ಎಂದು ಶ್ರೀ ಕೃಷ್ಣನ ಜನ್ಮದಿನದ ವಿಶೇಷತೆ ಮತ್ತು ಹಿನ್ನೆಲೆಯ ಕುರಿತು ವಿವರಿಸಿದರು.
ಇದೇ ಸಂದರ್ಭ ನೃತ್ಯ ಶಾಲೆಯ ವಿದ್ಯಾರ್ಥಿಗಳ ಪೋಷಕರಿಗೆ ರಸಪ್ರಶ್ನೆ ಸ್ಪರ್ಧೆ ಏರ್ಪಡಿಸಲಾಗಿತ್ತು. ಶಿಕ್ಷಕರಾದ ಲವಿನ್ ಲೋಪೇಸ್ ಹಾಗೂ ಸಾಹಿತಿಗಳಾದ ರಜಿತ ಕಾರ್ಯಪ್ಪ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸಿದರು.
ಶ್ರೀ ಕೃಷ್ಣ ಜನ್ಮಾಷ್ಟಮಿಯಂದು ಮಕ್ಕಳು ಮುದ್ದು ಕೃಷ್ಣ ಮತ್ತು ಗೋಪಿಕೆಯರ ವೇಷದಲ್ಲಿ ಕಂಗೊಳಿಸಿದರು ಮತ್ತು ಶ್ರೀ ಕೃಷ್ಣನ ವಿವಿಧ ಸನ್ನಿವೇಶಗಳನ್ನೊಳಗೊಂಡ ನೃತ್ಯ ಪ್ರದರ್ಶನವನ್ನು ನೀಡಿದರು.
ವೇದಿಕೆಯಲ್ಲಿ ಟ್ರಸ್ಟಿಗಳಾದ ಲವಿನ್ ಲೋಪೆಸ್ ಹಾಗೂ ದೀಪಕ್ ಉಪಸ್ಥಿತರಿದ್ದು, ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಪೋಷಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.