*ಗೋಣಿಕೊಪ್ಪ, ಅ. ೪: ಗೋಣಿಕೊಪ್ಪ ಅರುವತ್ತೊಕ್ಲುವಿನ ಸರ್ವದೈವತಾ ಪದವಿಪೂರ್ವ ಕಾಲೇಜಿನ ಬಾಲಕ, ಬಾಲಕಿಯರ ತಂಡ ಜಿಲ್ಲಾಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದೆ. ಮಾದಾಪುರದ ಡಿ. ಚೆನ್ನಮ್ಮ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಇಲಾಖೆ, ಪದವಿಪೂರ್ವ ಶಿಕ್ಷಣ ಇಲಾಖೆ, ಸಹಯೋಗದಲ್ಲಿ ನಡೆದ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ ತಂಡ ಭಾಗವಹಿಸಿತ್ತು. ತಾಲೂಕು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿಯೂ ಬಾಲಕಿಯರು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ ಎಂದು ದೈಹಿಕ ಶಿಕ್ಷಕ ವಿ.ಎನ್. ಪ್ರಮೋದ್ ತಿಳಿಸಿದ್ದಾರೆ.