ಮಡಿಕೇರಿ, ಅ. ೫: ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಿಸಿ ದಂಪತಿ ಗಂಭೀರಗೊAಡ ಘಟನೆ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ನಡೆದಿದೆ. ಅವಘಡದಿಂಡ ರಮೇಶ್ ಹಾಗೂ ಅವರ ಪತ್ನಿ ರೂಪ ಗಂಭೀರಗೊAಡಿದ್ದು, ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುಂಟಿಕೊಪ್ಪ ಸಮೀಪದ ತೊಂಡೂರಿನಲ್ಲಿ ವಿಕಾಸ ಜನಸೇವಾ ಟ್ರಸ್ಟ್ ಮೂಲಕ ನಿರ್ಗತಿಕರಿಗೆ ಆಶ್ರಯ ನೀಡುತ್ತಿರುವ ರಮೇಶ್ ಅವರು ತಾ. ೪ ರಂದು ರಾತ್ರಿ ತಮ್ಮ ಮಡಿಕೇರಿಯ ಮನೆಯಲ್ಲಿ ಗ್ಯಾಸ್ ಸ್ಟೌ ದುರಸ್ತಿ ಮಾಡುತ್ತಿರುವ ಸಂದರ್ಭ ಆಕಸ್ಮಿಕವಾಗಿ ಸಿಲಿಂಡರ್ ಸ್ಫೋಟಿಸಿದೆ. ಪರಿಣಾಮ ರಮೇಶ್ ಹಾಗೂ ಪಕ್ಕದಲ್ಲಿಯೇ ಇದ್ದ ಅವರ ಪತ್ನಿಗೆ ಗಂಭೀರ ಗಾಯಗೊಂಡಿದ್ದು, ರಮೇಶ್ ತಂದೆ ಕರಿಯಪ್ಪ ಅವರಿಗೆ ಸಣ್ಣಪುಟ್ಟ ಗಾಯಗಳಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಮೈಸೂರಿಗೆ ರವಾನಿಸಲಾಗಿದ್ದು, ದಂಪತಿ ಆರೋಗ್ಯ ಸ್ಥಿತಿ ಚೇತರಿಕೆ ಕಂಡಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ರಮೇಶ್ ವೃತ್ತಿಯಲ್ಲಿ ಗ್ಯಾಸ್ ಸ್ಟೌ ಮೆಕ್ಯಾನಿಕ್ ಆಗಿದ್ದು, ಮನೆಯಲ್ಲಿ ಸ್ಟೌ ರಿಪೇರಿಯಾದ ಹಿನ್ನೆಲೆ ಸರಿಪಡಿಸಲು ಮುಂದಾದ ಸಂದರ್ಭ ಈ ಅವಘಡ ನಡೆದಿದೆ. ಸಾಮಾಜಿಕ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ರಮೇಶ್ ದಂಪತಿ ಆಶ್ರಮದಲ್ಲಿ ೩೦ ವೃದ್ಧರಿಗೆ ಆಶ್ರಯ ನೀಡುವ ಮೂಲಕ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ.