ಕೊಡ್ಲಿಪೇಟೆ, ಅ. ೪: ಪ್ರವಾದಿ ಮಹಮ್ಮದ್ ಅವರ ಆಶಯ ಹಾಗೂ ಆದರ್ಶಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಸಯ್ಯದ್ ಹಾಫೀಲ್ ಅಬ್ದುಲ್ ಖಾದರ್ ಅಲ್ ಹೈ ದ್ರೋಸಿ ಪಟ್ಟಾಂಬಿ ಹೇಳಿದರು.
ಸಮೀಪದ ಹ್ಯಾಂಡ್ಪೋಸ್ಟ್ ಮಸ್ಜಿದುನ್ನೂರ್ ನಲ್ಲಿ ಪ್ರವಾದಿ ಜನ್ಮ ದಿನದ ಪ್ರಯುಕ್ತ ಏರ್ಪಡಿಸಿದ್ದ ಮೀಲಾದುನ್ನೆಬಿ ಮತ್ತು ಸ್ವಲಾತ್ ವಾರ್ಷಿಕೋತ್ಸವ ಸಮಾರೋಪದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರವಾದಿ ಮಹಮ್ಮದ್ ಅವರು ವಿಶ್ವಕ್ಕೆ ಶಾಂತಿದೂತರಾಗಿ ಸಂದೇಶ ಸಾರಿದ್ದು ಅವರ ನೈಜ ಆಶಯಗಳಿಗೆ ಅನುಗುಣವಾಗಿ ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ನಂತರ ದಿನದ ಅಂಗವಾಗಿ ಸಾಮೂಹಿಕ ಪ್ರಾರ್ಥನೆಯ ನೇತೃತ್ವ ವಹಿಸಿದರು. ಮದ್ರಸಾದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮದ ಮೂಲಕ ಸಂಭ್ರಮದಿAದ ನಡೆದ ಈದ್-ಮಿಲಾದ್ ಆಚರಣೆಯಲ್ಲಿ, ಮಿಲಾದ್ ಸಂದೇಶ ರ್ಯಾಲಿ ನಡೆಯಿತು. ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಕಾಸರಗೋಡು, ಹುಸೈನ್ ಅಹ್ಸನಿ ಅಲ್ ಅಮೀನಿ ಅವರುಗಳು ಮತಪ್ರವಚನ ನಡೆಸಿದರು.
ಯೂತ್ ಮಿಲಾದ್ ಜಲ್ಸಾ ಕಾರ್ಯಕ್ರಮದ ಅಂಗವಾಗಿ ಮಸ್ಜಿದುನ್ನೂರ್ ಧರ್ಮಗುರು ಹಾರಿಸ್ ಬಾಖವಿ ಕಂಡಕೆರೆ ಮುಖ್ಯ ಪ್ರಭಾಷಣ ಮಾಡಿದರು.
ಹ್ಯಾಂಡ್ಪೋಸ್ಟ್ ತಜಲ್ಲಿಯಾತ್ ಹಾಗೂ ಬ್ಯಾಡಗೊಟ್ಟ ಹಿದಾಯತ್ತುಸ್ವಿಭಿಯಾನ್ ಮತ್ತು ಕಲ್ಲಾರೆ ಖುವ್ವತ್ತುಲ್ ಇಸ್ಲಾಂ ಮದ್ರಸದ ವಿದ್ಯಾರ್ಥಿಗಳು ಪ್ರವಾದಿಗಳ ಕೀರ್ತನೆಗಳ ಹಾಡು, ಭಾಷಣ, ನೃತ್ಯ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದರು.
ಮಸ್ಜಿದುನ್ನೂರ್ ಆಡಳಿತ ಸಮಿತಿ ಅಧ್ಯಕ್ಷ ಡಿ.ಎ. ಸುಲೇಮಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹನೀಫ್ ಎಂ.ಎA ಪ್ರಾಸ್ತಾವಿಕ ಭಾಷಣ ಮಾಡಿದರು. ಮದ್ರಸ ಅಧ್ಯಾಪಕರುಗಳಾದ ರಜಾಕ್ ಫ್ಯೆಝಿ ,ಝಹೀರ್ ನಿಜಾಮಿ, ಸಮದ್ ಫೈಝಿ, ನಾಸರ್ ಸಆದಿ, ಸಮೀರ್ ಫೈಝಿ ಉಪಸ್ಥಿತರಿದ್ದರು. ಮಸ್ಜಿದುನ್ನೂರ್ ಆಡಳಿತ ಸಮಿತಿ ಉಪಾಧ್ಯಕ್ಷ ಇಬ್ರಾಹಿಂ ಮಲ್ಲಳ್ಳಿ, ಖಜಾಂಜಿ ಬಾಸಿತ್ ಬಿ.ಎಸ್, ಕಾರ್ಯದರ್ಶಿಗಳಾದ ಜಿ.ಎಂ. ರಫೀಕ್ ಮತ್ತು ರಹಿಂ ಅಶ್ರಫ್ ಸೇರಿದಂತೆ ಇತರರು ಭಾಗವಹಿಸಿದ್ದರು.