ನಾಪೋಕ್ಲು, ಅ. ೪: ಇಲ್ಲಿನ ಕೊಡವ ಸಮಾಜದಲ್ಲಿ ನಾಪೋಕ್ಲು ಲಯನ್ಸ್ ಮತ್ತು ಲಿಯೋ ಸಂಸ್ಥೆ ವತಿಯಿಂದ ಪ್ರಾಂತೀಯ ಅಧ್ಯಕ್ಷರ ಅಧಿಕೃತ ಭೇಟಿ ಸಮಾರಂಭವನ್ನು ಹಮ್ಮಿಕೊಳ್ಳಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ನಾಪೋಕ್ಲು ಲಯನ್ಸ್ ಸಂಸ್ಥೆಯ ಅಧ್ಯಕ್ಷ ಕನ್ನಂಬಿರ ಸುದಿ ತಿಮ್ಮಯ್ಯ ವಹಿಸಿದ್ದರು. ಸಮಾರಂಭದಲ್ಲಿ ನಿವೃತ್ತ ಉಪ ಪ್ರಾಂಶುಪಾಲೆ ಪಿ.ಕೆ. ನಳಿನಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪಿ.ಕೆ. ನಳಿನಿ ಅವರು ಶಾಲೆಯಲ್ಲಿ ಶಿಕ್ಷಣವೇ ಮಕ್ಕಳಿಗೆ ಸಂಬAಧಗಳು, ಹಣದ ಮೌಲ್ಯ, ಸಮಯಪ್ರಜ್ಞೆ ಇದರ ಬಗ್ಗೆ ಶಿಕ್ಷಕರು ತಿಳಿಯಪಡಿಸಬೇಕು, ಸರ್ಕಾರಿ ಶಾಲೆಯಲ್ಲಿ ಓದಿ ಡಾಕ್ಟರ್, ಇಂಜಿನಿಯರ್ ಆದವರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಯಾವುದೇ ಶಾಲೆಯಲ್ಲಿ ಕಲಿತರೂ ಉನ್ನತ ಸ್ಥಾನಕ್ಕೇರಬಹುದು ಎಂದರು.

ಲಯನ್ಸ್ ಪ್ರಾಂತೀಯ ಅಧ್ಯಕ್ಷ ನವೀನ್ ಅಂಬೆಕಲ್, ಎಂ.ಜೆ.ಎಫ್. ಸಂಘದ ದೇವೋದ್ದೇಶಗಳ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಲಿಯೋ ಸಂಸ್ಥೆಯ ಉಪಾಧ್ಯಕ್ಷ ರೋಹನ್ ಮಾಚಯ್ಯ, ಪ್ರಾಂತೀಯ ಪ್ರಥಮ ಮಹಿಳಾ ಸದಸ್ಯೆ ಪ್ರಿಯಾ ನವೀನ್, ಕಾರ್ಯದರ್ಶಿ ಮಾದೆಯಂಡ ಕುಟ್ಟಪ್ಪ, ಖಜಾಂಚಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ, ಪ್ರಾಂತೀಯ ಸಂಪರ್ಕಾಧಿಕಾರಿ ಡಾ. ಕೋಟೆರ ಪಂಚಮ್ ತಿಮ್ಮಯ್ಯ, ವಲಯಾಧ್ಯಕ್ಷ ಸತೀಶ್ ಉಪಸ್ಥಿತರಿದ್ದರು. ಕಾಂಡAಡ ರೇಖಾ ಪೊನ್ನಣ್ಣ ಧ್ವಜ ವಂದನೆ ಸಲ್ಲಿಸಿ, ಅಪ್ಪುಮಣಿಯಂಡ ಶೈಲಾ ಭೀಮಯ್ಯ ಪ್ರಾರ್ಥಿಸಿದರು. ಸುದೀಪ್ ತಿಮ್ಮಯ್ಯ ಸ್ವಾಗತಿಸಿ, ಮಂದಪAಡ ಪುಷ್ಪಾ ಸತೀಶ್ ಅತಿಥಿಗಳ ಪರಿಚಯ ಮಾಡಿ ಕುಟ್ಟಪ್ಪ ವಂದಿಸಿದರು.