ಮಡಿಕೇರಿ, ಅ. ೫: ಕ್ಷÄಲ್ಲಕ ಕಾರಣಕ್ಕಾಗಿ ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಮ ಜಮಾ ಅತ್‌ನ ನಾಲ್ವರು ಸದಸ್ಯರುಗಳನ್ನು ಜಮಾ ಅತ್ ವತಿಯಿಂದ ಸಾಮಾಜಿಕ ಬಹಿಷ್ಕಾರ ಹಾಕಲಾಗಿದ್ದು, ಇದನ್ನು ಖಂಡಿಸುವದಲ್ಲದೆ, ಜಿಲ್ಲಾಡಳಿತ ಮಧ್ಯ ಪ್ರವೇಶಿಸಿ ಬಹಿಷ್ಕಾರ ಆದೇಶದ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಗ್ರಾಮಸ್ಥರು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾ ಡಿದ ಎಮ್ಮೆಮಾಡು ಗ್ರಾಮ ಪಂಚಾಯ್ತಿ ಸದಸ್ಯ ಹಾಗೂ ಜಮಾ ಅತ್ ಸದ ಸ್ಯರೂ ಆಗಿರುವ ಸಿ.ಎ. ಇಸ್ಮಾಯಿಲ್; ಕಳೆದ ತಾ. ೨೮ರಂದು ಗ್ರಾಮಸ್ಥ ರೊಂದಿಗೆ ಈದ್ ಮಿಲಾದ್ ಆಚರಣೆ ಮಾಡುತ್ತಿದ್ದ ಸಂದರ್ಭ ಉಸ್ತಾದರು ಹಾಗೂ ಜಮಾ ಅತ್ ಆಡಳಿತ ಮಂಡಳಿಯವರನ್ನು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂದು ಕ್ಷÄಲ್ಲಕ ಕಾರಣ ನೀಡಿ ಯಾವದೇ ವಿಚಾರಣೆ ಮಾಡದೆ, ನೋಟೀಸ್ ಕೂಡ ನೀಡದೆ ಜಮಾ ಅತ್ ಸದಸ್ಯರುಗಳಾದ ಮೊಯ್ದಂ ಕುಟ್ಟಿ ಪೊಟ್ಟಂಡ, ಅಬ್ದುಲ್ ರಜಾಕ್ ನೆರೂಟ್, ಮಾಹಿನ್ ಕೂರುಳಿ, ಮೊಯ್ದು ಕುಂಞ ಪಿ.ವೈ. ಎಂಬವರುಗಳನ್ನು ಬಹಿಷ್ಕಾರ ಹಾಕಲಾಗಿದೆ. ಈ ನಾಲ್ವರನ್ನು ಜಮಾ ಅತ್‌ಗೆ ಒಳಪಡುವ ಯಾವದೇ ಖಾಸಗಿ ಹಾಗೂ ಸಾಮೂಹಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸ ಬಾರದು, ಯಾವದೇ ಕಾರ್ಯಕ್ರಮ ಗಳಿಗೆ ಆಹ್ವಾನಿಸಬಾರದು. ಅವರುಗಳ ಮನೆಯಲ್ಲಿ ಯಾವದೇ ಕಾರ್ಯಕ್ರಮ ನಡೆಸಬಾರದು ಎಂದು ತೀರ್ಮಾನ ಮಾಡಿ ಬಹಿಷ್ಕಾರದ ನೋಟೀಸನ್ನು ಸೂಚನಾ ಫಲಕದಲ್ಲಿ ಹಾಕಲಾಗಿದೆ. ಇದು ಮಾನವ ಹಕ್ಕು ಉಲ್ಲಂಘನೆ ಯಾಗಿದೆ ಎಂದು ಹೇಳಿದರು.

ಜಮಾಅತ್‌ನಲ್ಲಿನ ಆಡಳಿತ ಮಂಡಳಿಯ ಲೆಕ್ಕ ಪರಿಶೋಧನೆ ಕೂಡ ಮಾಡಿರುವದಿಲ್ಲ. ಕಳೆದ ಎರಡು ವರ್ಷದ ಹಾಗೂ ಉರೂಸ್ ಕಳೆದು ತಿಂಗಳಾದರೂ ಯಾವದೇ ಲೆಕ್ಕಪತ್ರÀ ಮಂಡಿಸಿರುವದಿಲ್ಲ. ಆಡಳಿತದ ವೈಫಲ್ಯವನ್ನು ಮುಚ್ಚಿಹಾಕಲು ಈ ರೀತಿಯ ಬಹಿಷ್ಕಾರ ಹಾಕಲಾಗಿದೆ. ಬಹಿಷ್ಕಾರಕ್ಕೆ ಒಳಗಾದವರಲ್ಲಿ ಮೊಯ್ದು ಕುಂಞÂ ಪಿ.ವೈ. ಜಮಾ ಅತ್‌ನ ಲೆಕ್ಕ ಪರಿಶೋಧಕರಾಗಿದ್ದಾರೆ. ತಪ್ಪು ಮಾಡಿದ್ದರೆ ಕಾನೂನು ರೀತ್ಯಾ ಕ್ರಮಕೈಗೊಳ್ಳದೆ, ನೇರವಾಗಿ ಸಾಮಾಜಿಕ ಬಹಿಷ್ಕಾರ ಹಾಕುವ ಅಧಿಕಾರ ಸಂವಿಧಾನದಲ್ಲೂ ಇಲ್ಲ. ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವಂತೆ ಜಮಾ ಅತ್ ಕಾರ್ಯದರ್ಶಿಯವರಲ್ಲಿ ಕೋರಿಕೊಂಡರೂ ಯಾವದೆ ಸ್ಪಂದನ ಸಿಗಲಿಲ್ಲ. ಹಾಗಾಗಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ಆದೇಶದ ವಿರುದ್ಧ ಕ್ರಮ ಕೈಗೊಳ್ಳಬೆಕು. ಇಲ್ಲವಾದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಿದ್ದು, ಕಷ್ಟ-ನಷ್ಟಗಳಿಗೆ ಜಮಾಅತ್ ಆಡಳಿತ ಮಂಡಳಿ ಹೊಣೆ ಹೊರಬೇಕಾಗುತ್ತದೆ ಎಂದು ಹೇಳಿದರು. ಗೋಷ್ಠಿಯಲ್ಲಿ ಗ್ರಾಮಸ್ಥರಾದ ಕೆ.ಎಂ.ಮೂಸೆ, ಎಂ.ಎಸ್. ಮೂಸೆ. ಕೆ.ಎ.ಉಮ್ಮರ್, ಪಿ.ಎ.ಆಲಿ, ಜಮಾ ಅತ್‌ನ ಮಾಜಿ ಕಾರ್ಯದರ್ಶಿ ಎಂ.ವೈ.ಹ್ಯಾರಿಸ್ ಇದ್ದರು.