ಮುಳ್ಳೂರು: ಗೌರಿ-ಗಣೇಶ ಹಬ್ಬದ ಪ್ರಯುಕ್ತ ಸಮೀಪದ ಮಾಲಂಬಿ-ಕೂಡುರಸ್ತೆ ಗ್ರಾಮದಲ್ಲಿ ಗೌರಿ-ಗಣೇಶ ಸೇವಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ವಿಸರ್ಜನೆ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ ನೆರವೇರಿಸಲಾಯಿತು. ವಿಸರ್ಜನೆ ಪ್ರಯುಕ್ತ ಗೌರಿ-ಗಣೇಶ ಮೂರ್ತಿಯನ್ನು ಹೂವಿಂದ ಅಲಂಕರಿಸಿದ ವಾಹನದಲ್ಲಿ ಪ್ರತಿಷ್ಠಾಪಿಸಿ ವಾದ್ಯಗೋಷ್ಠಿಯೊಂದಿಗೆ ಗ್ರಾಮದ ರಸ್ತೆಯಿಂದ ಆಲೂರು ಸಿದ್ದಾಪುರದವರೆಗೆ ಅದ್ಧೂರಿ ಮರವಣಿಯನ್ನು ನಡೆಸಿ ಅಲ್ಲಿಂದ ವಾಪಾಸಾಗಿ ಮಾಲಂಬಿ ಗ್ರಾಮದ ಜಂಕ್ಷನ್ ಮೂಲಕ ಮಾಲಂಬಿ ಊರಿನಲ್ಲಿ ಮೆರವಣಿಗೆ ಸಾಗಿದ ನಂತರ ರಾತ್ರಿ ಗ್ರಾಮದ ಕೆರೆಯಲ್ಲಿ ಗಣೇಶ ಮೂರ್ತಿಯನ್ನು ವಿಸರ್ಜಿಸಲಾಯಿತು. ವಿಸರ್ಜನೆ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಗ್ರಾಮದ ನೂರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು.

ಕರ್ಣAಗೇರಿ ಸ್ಫೂರ್ತಿ ಯುವಕ ಸಂಘ

ಮಡಿಕೇರಿ: ಕರ್ಣಂಗೇರಿ ಗ್ರಾಮದ ವಿದ್ಯಾ ಭಾರತಿ ಬಡಾವಣೆಯ ಸ್ಫೂರ್ತಿ ಯುವಕ ಸಂಘದ ವತಿಯಿಂದ ೧೩ನೇ ವರ್ಷದ ಗಣೇಶೋತ್ಸವ ಸಂಭ್ರಮದಿAದ ನಡೆಯಿತು.

ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ಅವರು ಗಣೇಶ ಮೂರ್ತಿಯ ಪ್ರತಿಷ್ಠಾಪನಾ ಸ್ಥಳಕ್ಕೆ ಆಗಮಿಸಿ ವಿಶೇಷ ಪೂಜೆಯಲ್ಲಿ ಪಾಲ್ಗೊಂಡರು. ಗ್ರಾಮಸ್ಥರಿಗೆ ಸಿಹಿ ವಿತರಿಸಿ ಗಣೇಶೋತ್ಸವದ ಸಂಭ್ರಮವನ್ನು ಹಂಚಿಕೊAಡರು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಕಿರಿಯರು ಹಾಗೂ ಹಿರಿಯರು ಉತ್ಸಾಹದಿಂದ ಪಾಲ್ಗೊಂಡರು. ಕೆ. ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ ಹಾಗೂ ಸ್ಫೂರ್ತಿ ಯುವಕ ಸಂಘದ ಅಧ್ಯಕ್ಷ ಸುರೇಂದ್ರ ಬಹುಮಾನ ವಿತರಿಸಿದರು. ವಿದ್ಯುತ್ ಅಲಂಕೃತ ಮಂಟಪದಲ್ಲಿ ಗಣೇಶನ ಮೂರ್ತಿಯನ್ನು ಮೆರವಣಿಗೆ ಮಾಡಿ ಸ್ಥಳೀಯ ಕೆರೆಯಲ್ಲಿ ವಿಸರ್ಜಿಸಲಾಯಿತು.

ಶ್ರೀ ಗಣಪತಿ-ಪಾರ್ವತಿ-ಚಂದ್ರಮೌಳೇಶ್ವರ ದೇವಾಲಯ

ಶನಿವಾರಸಂತೆ: ಪಟ್ಟಣದ ಶ್ರೀಗಣಪತಿ-ಪಾರ್ವತಿ-ಚಂದ್ರಮೌಳೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿದ್ದ ಶ್ರೀಗೌರಿ-ಗಣೇಶ ಉತ್ಸವ ಮೂರ್ತಿಗಳ ವಿಸರ್ಜನೋತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು. ದೇವಾಲಯ ಅರ್ಚಕರಾದ ಮಾಲತೇಶ್ ಭಟ್ ಹಾಗೂ ಸುಹಾಸ್ ಭಟ್ ಅವರ ನೇತೃತ್ವದಲ್ಲಿ ೨ ವಾರ ವಿವಿಧ ಪೂಜಾ ಕೈಂಕರ್ಯಗಳು ನೆರವೇರಿದವು. ಭಾನುವಾರ ಸಂಜೆ ಪುಷ್ಪಗಳಿಂದ ಅಲಂಕೃತವಾದ ಮಂಟಪದಲ್ಲಿ ಉತ್ಸವ ಮೂರ್ತಿಗಳ ಮೆರವಣಿಗೆ ನಡೆಯಿತು. ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ನಂತರ ಹೆಮ್ಮನೆ ನದಿಯಲ್ಲಿ ವಿಸರ್ಜಿಸಲಾಯಿತು. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಸಿ. ಶರತ್‌ಶೇಖರ್, ಸದಸ್ಯರಾದ ಎನ್.ಬಿ. ರವಿ, ದಿವಾಕರ್, ಜಿ.ಈ. ಪ್ರವೀಣ್, ಬಿ.ಕೆ. ಚಂದ್ರು, ಜೀವನ್, ಎನ್.ಪಿ. ರವಿ ಇತರರು ಇದ್ದರು.