ವೀರಾಜಪೇಟೆ, ಅ. ೫: ಬೇಟೋಳಿ ಶ್ರೀ ಪುದುಪಾಡಿ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ ಶಾಲಾ ಮಕ್ಕಳಿಗೆ ಸಾಂಸ್ಕöÈತಿಕ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಚೆಸ್ಕಾಂನ ವೀರಾಜಪೇಟೆ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಚೆಸ್ಕಾಂ ಸುರೇಶ್ ಪಿ.ಎಸ್. ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿಯು ಗಣೇಶೋತ್ಸವವನ್ನು ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆ. ಇದು ಜನರಲ್ಲಿ ಐಕ್ಯತೆ ಮೂಡಿಸುವುದರ ಜೊತೆಗೆ ಪರಸ್ಪರ ಸಹಕಾರ ಮನೋಭಾವನೆ ಮೂಡಿಸುತ್ತದೆ. ಚೆಸ್ಕಾಂ ಪವರ್‌ಮ್ಯಾನ್‌ಗಳನ್ನು ಗುರುತಿಸಿ ದೇವಸ್ಥಾನದ ಆಡಳಿತ ಮಂಡಳಿಯವರು ಸನ್ಮಾನಿಸುತಿರುವುದು ಗಮನಾರ್ಹವಾಗಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಡಾ. ರಾಮಕೃಷ್ಣ ಬೋರ್ಕರ್ ಮಾತನಾಡಿ, ಪ್ರತೀ ವರ್ಷವೂ ದೇವಸ್ಥಾನದ ವತಿಯಿಂದ ಸಾಂಸ್ಕöÈತಿಕ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದೇವೆ. ಆ ಮೂಲಕ ಪ್ರತಿಭೆಗಳನ್ನು ಗುರುತಿಸಿ ಸಮಾಜಕ್ಕೆ ಪರಿಚಯಿಸುವ ಕಾರ್ಯ ಆಗುತ್ತಿದೆ ಎಂದರು. ಈ ಸಂದರ್ಭ ಬೇಟೋಳಿ ವಿಭಾಗದ ಚೆಸ್ಕಾಂನ ಪವರ್‌ಮ್ಯಾನ್ ನಂಜುAಡಸ್ವಾಮಿ, ದೊರೆಸ್ವಾಮಿ ಹಾಗೂ ಅನಿಲ್ ಮೆನೇಜಸ್ ಅವರನ್ನು ಸನ್ಮಾನಿಸಲಾಯಿತು.

ಹೆಗ್ಗಳ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ ಅಕ್ಷತಾ ಹಾಗೂ ಕನ್ನಡ ಭಾಷಾ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರಾದ ಅಭಿಯಾ ಜೋಸ್, ಗಾಯತ್ರಿ, ಹಾಗೂ ಸಾಂಸ್ಕöÈತಿಕ ಕಾರ್ಯಕ್ರಮಕ್ಕೆ ಪುಟಾಣಿ ಮಕ್ಕಳನ್ನು ಸಜ್ಜುಗೊಳಿಸಿದ ಅಂಗನವಾಡಿ ಕಾರ್ಯಕರ್ತೆ ರತಿ ಅವರನ್ನು ಸನ್ಮಾನಿಸಲಾಯಿತು. ಈ ಸಂದರ್ಭ ಹೆಗ್ಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ಆಕರ್ಷಕ ನೃತ್ಯ ಕಾರ್ಯಕ್ರಮ ನಡೆಯಿತು.

ರಾಮನಗರದ ಅಂಗನವಾಡಿ ಮಕ್ಕಳ ನೃತ್ಯವು ಗಮನ ಸೆಳೆಯಿತು. ವೇದಿಕೆಯಲ್ಲಿ ದೇವಸ್ಥಾನದ ಉಪಾಧ್ಯಕ್ಷ ನಂದ ಬೋರ್ಕರ್, ಕಾರ್ಯದರ್ಶಿ ಸುಮನ ಉಪಸ್ಥಿತರಿದ್ದರು.