ಮಡಿಕೇರಿ, ಅ. ೬: ಕರ್ನಾಟಕ ರಾಜ್ಯ ಹಾಕಿ ಸಂಸ್ಥೆಯು ಆಯೋಜಿಸಿದ್ದ ೨ನೇ ವರ್ಷದ ಪ್ರಸಿಡೆನ್ಸ್ ಕಪ್ ಹಾಕಿ ಪಂದ್ಯಾಟದಲ್ಲಿ ಕೊಡಗಿನ ತೂದಿಮಾಡ ಲೋಕೇಶ್, ಸವಿ ಮಾಲೀಕತ್ವದ ಶ್ಲೋಕ್ ಹಾಕಿ ತಂಡವು ಮಹಿಳಾ ವಿಭಾಗದ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ತಂಡದ ನಾಯಕಿ ಯುಕ್ತ, ಲೀಲಾವತಿ, ಪವಿತ್ರ, ಧನ್ಯ, ಸುಶ್ಮಿತ, ಪಾರ್ವತಿ, ಅಂಜು ಅವರಿದ್ದ ತಂಡ ೧೦-೦ ಗೋಲುಗಳಿಂದ ಬೆಂಗಳೂರಿನ ಸಾಸ ಹಾಕಿ ತಂಡದ ವಿರುದ್ಧ ಭರ್ಜರಿ ಗೆಲುವು ಸಾಧಿಸಿ, ಚಾಂಪಿಯನ್ ಪಟ್ಟಗಳಿಸಿದೆ. ನಾಯಕಿ ಯುಕ್ತ ಅವರು ಪಂದ್ಯದ ಶ್ರೇಷ್ಠ ಆಟಗಾರ್ತಿ ಪಟ್ಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಅದೇ ರೀತಿ ಪುರುಷ ವಿಭಾಗದಲ್ಲಿ ಶ್ಲೋಕ್ ಹಾಕಿ ತಂಡವು, ನಾಯಕ ರಾಯಲ್ ಅಯ್ಯಣ್ಣ, ಫಾದ್, ಪ್ರಜ್ವಲ್, ನಾಣಯ್ಯ, ಸುಗನ್, ಸೋಮಣ್ಣ, ಮಂಜುನಾಥ್, ಯಶ್ವಂತ್ ಅವರುಗಳ ಮೂಲಕ ೫-೭ ಅಂತರದಲ್ಲಿ ಬೆಂಗಳೂರಿನ ಬಿ.ಸಿ.ವೈ. ತಂಡದ ವಿರುದ್ಧ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದಾರೆ.