ಭಾಗಮಂಡಲ, ಅ. ೫: ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ಗುರುವಾರ ಬೆಳಿಗ್ಗೆ ೮.೩೧ಕ್ಕೆ ತುಲಾ ಲಗ್ನದಲ್ಲಿ ಆಜ್ಞಾಮುಹೂರ್ತ ನೆರವೇರಿಸಲಾಯಿತು. ಕಾವೇರಿ ತೀರ್ಥೋದ್ಭವಕ್ಕೆ ಕೆಲವೇ ದಿನಗಳು ಬಾಕಿ ಉಳಿದಿರುವಂತೆ ಇಂದು ತುಲಾಸಂಕ್ರಮಣದ ಪ್ರಯುಕ್ತ ಕಟ್ಟು ವಿಧಿಸುವ ಕಾರ್ಯ ಜರುಗಿತು. ಗ್ರಾಮದ ದೇವಾಲಯಗಳ ತಕ್ಕಮುಖ್ಯಸ್ಥರು, ಅರ್ಚಕರು ಸೇರಿ ಸ್ಥಳೀಯರಾದ ರವಿ ಹೆಬ್ಬಾರ್ ಅವರ ಮನೆಗೆ ತೆರಳಿ ಬಾಳೆಗೊನೆ ಕಡಿದು ನಾದ ಸ್ವರದೊಂದಿಗೆ ಮೆರವಣಿಗೆ ಮೂಲಕ ಭಗಂಡೇಶ್ವರ ದೇವಾಲಯದ ಸನ್ನಿಧಿಗೆ ಆಗಮಿಸಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ತಪ್ಪಡ್ಕ (ಕಟ್ಟುಬೀಳುವುದು) ವಿಧಿಸಲಾಯಿತು. ಇಂದಿನಿAದ ಜಾತ್ರೆ ಮುಗಿಯುವವರೆಗೆ ನಾಡಿನಲ್ಲಿ ಮದ್ಯ,
(ಮೊದಲ ಪುಟದಿಂದ) ಮಾಂಸ ಸೇವನೆ, ಮರಕಡಿಯುವುದು, ಬಲಿ, ಹಿಂಸಾಕೃತ್ಯಗಳನ್ನು ನಡೆಸುವುದು ಮುಂತಾದ ಕಾರ್ಯಗಳಿಗೆ ನಿರ್ಬಂಧ ಹೇರಲಾಗಿದೆ.
ಭಾಗಮಂಡಲದ ಭಗಂಡೇಶ್ವರ ದೇವಾಲಯದಲ್ಲಿ ತೀರ್ಥೋದ್ಭವದ ಹಿನ್ನೆಲೆಯಲ್ಲಿ ತಾ. ೧೫ರಂದು ಭಾನುವಾರ ೧೧:೪೫ಕ್ಕೆ ಧನುರ್ ಲಗ್ನದಲ್ಲಿ ಅಕ್ಷಯ ಪಾತ್ರೆ ಇರಿಸಲಾಗುವುದು. ಅದೇ ದಿನ ಸಂಜೆ ೪:೫ಕ್ಕೆ ಕುಂಭಲಗ್ನದಲ್ಲಿ ಕಾಣಿಕೆ ಡಬ್ಬಿ ಇಡುವ ಕಾರ್ಯಕ್ರಮ ನೆರವೇರಲಿದೆ.
ಅರ್ಚಕರಾದ ಹರೀಶ್ ಭಟ್ ಮಾತನಾಡಿ, ಕಾವೇರಿ ತೀರ್ಥೋದ್ಭವಕ್ಕೆ ಸಂಬAಧಿಸಿದAತೆ ಭಗಂಡೇಶ್ವರ ದೇವಾಲಯದಲ್ಲಿ ಆಜ್ಞಾ ಮಹೂರ್ತ ನೆರವೇರಿಸಲಾಗಿದೆ. ಇದು ದೇಶ ಕಟ್ಟಾಗಿದ್ದು ಎಲ್ಲರೂ ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಆಚರಿಸಬೇಕು. ಈ ಮುಹೂರ್ತ ಭಾಗಮಂಡಲ ನಾಡಿಗೆ ಮಾತ್ರ ಸೀಮಿತವಾದುದಲ್ಲ. ಒಂದು ತಿಂಗಳ ಕಾಲ ತಲಕಾವೇರಿ ಜಾತ್ರೆ ನಡೆಯಲಿದ್ದು ಕೊಡಗಿನ ಜನತೆ ಕನಿಷ್ಟ ತೀರ್ಥೋದ್ಭವದ ಮರುದಿನದವರೆಗೆ ಕಟ್ಟುಪಾಡುಗಳನ್ನು ಕಡ್ಡಾಯವಾಗಿ ಪಾಲಿಸುವಂತಾಗಬೇಕು. ಇದರಿಂದ ನಾಡಿಗೆ ಕ್ಷೇಮ ಎಂದರು.
ಈ ಸಂದರ್ಭ ತಲಕಾವೇರಿ ದೇವಾಲಯದ ತಕ್ಕರಾದ ಕೋಡಿ ಮೋಟಯ್ಯ, ಆಡಳಿತ ಅಧಿಕಾರಿ ಚಂದ್ರಶೇಖರ್, ಪಾರುಪತ್ತೆಗಾರ ಪೊನ್ನಣ್ಣ, ಹರೀಶ್ ಭಟ್ ನಿಡ್ಯಮಲೆ ರವಿ, ಕುದುಕುಳಿ ಭರತ್, ಕುದುಪಜೆ ಪ್ರಕಾಶ್ ಇದ್ದರು. -ಸುನಿಲ್ ಕುಯ್ಯಮುಡಿ.