ಸಿಕ್ಕಿಂ - ಸಾವಿನ ಸಂಖ್ಯೆ ೪೦ಕ್ಕೂ ಹೆಚ್ಚು
ಸಿಕ್ಕಿಂ, ಅ. ೬: ಈಶಾನ್ಯ ರಾಜ್ಯ ಸಿಕ್ಕಿಂನಲ್ಲಿ ಮೇಘಸ್ಪೋಟ ಹಾಗೂ ಹಠಾತ್ ಪ್ರವಾಹದಿಂದಾಗಿ ಕನಿಷ್ಟ ೪೦ ಜನರು ಸಾವನ್ನಪ್ಪಿದ್ದು, ಸಂಕಷ್ಟಕ್ಕೆ ಸಿಲುಕಿರುವ ಸಾವಿರಾರು ಜನರನ್ನು ಹೆಲಿಕಾಪ್ಟರ್ ಮೂಲಕ ರಕ್ಷಿಸಲು ಸೇನೆ ವ್ಯವಸ್ಥೆ ಮಾಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚೀನಾ ಮತ್ತು ನೇಪಾಳದೊಂದಿಗಿನ ಭಾರತದ ಗಡಿಯ ಸಮೀಪವಿರುವ ಪರ್ವತದಲ್ಲಿನ ಬೃಹತ್ ನೀರ್ಗಲ್ಲು ಒಡೆದ ನಂತರ ಸಿಕ್ಕಿಂನಲ್ಲಿ ಪ್ರವಾಹ ಉಂಟಾಗಿದ್ದು, ಅಪಾರ ಪ್ರಮಾಣದಲ್ಲಿ ಸಾವು, ನೋವು, ಆಸ್ತಿ ಪಾಸ್ತಿ ನಷ್ಟ ಸಂಭವಿಸಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಮಂಜುಗಡ್ಡೆ ಕರಗಿದಂತೆ ಹಿಮಾಲಯದಾದ್ಯಂತ ಹೆಚ್ಚಾಗುತ್ತಿರುವುದು ಅಪಾಯಕಾರಿಯಾಗಿದೆ ಎಂದು ಹವಾಮಾನ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ರಕ್ಷಣಾ ತಂಡಗಳು ಕಾರ್ಯಾಚರಣೆ ನಡೆಸಿ, ರಾತ್ರೋರಾತ್ರಿ ಹೆಚ್ಚಿನ ಮೃತದೇಹಗಳನ್ನು ಹೊರತೆಗೆದಿದ್ದಾರೆ. ೧೯ ಜನರ ಸಾವನ್ನು ತಮ್ಮ ಕಚೇರಿಗೆ ದೃಢಪಡಿಸಿದೆ ಎಂದು ಸಿಕ್ಕಿಂ ರಾಜ್ಯದ ಉನ್ನತಾಧಿಕಾರಿ ವಿಬಿ ಪಾಠಕ್ ಎಎಫ್ಪಿಗೆ ತಿಳಿಸಿದ್ದಾರೆ. ಕಳೆದ ಮೂರು ದಿನಗಳಲ್ಲಿ ತಮ್ಮ ರಾಜ್ಯದಲ್ಲಿ ಹೆಚ್ಚುವರಿ ೨೧ ಶವಗಳನ್ನು ವಶಪಡಿಸಿಕೊಳ್ಳಲಾಗಿದೆ ನೆರೆಯ ಪಶ್ಚಿಮ ಬಂಗಾಳದ ಜಿಲ್ಲಾ ಮ್ಯಾಜಿಸ್ಟೆçÃಟ್ ಶಮಾ ಪರ್ವೀನ್ ತಿಳಿಸಿದ್ದಾರೆ. ರಾಜ್ಯದಾದ್ಯಂತ ರಸ್ತೆಗಳು, ಸೇತುವೆಗಳು ಮತ್ತು ಟೆಲಿಫೋನ್ ಲೈನ್ಗಳು ನಾಶವಾಗಿವೆ, ಸ್ಥಳಾಂತರಗೊಳಿಸುವಿಕೆ ಮತ್ತು ದೇಶದ ಉಳಿದ ಭಾಗಗಳಿಂದ ಸಂಪರ್ಕ ಕಡಿತಗೊಂಡ ಸಾವಿರಾರು ಜನರೊಂದಿಗೆ ಸಂವಹನ ನಡೆಸುವ ಪ್ರಯತ್ನ ನಡೆಯುತ್ತಿದೆ.
‘ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿAದ ಹಣ ಬಿಡುಗಡೆಯಾಗಿಲ್ಲ’
ಚಿತ್ರದುರ್ಗ, ಅ. ೬: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರ ಒಂದೇ ಒಂದು ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೇಂದ್ರ ಸರ್ಕಾರ ಹಾಗೂ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಭದ್ರಾ ಮೇಲ್ದಂಡೆಯನ್ನು ರಾಷ್ಟಿçÃಯ ಯೋಜನೆ ಎಂದು ಘೋಷಿಸಿ ೫,೩೦೦ ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ದೊಡ್ಡದಾಗಿ ಹೇಳಿಕೊಂಡಿದ್ದರು. ಈ ನಿಟ್ಟಿನಲ್ಲಿ ಇಲ್ಲಿಯವರೆಗೆ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದರು. ಈ ಸಂಬAಧ ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ನಮ್ಮ ಸಚಿವರು ಸಂಬAಧಪಟ್ಟವರನ್ನು ಭೇಟಿ ಮಾಡಿದ್ದು, ನಾನು ಕೂಡ ಭೇಟಿ ಮಾಡಿದ್ದೇನೆ. ಆದರೆ ಆರು ತಿಂಗಳು ಕಳೆದರೂ ಒಂದೇ ಒಂದು ರೂಪಾಯಿ ಬಿಡುಗಡೆ ಮಾಡಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಕೇಂದ್ರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ತಿಮ್ಮಕ್ಕಗೆ ಚಿಕಿತ್ಸೆ ಮುಂದುವರಿಕೆ
ಬೆAಗಳೂರು, ಅ. ೬: ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಸರ್ಕಾರದ ಪರಿಸರ ರಾಯಭಾರಿಯಾಗಿರುವ ಸಾಲು ಮರದ ತಿಮ್ಮಕ್ಕ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಅಪೋಲೊ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಸುಸ್ತು ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವ ಸಾಲು ಮರದ ತಿಮ್ಮಕ್ಕ ಅವರಿಗೆ ಶ್ವಾಸಕೋಶದ ಸಾಮರ್ಥ್ಯ ಕಡಿಮೆಯಾಗಿದೆ. ಜೊತೆಗೆ ಅಸ್ತಮಾದ ತೀವ್ರತೆ ಹೆಚ್ಚಿರುವ ಕಾರಣ ಉಸಿರಾಡಲು ಕಷ್ಟವಾಗುತ್ತಿದೆ. ಸದ್ಯ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ಮುಂದುವರಿಸಲಾಗಿದೆ ಎಂದು ಅವರಿಗೆ ಚಿಕಿತ್ಸೆ ನೀಡುತ್ತಿರುವ ಡಾ. ರವೀಂದ್ರ ಮೆಹ್ರಾ ತಿಳಿಸಿದ್ದಾರೆ. ಸದ್ಯ ತಿಮ್ಮಕ್ಕ ಅವರ ಆರೋಗ್ಯ ಸ್ಥಿರವಾಗಿದೆ. ಅವರಿಗೆ ಅಸ್ತಮಾದ ಲಕ್ಷಣಗಳಿರುವ ಕಾರಣ ಇನ್ನೂ ೨-೩ ದಿನಗಳವರೆಗೆ ಅವರ ಆರೋಗ್ಯದ ಬಗ್ಗೆ ನಿಗಾವಹಿಸಲಾಗುವುದು. ಅವರ ವಯಸ್ಸಿನ ಕಾರಣದಿಂದಾಗಿ ಕಾಯಿಲೆಗೆ ಸಂಬAಧಿಸಿ ಶಿಫಾರಸು ಮಾಡಲಾದ ಪೂರ್ಣ ಪ್ರಮಾಣದ ಔಷಧಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ವೈದ್ಯರು ವಿವರಿಸಿದ್ದಾರೆ.
ನರ್ಗೆಸ್ ಮೊಹಮ್ಮದಿಗೆ ಶಾಂತಿ ನೊಬೆಲ್
ಸ್ಟಾಕ್ಹೋಮ್, ಅ. ೬: ಇರಾನ್ನಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ, ಮಾನವ ಹಕ್ಕುಗಳು ಮತ್ತು ಎಲ್ಲಾರ ಸ್ವಾತಂತ್ರö್ಯಕ್ಕಾಗಿ ಹೋರಾಟ ನಡೆಸಿದ ನರ್ಗೆಸ್ ಮೊಹಮ್ಮದಿ ಅವರನ್ನು ೨೦೨೩ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿ ಲಭಿಸಿದೆ. ನರ್ಗೆಸ್ ಮೊಹಮ್ಮದಿ ಮಹಿಳಾ ಮತ್ತು ಮಾನವ ಹಕ್ಕುಗಳ ಪರ ವಕೀಲೆ ಹಾಗೂ ಸ್ವಾತಂತ್ರö್ಯ ಹೋರಾಟಗಾರರಾಗಿದ್ದಾರೆ. ಈ ವರ್ಷದ ಶಾಂತಿ ಪ್ರಶಸ್ತಿಯು ಮಹಿಳೆಯರನ್ನು ಗುರಿಯಾಗಿಸುವ ತಾರತಮ್ಯ ಮತ್ತು ದಬ್ಬಾಳಿಕೆಯ ಪ್ರಭುತ್ವದ ಆಡಳಿತದ ನೀತಿಗಳ ವಿರುದ್ಧ ಪ್ರದರ್ಶಿಸಿದ ಲಕ್ಷಾಂತರ ಜನರನ್ನು ಗುರುತಿಸುತ್ತದೆ ಎಂದು ನೊಬೆಲ್ ಸಮಿತಿಯು ಹೇಳಿದೆ.
ಮಹಿಳಾ ಪೊಲೀಸ್ ಜೊತೆ ಅನುಚಿತ ವರ್ತನೆ-ಬಂಧನ
ತುಮಕೂರು, ಅ. ೬: ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಸೆ. ೩೦ ರಂದು ಆಯೋಜಿಸಿದ್ದ ಮೆರವಣಿಗೆ ವೇಳೆ ಮಹಿಳಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಜೊತೆ ಅನುಚಿತವಾಗಿ ವರ್ತಿಸಿದ ಆರೋಪದ ಮೇಲೆ ಇಲ್ಲಿನ ಪೊಲೀಸರು ಹಿಂದೂ ಪರ ಕಾರ್ಯಕರ್ತನನ್ನು ಬಂಧಿಸಿದ್ದಾರೆ. ಕುವೆಂಪು ನಗರದ ದರ್ಶನ್ (೨೬) ಎಂಬಾತ ಪಿಎಸ್ಐ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ ಆಕೆಗೆ ದೈಹಿಕ ಹಿಂಸೆ ನೀಡಿದ್ದಾನೆ. ಬಳಿಕ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿದಿದೆ. ನನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ, ಎದೆಯ ಮೇಲೆ ಕೈಹಾಕಿ ಅಸಭ್ಯವಾಗಿ ವರ್ತಿಸಿದ್ದಾರೆ. ಈತನ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಪಿಎಸ್ಐ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದರು.