*ಗೋಣಿಕೊಪ್ಪ, ಅ. ೪: ಹಿಂದೂ ಮಲಯಾಳಿ ಸಮಾಜದ ವತಿಯಿಂದ ಕೃಷಿ ಉತ್ಪನ್ನ ಮಾರುಕಟ್ಟೆ ಸಭಾಂಗಣದಲ್ಲಿ ಜನಾಂಗದವರಿಗೆ ಆಯೋಜಿಸಿದ್ದ ಓಣಂ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡೆಯಲ್ಲಿ ಸದಸ್ಯರುಗಳು ಪಾಲ್ಗೊಂಡು ಸಂಭ್ರಮಿಸಿದರು.
ಮಕ್ಕಳು, ಯುವ ಸಮೂಹ, ಹಿರಿಯರಿಗೂ ಪ್ರತ್ಯೇಕ ಕ್ರೀಡೆ ನಡೆಯಿತು. ಕಾಳು ಹೆಕ್ಕುವುದು, ಥ್ರೋಬಾಲ್, ಕಪ್ಪೆಜಿಗಿತ, ರನ್ಅಯಿಂಡ್ ಪಿಕ್, ಜಂಪ್ ಇನ್ ಜಂಪ್, ಬಲೂನು ಒಡೆಯುವುದು, ಚೆಂಡಿಗೆ ನೀರು ಹಾಕುವುದು, ನೀರಿನಿಂದ ಆಪಲ್ ಕಚ್ಚಿ ತೆಗೆಯುವುದು, ಕಪ್ ಪಿರಾಮಿಡ್, ಮ್ಯೂಸಿಕಲ್ ಚೇರ್, ಫನ್ನಿಗೇಮ್, ಪುರುಷರಿಗೆ ಸೀರೆ ತೊಡಿಸುವ ಸ್ಪರ್ಧೆ, ಹಗ್ಗಜಗ್ಗಾಟ ಸ್ಪರ್ಧೆಗಳು ನಡೆದವು. ಬಹುಮಾನ ವಿತರಣೆ ನಡೆಯಿತು.
ಸಮಾಜದ ಅಧ್ಯಕ್ಷ ಅಮೃತ್ ರಾಜನ್ ಮಾತನಾಡಿ, ಜಿಲ್ಲೆಯಲ್ಲಿ ಮೊದಲ ಬಾರಿಗೆ ಪಾಂಡAಡ ಕುಟ್ಟಣಿ ಎಂಬ ಹಿರಿಯಚೇತನ ಕೊಡವ ಹಾಕಿ ನಮ್ಮೆ ಮೂಲಕ ಬೇರೆ ಬೇರೆ ಜನಾಂಗಗಳ ಒಗ್ಗಟ್ಟಿಗೂ ವೇದಿಕೆ ನಿರ್ಮಿಸಿಕೊಟ್ಟಿದ್ದಾರೆ. ಬಹುತೇಕ ಜನಾಂಗಗಳು ಕ್ರೀಡಾಕೂಟ ನಡೆಸಿಕೊಂಡು ಬರುತ್ತಿರುವುದರಿಂದ ಒಗ್ಗಟ್ಟು ಹೆಚ್ಚಾಗುತ್ತಿದೆ. ನಮ್ಮವರನ್ನು ಅರಿತುಕೊಳ್ಳಲು ಅವಕಾಶವಾಗುತ್ತಿದೆ. ಸಂಬAಧಗಳು ಗಟ್ಟಿಯಾಗುತ್ತಿದೆ. ಮನಸ್ಸಿಗೆ ಶಾಂತಿ ಕೂಡ ದೊರೆಯುವಂತಾಗಿದೆ ಎಂದರು.
ಹಿರಿಯ ಕ್ರೀಡಾಪಟು ಕೆ.ಎಂ. ಮಣಿ ಕ್ರೀಡಾಕೂಟದ ಉದ್ಘಾಟಿಸಿ ಮಾತನಾಡಿ, ಒಗ್ಗಟ್ಟಿಗೆ ಕ್ರೀಡೆ ಸಹಕಾರಿಯಾಗುತ್ತಿದೆ ಎಂದರು. ಸಲಹಾ ಸಮಿತಿ ಸದಸ್ಯ ಶಾಜಿ ಅಚ್ಚುತ್ತನ್ ಮಾತನಾಡಿ, ಸಂಘ ಮುನ್ನಡೆಸಲು ಸಹಭಾಗಿತ್ವ ಮುಖ್ಯ. ಈ ನಿಟ್ಟಿನಲ್ಲಿ ಸದಸ್ಯರ ಪಾಲ್ಗೊಳ್ಳುತ್ತಿರುವುದು ಮೆಚ್ಚುವಂತ ವಿಚಾರ ಎಂದು ಶ್ಲಾಘಿಸಿದರು.
ಸಮಾಜದ ಮಾಜಿ ಗೌರವ ಅಧ್ಯಕ್ಷ ಪಿ. ಭಾಸ್ಕರ್, ಕಾರ್ಯದರ್ಶಿ ವಿ. ಎನ್. ರೀನಾ, ಕ್ರೀಡಾ ಸಂಚಾಲಕ ಟಿ.ಜಿ. ಮನುಕುಮಾರ್, ಸಹ ಸಂಚಾಲಕಿ ಸೌಮ್ಯ ಕೃಷ್ಣ, ಶ್ರೀಮಂಗಲ ಉಪ ಸಮಿತಿ ಉಪಾಧ್ಯಕ್ಷ ರದೀಶ್, ಪಾಲಿಬೆಟ್ಟ ಉಪ ಸಮಿತಿ ಅಧ್ಯಕ್ಷ ರಿನೀಶ್, ಯೂತ್ವಿಂಗ್ ಕಾರ್ಯದರ್ಶಿ ಕೆ.ವಿ. ಸುನಿಲ್ ಇದ್ದರು.