*ಗೋಣಿಕೊಪ್ಪ, ಅ. ೫: ಅರ್ಧ ವಾರ್ಷಿಕ ಪರೀಕ್ಷೆ ಪ್ರಾರಂಭವಾದರೂ ಶಾಲಾ ಶುಲ್ಕ ಕಟ್ಟಿಲ್ಲ ಎಂದು ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯದಂತೆ ತರಗತಿಯಿಂದ ಹೊರಗಟ್ಟಿ ದಂಡಿಸಿದ ಘಟನೆ ಗೋಣಿಕೊಪ್ಪ ಸಂತ ಥೋಮಸ್ ಶಾಲೆಯಲ್ಲಿ ನಡೆದಿದೆ.
ಈ ಕ್ರಮದ ಬಗ್ಗೆ ಶಾಲಾ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿಯ ವಿರುದ್ಧ ಪೋಷಕರು ವಿರೋಧಿಸಿದ್ದಾರೆ.
ಬುಧವಾರ ನಡೆದ ಪರೀಕ್ಷೆ ತರಗತಿಯ ವೇಳೆಯಲ್ಲಿ ಈ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಸಂಜೆ ಮನೆಗೆ ತೆರಳಿ ಪೋಷಕರಲ್ಲಿ ಈ ವಿಚಾರ ತಿಳಿಸಿದಾಗ ಘಟನೆಯ ಬಗ್ಗೆ ತಿಳಿದು ಬಂದಿದೆ.
ಪೋಷಕರಿಗೆ ನೇರವಾಗಿ ಶುಲ್ಕ ಕಟ್ಟುವಂತೆ ತಿಳಿಸದೆ ಮಕ್ಕಳಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿರುವುದು ಉತ್ತಮ ನಡೆಯಲ್ಲ ಮತ್ತು ಇತರ ವಿದ್ಯಾರ್ಥಿಗಳ ಮುಂದೆ ವ್ಯಂಗ್ಯವಾಡಿ ರುವ ಗಂಭೀರ ಆರೋಪಗಳು ಶಿಕ್ಷಣ ಸಂಸ್ಥೆಯ ವಿರುದ್ಧ ಪೋಷಕರು ಮಾಡಿದ್ದಾರೆ.
ಈ ಬಗ್ಗೆ ಪೋಷಕರು ಪ್ರಾಂಶುಪಾಲರನ್ನು ಪ್ರಶ್ನಿಸಿದಾಗ ಹಗುರವಾದ ಉತ್ತರವನ್ನು ನೀಡುವ ಮೂಲಕ ನಮ್ಮನ್ನು ಅವಮಾನಿಸಿದ್ದಾರೆ ಎಂದು ಪೋಷಕರು ಆರೋಪಿಸಿದ್ದಾರೆ.
ಮೊದಲ ಹಂತದ ಹಣವನ್ನು ಈಗಾಗಲೇ ಪಾವತಿಸಿದ್ದು, ಎರಡನೇ ಹಂತದ ಹಣವನ್ನು ಪಾವತಿಸಬೇಕು. ಅದಕ್ಕೆ ಸಾಕಷ್ಟು ಸಮಯವು ಇದೆ. ಆದರೆ ಪ್ರಾಂಶುಪಾಲ ಪರೀಕ್ಷೆಯ ಸಂದರ್ಭದಲ್ಲಿ ಈ ರೀತಿ ವರ್ತಿಸಿರುವುದನ್ನು ಖಂಡಿಸಿದ್ದಾರೆ.
ಈ ವಿಚಾರವಾಗಿ ಪ್ರಾಂಶುಪಾಲರನ್ನು ಪತ್ರಿಕೆ ಸಂಪರ್ಕಿಸಿದಾಗ ಈ ನಡೆಯಿಂದ ಇಷ್ಟು ದೊಡ್ಡ ಪರಿಣಾಮ ಬೀರುತ್ತದೆ ಎಂದು ತಿಳಿದಿರಲಿಲ.್ಲ ಈ ರೀತಿಯ ಘಟನೆ ಮರುಕಳಿಸುವುದಿಲ್ಲ ಎಂದಿದ್ದಾರೆ.