ಶನಿವಾರಸಂತೆ, ಅ.೬: ಪಟ್ಟಣದಲ್ಲಿ ಕಳೆದೆರೆಡು ವರ್ಷಗಳಿಂದ ಮರ ಕೆಲಸ ಮಾಡಿಕೊಂಡಿದ್ದ ಮೂಲತಃ ಉಡುಪಿ ಜಿಲ್ಲೆಯ ಮಣಿಪಾಲದ ಪರ್ಕಳ ಗ್ರಾಮದ ಲೋಕಯ್ಯಾಚಾರ್ ಅವರ ಪುತ್ರ ಹರಿಪ್ರಸಾದ್ (೩೮) ಅವರು ಸೆಪ್ಟೆಂಬರ್ ೨೪ ರಂದು ಬೆಳಿಗ್ಗೆ ೯-೩೦ ಕ್ಕೆ ಶನಿವಾರಸಂತೆಯ ಮನೆಯಿಂದ ಹೊರ ಹೋದವರು ನಂತರ ಹಿಂದಿರುಗಿ ಬಂದಿರುವುದಿಲ್ಲ. ಸಹೋದರಿಯ ಮನೆಗೆ ಫೋನ್ ಮಾಡಿ ವಿಚಾರಿಸಿದಾಗ ಅಲ್ಲಿಗೂ ಹೋಗದೇ ಕಾಣೆಯಾಗಿದ್ದಾರೆ.
ಈ ವ್ಯಕ್ತಿಯ ಬಗ್ಗೆ ಮಾಹಿತಿ ತಿಳಿದಲ್ಲಿ ಶನಿವಾರಸಂತೆ ಪೊಲೀಸ್ ನಿರೀಕ್ಷಕರು, ದೂರವಾಣಿ ಸಂಖ್ಯೆ : ೦೮೨೭೬೨೮೩೩೩೩, ೯೪೮೦೮೦೪೯೫೪ ಅಥವಾ ಕಂಟ್ರೋಲ್ ರೂಂ. ನಂ.೦೮೨೭೨೨೨೮೩೩೦ ಅನ್ನು ಸಂಪರ್ಕಿಸಿ ಮಾಹಿತಿ ನೀಡಲು ಪ್ರಕಟಣೆ ತಿಳಿಸಿದೆ.