ಮಡಿಕೇರಿ, ಅ. ೫: ಮಡಿಕೇರಿ ಹಾಗೂ ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಆಯೋಜಿಸಿದ ವಲಯಾಧ್ಯಕ್ಷ ರೋಹಿತ್ ಸಿ.ಕೆ ಅವರ ಅಧಿಕೃತ ಭೇಟಿ, ಪ್ರಥಮ ವಲಯ ಸಲಹಾ ಕಾರ್ಯ ಕ್ರಮ ಹಾಗೂ ಶಿಕ್ಷಕರ ದಿನಾಚರಣೆ ಯನ್ನು ಮಡಿಕೇರಿಯ ಲಯನ್ಸ್ ಹಾಲ್ನಲ್ಲಿ ಆಯೋಜಿಸಲಾಗಿತ್ತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಲಯಾಧ್ಯಕ್ಷ ರೋಹಿತ್, ಲಯನ್ಸ್ ಜಿಲ್ಲಾ ಗವರ್ನರ್ ಡಾ. ಮೆಲ್ವಿನ್ ಡಿಸೋಜû ಅವರು ಘೋಷಿಸಿದ ಕಾರ್ಯಕ್ರಮಗಳಾದ ಹಿರಿಯ ನಾಗರಿಕ ಸೇವೆ, ಯುವಜನತೆಯನ್ನು ಪ್ರೇರೇಪಿಸುವ, ದೇಶದ ಬಗ್ಗೆ ಪ್ರೀತಿ, ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಬೇಕು ಎಂದರು. ಸರ್ವ ತೋಮುಖ ಬೆಳವಣಿಗೆಗೆ ಪೋಷಕರ ಪಾತ್ರ ಎಷ್ಟು ಪ್ರಮುಖ ಪಾತ್ರ ವಹಿಸುತ್ತ ದೆಯೋ ಅಷ್ಟೇ ಪ್ರಮುಖವಾಗಿ ಶಿಕ್ಷಕರ ಜವಾಬ್ದಾರಿ ಇರುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಮದೆ ಮಹದೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿರುವ ಬಿ.ಆರ್. ಜೋಯಪ್ಪ, ಪ್ರಸ್ತುತ ಮಡಿಕೇರಿಯ ಎ.ವಿ ಶಾಲೆ ಮುಖ್ಯೋಪಾಧ್ಯಾಯಿನಿ ಪ್ರಫುಲ್ಲ ದೇವರಾಜ್, ಚೌಡ್ಲು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ದೈಹಿಕ ಶಿಕ್ಷಕ ಎ.ಎಂ. ಆನಂದ ಹಾಗೂ ಸೋಮವಾರಪೇಟೆ ಜ್ಞಾನವಿಕಾಸ ಮುಖ್ಯೋಪಾಧ್ಯಾಯಿನಿ ಲಕ್ಷಿ÷್ಮÃ ಪಿ.ಕೆ. ಅವರುಗಳನ್ನು ಸನ್ಮಾನಿಸಲಾಯಿತು.
ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಮಧುಕರ್ ಶೇಟ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ಅಧ್ಯಕ್ಷ ಎ.ಎಸ್. ಮಹೇಶ್, ಪ್ರಾಂತೀಯ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ, ೧ ರ ಸಹಾಯಕ ಸಂಯೋಜಕಿ ಕವಿತ ಕಾವೇರಮ್ಮ, ಸಂಸ್ಥೆಯ ಕಾರ್ಯದರ್ಶಿಯಾದ ನಟರಾಜು ಕೆಸ್ತೂರ್, ಸಿ.ಕೆ. ಶಿವಕುಮಾರ್, ಖಜಾಂಜಿಗಳಾದ ರವಿ ಎನ್.ಬಿ. ಹಾಗೂ ಕೆ.ಡಿ. ವೀರಪ್ಪ ಉಪಸ್ಥಿತರಿದ್ದರು.
ಸಪ್ನಾ ಮಧುಕರ್ ಶೇಟ್ ಪ್ರಾರ್ಥಿಸಿ, ಸತೀಶ್ ರೈ ಧ್ವಜವಂದನೆ, ಲೋಹಿತ್ ಲಯನ್ಸ್ನ ನೀತಿ ಸಂಹಿತೆ ಯನ್ನು ಓದಿದರು. ಮೋಹನ ದಾಸ್ ಮುಖ್ಯ ಅತಿಥಿಗಳ ಪರಿಚಯವನ್ನು ಮಾಡಿದರು. ಮಧುಕರ್ ಶೇಟ್ ಡಿ. ಸ್ವಾಗತಿಸಿ, ನಟರಾಜು ಕೆಸ್ತೂರ್ ಹಾಗೂ ಸಿ.ಕೆ. ಶಿವಕುಮಾರ್ ವರದಿ ವಾಚನ ಮಾಡಿದರು, ಎ.ಎಸ್. ಮಹೇಶ್ ವಂದಿಸಿದರು.