ಪೊನ್ನಂಪೇಟೆ, ಅ. ೬: ಶ್ರೀ ಕಾವೇರಿ ದಸರಾ ಸಮಿತಿಯ ಮಕ್ಕಳ ದಸರಾ ಕಾರ್ಯಕ್ರಮ ಕಾವೇರಿ ಕಲಾ ವೇದಿಕೆಯಲ್ಲಿ ತಾ. ೨೦ ರಂದು ಶ್ರೀ ಕಾವೇರಿ ದಸರಾ ಸಮಿತಿಯ ವೇದಿಕೆಯಲ್ಲಿ ನಡೆಯಲಿವೆ ಎಂದು ಮಕ್ಕಳ ದಸರಾ ಅಧ್ಯಕ್ಷ ತಿರುನೆಲ್ಲಿಮಡ ಜೀವನ್ ತಿಳಿಸಿದ್ದಾರೆ. ಈ ಸಂದರ್ಭ ಶ್ರೀ ಕಾವೇರಿ ದಸರಾ ಸಮಿತಿ ಅಧ್ಯಕ್ಷ ಕುಲ್ಲಚಂಡ ಪ್ರಮೋದ್ ಗಣಪತಿ, ಖಜಾಂಚಿ ದ್ಯಾನ್ ಸುಬ್ಬಯ್ಯ, ಮಕ್ಕಳ ದಸರಾ ಸಮಿತಿ ಕಾರ್ಯದರ್ಶಿ ವಾಮನ, ಖಜಾಂಚಿ ಶೀಲಾ ಬೋಪಣ್ಣ ಇದ್ದರು.
ಕಾರ್ಯಕ್ರಮದ ಸ್ಪರ್ಧೆಗಳು ವೈಯಕ್ತಿಕ ವಿಭಾಗ : ರಂಗೋಲಿ ಸ್ಪರ್ಧೆ (ಚುಕ್ಕಿ ರಂಗೋಲಿ) ೧ ರಿಂದ ೫ನೇ ತರಗತಿ, ೬ ರಿಂದ ೮ನೇ ತರಗತಿ, ೯ ರಿಂದ ೧೦ನೇ ತರಗತಿ, ಸಮಯ ಬೆಳಿಗ್ಗೆ ೧೦ ರಿಂದ ೧೧.೩೦ ರವರೆಗೆ ನಡೆಯಲಿದೆ. ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆ ಗಿರಿಜಾ- ೯೪೮೦೬೪೫೬೭೨ -ದಾಕ್ಷಾಯಣಿ ೮೯೭೧೨೨೭೮೯೭.
ಛದ್ಮವೇಷ ಸ್ಪರ್ಧೆ: ವಿಭಾಗ ೧ ರಿಂದ ೩ ವಯಸ್ಸು (ಕೃಷ್ಣನ ವೇಷ), ೪ ರಿಂದ ೫ ವಯಸ್ಸು (ಕೃಷ್ಣನ ವೇಷ), ೬ ರಿಂದ ೧೦ ವಯಸ್ಸು (ಪೌರಾಣಿಕ), ೧೧ ರಿಂದ ೧೫ ವಯಸ್ಸು (ಪೌರಾಣಿಕ), ಸಮಯ ಸಂಜೆ ೫ ಗಂಟೆಗೆ ಸಂಪರ್ಕಿಸಬೇಕಾದ ಸಂಖ್ಯೆ ರೋಸಿ- ೮೬೬೦೫೭೧೦೯೭, ಮಮತಾ ನಿಂಗರಾಜ್ ೮೪೩೧೭೬೨೫೪೩.
ಸಾಮೂಹಿಕ ವಿಭಾಗ: ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆ : (ತಂಡದಲ್ಲಿ ಇಬ್ಬರು ಮಾತ್ರ) ವಿಭಾಗ ೫ ರಿಂದ ೭ನೇ ತರಗತಿ, ೮ ರಿಂದ ೧೦ನೇ ತರಗತಿ. ಸಮಯ ಬೆಳಿಗ್ಗೆ ೧೦ ರಿಂದ ೧೧.೩೦. ಸಂಪರ್ಕಿಸ ಬೇಕಾದ ಸಂಖ್ಯೆ ಚಂದನ ಡಿ. ೯೯೮೬೯೩೯೩೫೭.
ದೇಶ ಭಕ್ತಿ ಗೀತ ಗಾಯನ ಸ್ಪರ್ಧೆ: (ತಂಡದಲ್ಲಿ ಆರು ಜನ ಇರಬೇಕು) ವಿಭಾಗ ೧ ರಿಂದ ೫ನೇ ತರಗತಿ, ೬ ರಿಂದ ೮ ನೇ ತರಗತಿ, ೯ ರಿಂದ ೧೦ ನೇ ತರಗತಿ, ಸಮಯ ಬೆಳಿಗ್ಗೆ ೧೦ ರಿಂದ ೧೧.೩೦ ರವರೆಗೆ. ಸಂಪರ್ಕಿಸಬೇಕಾದ ಸಂಖ್ಯೆ ರೋಸಿ -೮೬೬೦೫೭೧೦೯೭, ಅಲೀಮಾ ೯೭೪೧೬೬೪೧೭೩.
ಜಾನಪದ ನೃತ್ಯ ಸ್ಪರ್ಧೆ: ತಂಡದಲ್ಲಿ ಹತ್ತರಿಂದ ಹನ್ನೆರಡು ಮಕ್ಕಳು ಕಡ್ಡಾಯ. ಯಾವುದೇ ಜಾನಪದ ಹಾಡಿಗೆ ನೃತ್ಯವನ್ನು ಮಾಡ ಬಹುದು. ವಿಭಾಗ ೧ ರಿಂದ ೫ನೇ ತರಗತಿ, ೬ ರಿಂದ ೧೦ನೇ ತರಗತಿ, ಸಮಯ ಅಪರಾಹ್ನ ೨ ಗಂಟೆಗೆ. ಸಂಪರ್ಕಿಸಬೇಕಾದ ಸಂಖ್ಯೆ ಲೀನಾ ರಾಘವೇಂದ್ರ- ೯೪೪೯೩೧೦೨೪೯, ಟಿ.ಕೆ. ವಾಮನ ೭೬೧೯೨೭೦೫೨೯.
ಸಿನಿಮಾ ಹಾಡಿಗೆ ನೃತ್ಯ ಸ್ಪರ್ಧೆ: ತಂಡದಲ್ಲಿ ಹತ್ತರಿಂದ ಹನ್ನೆರಡು ಮಕ್ಕಳು ಇರಬೇಕು. ಯಾವುದೇ ಭಾಷೆಯನ್ನು ಆಯ್ಕೆ ಮಾಡಿ ಕೊಳ್ಳಬಹುದು. ಸಮಯ ಸಂಜೆ ೩ ಗಂಟೆಗೆ. ಸಂಪರ್ಕಿಸಬೇಕಾದ ಸಂಖ್ಯೆ ವಾಮನ ೭೬೧೯೨೭೦೫೨೯, ಲೀನಾ ರಾಘವೇಂದ್ರ ೯೪೪೯೩೧೦೨೪೯.
ಮಕ್ಕಳ ದಸರಾ ಉದ್ಘಾಟನೆ ಮತ್ತು ಚಿತ್ರಕಲೆ ಸ್ಪರ್ಧೆ ಗೋಣಿಕೊಪ್ಪ ಸ್ವಾತಂತ್ರö್ಯ ಹೋರಾಟಗಾರರ ಭವನದಲ್ಲಿ ನಡೆಯಲಿದೆ. ಚಿತ್ರ ಕಲೆ ವಿಷಯ ನಮ್ಮ ದಸರಾ. ವಿಭಾಗ ೧ ರಿಂದ ೫ನೇ ತರಗತಿ, ೬ ರಿಂದ ೮ನೇ ತರಗತಿ, ೯ ರಿಂದ ೧೦ನೇ ತರಗತಿ. ಸಮಯ ಬೆಳಿಗ್ಗೆ ೧೦ ರಿಂದ ೧೧.೩೦. ಸಂಪರ್ಕಿಸಬೇಕಾದ ಸಂಖ್ಯೆ ಲೀನಾ ರಾಘವೇಂದ್ರ ೯೪೪೯೩೧೦೨೪೯.
ಹೆಚ್ಚಿನ ಮಾಹಿತಿಗಾಗಿ ತಿರುನೆಲ್ಲಿಮಡ ಜೀವನ್ ೭೩೪೯೦೬೪೮೮೬, ಟಿ.ಕೆ. ವಾಮನ ೭೬೧೯೨೭೦೫೨೯, ಮನೆಯಪಂಡ ಶೀಲಾ ಬೋಪಣ್ಣ ೯೯೪೫೭೯೪೪೧೪ ಈ ಸಂಖ್ಯೆಗಳನ್ನು ಸಂಪರ್ಕಿಸ ಬಹುದು. ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವವರು ದಿನಾಂಕ. ೧೨.೧೦.೨೦೨೩ ರ ಒಳಗಾಗಿ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಬಹುದಾಗಿದೆ.