ಗೋಣಿಕೊಪ್ಪ ವರದಿ, ಅ. ೬ : ಪೊನ್ನಂಪೇಟೆ ಕರ್ನಾಟಕ ಪಬ್ಲಿಕ್ ಶಾಲೆಯ ಟರ್ಫ್ ಮೈದಾನದಲ್ಲಿ ಕ್ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಸ್ಥೆ ಹಾಗೂ ಹಾಕಿ ಕೂರ್ಗ್ ಸಹಯೋಗದಲ್ಲಿ ಆಯೋಜಿಸಿರುವ ಗ್ರಾಮ ಪಂಚಾಯಿತಿ ತಂಡಗಳ ನಡುವಿನ ಸೆವೆನ್ಸೈಡ್ ಹಾಕಿ ಟೂರ್ನಿಯ ಮೊದಲ ದಿನದಲ್ಲಿ ೧೦ ತಂಡಗಳು ಗೆಲುವು ಪಡೆದವು.
ಟೂರ್ನಿ ಉದ್ಘಾಟನಾ ಕಾರ್ಯಕ್ರಮ ಮಹಿಳಾ ಸಬಲೀಕರಣ ಸಂದೇಶ ನೀಡಲಾಯಿತು. ಅತಿಥಿಗಳಾಗಿ ಮಹಿಳೆಯರು ಮಾತ್ರ ಪಾಲ್ಗೊಂಡು ಚಾಲನೆ ನೀಡಿದ್ದು ವಿಶೇಷವಾಗಿತ್ತು. ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ, ಗೋಣಿಕೊಪ್ಪ ಪೊಲೀಸ್ ಉಪ ನಿರೀಕ್ಷಕಿ ರೂಪಾದೇವಿ ಬಿರಾದರ್, ತಿತಿಮತಿ ಡಿಪೋ ಆರ್ಎಫ್ಒ ಅರಮಣಮಾಡ ತೀರ್ಥ, ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಮುಕ್ಕಾಟೀರ ಗ್ರೀಷ್ಮಾ ಬೋಜಮ್ಮ, ಮಡಿಕೇರಿ ಡಿವೈಎಸ್ಎಸ್ ತರಬೇತುಗಾರ್ತಿ ಕೆ. ಕೆ. ಬಿಂದ್ಯಾ ಒಟ್ಟಾಗಿ ಚೆಂಡು ತಳ್ಳಿ ಉದ್ಘಾಟಿಸಿದರು.
ಪದ್ಮಶ್ರೀ ಪುರಸ್ಕೃತೆ ಐಮುಡಿಯಂಡ ರಾಣಿ ಮಾಚಯ್ಯ ಸನ್ಮಾನ ಸ್ವೀಕರಿಸಿ ಮಾತನಾಡಿ, ಕೊಡಗು ರಾಷ್ಟçಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಲು ವಿಶೇಷ ತಂಡ ರೂಪಿಸಬೇಕು. ಕೂರ್ಗ್ ರೆಜಿಮೆಂಟ್ ಮೂಲಕ ಹಾಕಿಗೆ ಸಾಕಷ್ಟು ಪ್ರೋತ್ಸಾಹ ದೊರೆಯುತ್ತಿತ್ತು. ಇದು ಮುಂದುವರಿಯಬೇಕಿದೆ ಎಂದರು.
ಕ್ಗ್ಗಟ್ನಾಡ್ ಫ್ಲೆöÊಯಿಂಗ್ ಎಲ್ಬೋಸ್ ಸಂಸ್ಥೆ ಅಧ್ಯಕ್ಷ ಚಿರಿಯಪಂಡ ಪವನ್ ಮಾತನಾಡಿ, ನಗರ ಪ್ರದೇಶಗಳಲ್ಲಿ ಹಕಿಗೆ ಸೂಕ್ತ ತರಬೇತಿ, ಮೂಲಸೌಕರ್ಯ ದೊರೆ ಯುತ್ತಿದೆ. ಆದರೆ, ಗ್ರಾಮ ಮಟ್ಟದಲ್ಲಿ ಇಂತಹ ಪ್ರೋತ್ಸಾಹ ಕೊರತೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಇಂತಹ ಕ್ರೀಡಾಕೂಟ ಸಣ್ಣ ಪ್ರತಿಭೆಗಳಿಗೂ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು. ಚೆಪ್ಪುಡೀರ ಕಾರ್ಯಪ್ಪ, ಮಾಳೇಟೀರ ಶ್ರೀನಿವಾಸ್ ವೀಕ್ಷಕ ವಿವರಣೆ ನೀಡಿದರು. ಲೋಹಿತ್ ಭೀಮಯ್ಯ ಪ್ರಾರ್ಥಿಸಿದರು.
ಫಲಿತಾಂಶ : ಕೊಟ್ಟಗೇರಿ, ಕಕ್ಕಬ್ಬೆ ಮಲ್ಮಾ, ಅಮ್ಮತ್ತಿ, ಬಿಟ್ಟಂಗಾಲ, ಇವೈಟಿ ಬೇಗೂರು, ಅಂಜಿಕೇರಿ ನಾಡ್, ಬಲ್ಯಮುಂಡೂರು
(ಮೊದಲ ಪುಟದಿಂದ) ತಲಭಲೇಶ್ವರ, ಚೆಂಬೆಬೆಳ್ಳೂರು, ಹಾತೂರು ಹಾಗೂ ಹೊಸೂರು ತಂಡಗಳು ಗೆಲುವಿನ ನಗೆ ಬೀರಿದವು.
ಕೊಟ್ಟಗೇರಿ ತಂಡವು ಕಾನೂರು ತಂಡವನ್ನು ೪-೨ ಗೋಲುಗಳಿಂದ ಸೋಲಿಸಿತು. ಕೊಟ್ಟಗೇರಿ ಪರ ಅಯ್ಯಪ್ಪ ೨, ಅಪ್ಪಣ್ಣ, ರೋಶನ್, ಕಾನೂರು ಆಟಗಾರ ಚರಣ್, ಬೆಳ್ಯಪ್ಪ ತಲಾ ಒಂದೊAದು ಗೋಲು ಹೊಡೆದರು.
ಕಕ್ಕಬೆ ಮಲ್ಮಾ ತಂಡವು ಕುತ್ತ್ನಾಡ್ ರೆಡ್ ವಿರುದ್ಧ ೮-೧ ಗೋಲುಗಳಿಂದ ಜಯಿಸಿತು. ಕಕ್ಕಬ್ಬೆ ಆಟಗಾರ ನಿಖಿಲ್, ರಾಯ್, ಫಾಹದ್, ನಂಜಪ್ಪ ತಲಾ ೨, ರೆಡ್ ಪರ ದರ್ಶನ್ ಗೋಲು ಹೊಡೆದರು.
ಅಮ್ಮತ್ತಿ ತಂಡವು ೮-೦ ಗೋಲುಗಳಿಂದ ಶ್ರೀಮಂಗಲ ವಿರುದ್ಧ ಜಯ ಸಾಧಿಸಿತು. ಅಮ್ಮತ್ತಿ ಪರ ಭೀಮಯ್ಯ ೩, ಅಯ್ಯಪ್ಪ, ಚೆಂಗಪ್ಪ, ನಿಖಿಲ್, ದಿಲನ್, ಅಪ್ಪಣ್ಣ ತಲ ಒಂದೊAದು ಗೋಲು ಬಾರಿಸಿದರು.
ಬಿಟ್ಟಂಗಾಲ ನಾಲ್ಕೇರಿ ವಿರುದ್ಧ ಶೂಟೌಟ್ನಲ್ಲಿ ೬-೫ ಗೋಲುಗಳ ಜಯ ಪಡೆಯಿತು. ನಾಲ್ಕೇರಿ ಪರ ನಿರನ್, ತಿಮ್ಮಣ್ಣ, ಪೂಣಚ್ಚ, ಬಿಟ್ಟಂಗಾಲ ಪರ ನಾಣಯ್ಯ, ವಿನೀಶ್, ಭರತ್ ಗೋಲು ಹೊಡೆದರು.
ಇವೈಟಿ ಬೇಗೂರು ತಂಡವು ಹಾಲುಗುಂದ ತಂಡವನ್ನು ೫-೪ ಗೋಲುಗಳಿಂದ ಸೋಲಿಸಿತು. ಬೇಗೂರು ಪರ ದೀಪಕ್ ೩, ಮಣಿ ೨, ಹಾಲುಗುಂದ ಪರ ನಿಹಾಲ್ ೨, ನವೀನ್, ವಿಜು ಗೋಲು ಭಾರಿಸಿದರು.
ಅಂಜಿಕೇರಿ ನಾಡ್ ತಂಡಕ್ಕೆ ದೇವಣಗೇರಿ ವಿರುದ್ಧ ೪-೨ ಗೋಲುಗಳ ಜಯ ದೊರೆಯಿತು. ಅಂಜಿಕೇರಿ ಪರ ಆದರ್ಶ್ ೨, ಅಯ್ಯಪ್ಪ, ದೀಪಕ್, ದೇವಣಗೇರಿ ಪರ ಬನ್ಸಿ, ಲಿಕಿತ್ ಗೋಲು ಹೊಡೆದರು.
ಬಲ್ಯಮುಂಡೂರು ತಲಭಲೇಶ್ವರ ತಂಡವು ಕುತ್ತ್ನಾಡ್ ಬ್ಲೂ ತಂಡವನ್ನು ೪-೩ ಗೋಲುಗಳಿಂದ ಮಣಿಸಿತು. ಬಲ್ಯಮುಂಡೂರ ಪರ ಮಿಲನ್ ೩, ವಶಿಕ್ ೧, ಬ್ಲೂ ಪರ ಚರ್ಮಣ, ಸುಚನ್, ಕಾವೇರಪ್ಪ ತಲಾ ಒಂದೊAದು ಗೋಲು ಹೊಡೆದರು.
ಚೆಂಬೆಬೆಳ್ಳೂರು ತಂಡಕ್ಕೆ ಬೆಲ್ಲತ್ನಾಡ್ ವಿರುದ್ಧ ೩-೧ ಗೋಲುಗಳ ಜಯ ದೊರೆಯಿತು. ಚೆಂಬೆಬೆಳ್ಳೂರು ಪರ ಗಣಪತಿ ೨, ಶಮಿ, ಬೆಲ್ಲತ್ನಾಡ್ ಪರ ನಾಚಪ್ಪ ಗೋಲು ಬಾರಿಸಿದರು.
ಹಾತೂರು ತಂಡಕ್ಕೆ ಟಿ.ಶೆಟ್ಟಿಗೇರಿ ವಿರುದ್ಧ ೫-೦ ಗೋಲುಗಳ ಭರ್ಜರಿ ಗೆಲುವು ದೊರೆಯಿತು. ಕೌಶಿಕ್, ಅಪ್ಪಯ್ಯ, ನಾಣಯ್ಯ, ಪೊನ್ನಣ್ಣ, ಅಪ್ಪಚ್ಚು ಗೋಲು ಹೊಡೆದು ಮಿಂಚಿದರು.
ಹೊಸೂರು ತಂಡವು ಬಿರುನಾಣಿ ತಂಡವನ್ನು ೪-೨ ಗೋಲುಗಳಿಂದ ಮಣಿಸಿತು. ಹೊಸೂರು ಪರ ಬೆಳ್ಯಪ್ಪ ೩, ಲೇಖನ್, ಬಿರುನಾಣಿ ಪರ ಧ್ಯಾನ್, ಮುತ್ತಪ್ಪ ಒಂದೊAದು ಗೋಲು ಬಾರಿಸಿದರು.