ಗೋಣಿಕೊಪ್ಪ ವರದಿ, ಅ. ೫ : ಬೆಂಗಳೂರು ಬಿ. ಎಂ. ಇಂಗ್ಲೀಷ್ ಶಾಲಾ ಆಡಳಿತ ವತಿಯಿಂದ ಪಡುಕೋಣೆ ದ್ರಾವಿಡ ಸೆಂಟರ್ ನಲ್ಲಿರುವ ಎಲೈಟ್ ಶೂಟಿಂಗ್ ಕ್ಲಬ್‌ನಲ್ಲಿ ಆಯೋಜಿಸಿದ್ದ ಸಿಐಎಸ್‌ಸಿಇ ರಾಷ್ಟçಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪದ ಕ್ಯಾಲ್ಸ್ ಹಾಗೂ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಸಾಧನೆ ರಾಷ್ಟçಮಟ್ಟದ ಶೂಟಿಂಗ್ ಸ್ಪರ್ಧೆಯಲ್ಲಿ ಗೋಣಿಕೊಪ್ಪದ ಕ್ಯಾಲ್ಸ್ ಹಾಗೂ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್ ಸಾಧನೆ ಮಾಡಿದೆ.

೧೭ ವಯೋಮಿತಿಯ ಪಿಸ್ಟೊನ್ ವಿಭಾಗದಲ್ಲಿ ನಿಶಾಂತ್ ಪಿ. ಜಗದಾಗ್ನಿ ಬೆಳ್ಳಿ ಪದಕ ಪಡೆದುಕೊಂಡರು. ಇದರೊಂದಿಗೆ ಭೂಪಾಲ್‌ನಲ್ಲಿ ನಡೆಯಲಿರುವ ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯ ಶೂಟಿಂಗ್‌ಗೆ ಆಯ್ಕೆಯಾದರು. ಇವರೊಂದಿಗೆ ಶೂಟರ್‌ಗಳಾದ ನಿಶ್ಮಾ ನೀಲಮ್ಮ, ಆಂಚಲ್ ಗಂಗಾ, ವಿದ್ಯಾ ಅರುಣ್, ಎಸ್. ಗಿರಿಧರ, ತನೀಶ್ ತಮ್ಮಯ್ಯ, ಕುಶಾಲ್ ಮಹೇಶ್, ಪಿ. ಎಸ್. ಹೇಮಂತ್, ಆರ್. ಮನಸ್ವಿ, ವಂಶಿ, ಪ್ರಜ್ಞಾ ಗೋಪಿಕೃಷ್ಣ, ಅದಿತಿ ಮುತ್ತಮ್ಮ ಭಾಗವಹಿಸಿದ್ದರು.