*ಗೋಣಿಕೊಪ್ಪ, ಅ. ೫: ಗೋಣಿಕೊಪ್ಪ ದಸರಾ ಪ್ರಯುಕ್ತ ಕಾವೇರಿ ಕಲಾ ವೇದಿಕೆಯಲ್ಲಿ ತಾ.೨೧ ರಂದು ಮಹಿಳಾ ದಸರಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಮಹಿಳಾ ದಸರಾ ಸಮಿತಿ ಅಧ್ಯಕ್ಷೆ ಮನ್ನಕಮನೆ ಸೌಮ್ಯಬಾಲು ತಿಳಿಸಿದ್ದಾರೆ.
ಥ್ರೋಬಾಲ್, ಹಗ್ಗಜಗ್ಗಾಟ, ತೆರೆದ ಮಾರಾಟ ಮಳಿಗೆ, ಹೂವಿನ ಅಲಂಕಾರ, ಗುಂಪು ಹಾಡು, ಛದ್ಮವೇಷ, ಸಿನೆಮಾ ದೇವರ ಹಾಡಿಗೆ ನೃತ್ಯ ಸ್ಪರ್ಧೆ, ವಾಲಗತ್ತಾಟ್ ಸ್ಪರ್ಧೆ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಥ್ರೋಬಾಲ್ ಮುಕ್ತ ವಿಭಾಗ ತಂಡ, ಹಗ್ಗಜಗ್ಗಾಟಕ್ಕೆ ೭ ಜನರು ಸ್ಪರ್ಧಿಸಬಹುದಾಗಿದೆ. ಮಾರಾಟ ಮಳಿಗೆ ಮುಕ್ತ ಸ್ಪರ್ಧೆ, ಹೂವಿನ ಅಲಂಕಾರ ಮುಕ್ತ ಸ್ಪರ್ಧೆ, ಗುಂಪು ಹಾಡು ವಿಭಾಗದಲ್ಲಿ ೮ ಜನರತಂಡ, ಛದ್ಮವೇಷ ಮುಕ್ತ, ಸಿನೆಮಾ ದೇವರ ಹಾಡಿಗೆ ನೃತ್ಯ ಸ್ಪರ್ಧೆಗೆ ೧೦ ಜನರು ಭಾಗವಹಿಸಬಹುದಾಗಿದೆ. ವಾಲಗತ್ತಾಟ್ ಮುಕ್ತವಾಗಿ ನಡೆಯಲಿದೆ ಎಂದು ತಿಳಿಸಿದರು.
ಸ್ಥಳೀಯ ಮಹಿಳಾ ಸಂಘಟನೆ, ಸ್ತಿçÃಶಕ್ತಿ, ಮಹಿಳಾ ಉದ್ಯೋಗಿ ಸೇರಿದಂತೆ ಎಲ್ಲ ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದು. ತಾ.೧೪ ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ೯೪೪೮೭೯೫೦೨೦, ೯೩೪೩೨೫೭೩೭೭ ಸಂಖ್ಯೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಗೌರವ ಅಧ್ಯಕ್ಷೆ ಚೈತ್ರ ಬಿ. ಚೇತನ್, ಉಪಾಧ್ಯಕ್ಷರಾದ ಎಂ. ಮಂಜುಳ, ಧನಲಕ್ಷಿö್ಮ, ಕಾರ್ಯದರ್ಶಿ ಕೊಣಿಯಂಡ ಬೋಜಮ್ಮ ಉತ್ತಪ್ಪ, ಸಹ ಕಾರ್ಯದರ್ಶಿ ನೂರೇರ ಧನ್ಯ ರವೀಂದ್ರ ಇದ್ದರು.