ಮಡಿಕೇರಿ, ಅ. ೪: ಕೊಡವ ಜನಾಂಗದ ಬೇಡಿಕೆಯಾಗಿರುವ ಭೂ ರಾಜಕೀಯ ಸ್ವಾಯತ್ತತೆಯನ್ನು ಒದಗಿಸಲು ಆಯೋಗವನ್ನು ರಚಿಸುವಂತೆ ಕೋರಿ ಹಾಕಿದ್ದ ಅರ್ಜಿ ಸಂಬAಧ ಪ್ರತಿವಾದಿಗಳಾಗಿರುವ ಕೇಂದ್ರ ಸರಕಾರಕ್ಕೆ ರಾಜ್ಯ ಉಚ್ಚ ನ್ಯಾಯಾಲಯವು ರೂ.೫,೦೦೦ ದಂಡ ವಿಧಿಸಿದೆ. ಕರ್ನಾಟಕ ಉಚ್ಛ ನ್ಯಾಯಾಲಯದ ಮುಂದೆ ಹಲವು ಬಾರಿ ಅರ್ಜಿ ವಿಚಾರಣೆಗೆ ಬಂದಿದ್ದು, ಪ್ರತಿವಾದಿಗಳಲ್ಲಿ ಒಂದಾದ ಕೇಂದ್ರವು ಅರ್ಜಿಗೆ ಆಕ್ಷೇಪಿಸಲು ಹೆಚ್ಚಿನ ಸಮಯ ಬಯಸಿ ಹಲವು ಬಾರಿ ವಿಚಾರಣೆಯನ್ನು ಮುಂದೂಡುತ್ತಲೇ ಬಂದಿರುವ ಕಾರಣ ರೂ. ೫,೦೦೦ ದಂಡ ವಿಧಿಸಿ ಉಚ್ಛ ನ್ಯಾಯಾಲಯ ಆದೇಶಿಸಿದೆ. ಮುಂದಿನ ವಿಚಾರಣೆಯನ್ನು ನವೆಂಬರ್ ೨೯ ಕ್ಕೆ ಮುಂದೂಡಿದ್ದು, ಅಕ್ಟೋಬರ್ ೨೯ ರೊಳಗೆ ಆಕ್ಷೇಪಣೆಯನ್ನು ಸಲ್ಲಿಸುವಂತೆಯೂ ಅದೇಶಿಸಿದೆ. ಕರ್ನಾಟಕ ರಾಜ್ಯ ಸರಕಾರ, ಕೇಂದ್ರ ಕಾನೂನು ಇಲಾಖೆ ಹಾಗೂ ಗೃಹ ಇಲಾಖೆ ಈ ವಿಚಾರದಲ್ಲಿ ಪ್ರತಿವಾದಿಗಳಾಗಿವೆ.
ಕೊಡವ ಭೂ ರಾಜಕೀಯ ಸ್ವಾಯತ್ತತೆ ಸಂಬAಧ ಆಯೋಗ ರಚಿಸುವಂತೆ ಅರ್ಥ ಶಾಸ್ತçಜ್ಞ ಮಾಜಿ ರಾಜ್ಯ ಸಭಾ ಸದಸ್ಯ ಡಾ.ಸುಬ್ರಮಣ್ಯನ್ ಸ್ವಾಮಿ ಅವರು ಹಾಗೂ ಕೊಡವ ನ್ಯಾಷನಲ್ ಕೌನ್ಸಿಲ್ನ ಅಧ್ಯಕ್ಷ ನಂದಿನೆರವAಡ ಯು ನಾಚಪ್ಪ ಅವರು ಉಚ್ಛ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ.
ಇಂದು ಉಚ್ಛ ನ್ಯಾಯಾಲಯದಲ್ಲಿ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ ವರಾಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರುಗಳ ಸಮ್ಮುಖದಲ್ಲಿ ನಡೆದ ವಿಚಾರಣೆಯಲ್ಲಿ ಅರ್ಜಿದಾರರ ಪರ ಡಾ.ಸುಬ್ರಮಣ್ಯನ್ ಸ್ವಾಮಿ ಹಾಗೂ ವಕೀಲರಾದ ಕೀರನ್ ನಾರಾಯಣ್ ಅವರು ವಾದ ಮಂಡಿಸಿದರು. ಕೊಡವ ನ್ಯಾಷನಲ್ ಕೌನ್ಸಿಲ್ನ ಎನ್.ಯು ನಾಚಪ್ಪ, (ಮೊದಲ ಪುಟದಿಂದ) ವಿರಾಟ್ ಹಿಂದೂಸ್ತಾನ್ ಸಂಗಮ್ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಸಿ.ಎನ್.ಸಿ ಯ ಸದಸ್ಯರಾದ ಲೆ.ಕ ಬಿ.ಎಂ ಪಾರ್ವತಿ, ಶ್ರೇಯ ನಾಚಪ್ಪ, ಅರೆಯಡ ಗಿರೀಶ್, ಕಿರಿಯಮಾಡ ಶರೀನ್, ಬೇಪಡಿಯಂಡ ಬಿದ್ದಪ್ಪ, ಅಪ್ಪಾರಂಡ ಪೂವಣ್ಣ, ವಿ.ಎಚ್.ಎಸ್ ರಾಜ್ಯ ಅಧ್ಯಕ್ಷ ನಿಕುಂಜ್ ಶಾ ಹಾಗೂ ಸದಸ್ಯರಾದ ನಟರಾಜ್, ರವಿಶಂಕರ್, ವಕೀಲರುಗಳಾದ ಪರ್ತ್, ಶ್ರೀಕಂಠ ಶರ್ಮ ಹಾಗೂ ಮಂಜುನಾಥ್ ಹಾಜರಿದ್ದು, ಈ ಬಗ್ಗೆ ಸುಬ್ರಮಣ್ಯನ್ ಸ್ವಾಮಿ ಅವರೊಂದಿಗೆ ಸಮಾಲೋಚನೆ ನಡೆಸಿದರು.