ಶನಿವಾರಸಂತೆ, ಅ. ೪: ಕೊಡಗು ಜಿಲ್ಲಾ ವೀರಶೈವ ಲಿಂಗಾಯತ ಸಂಘಟನಾ ವೇದಿಕೆ, ತಪೋವನ ಕ್ಷೇತ್ರ ಮನೆಹಳ್ಳಿ ಮಠ, ನೀರುಗುಂದ ಗ್ರಾಮದ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿ, ಕಿರಿಕೊಡ್ಲಿ, ಕೊಡ್ಲಿಪೇಟೆ, ಕೋಟೆಯೂರು, ಗೌಡಳ್ಳಿ ನೇಗಳ್ಳಿ ಗ್ರಾಮಗಳ ಶ್ರೀ ವೀರಭದ್ರೇಶ್ವರ ದೇವಾಲಯ ಸಮಿತಿಗಳ ಸಹಭಾಗಿತ್ವದಲ್ಲಿ ಶ್ರೀವೀರಭದ್ರೇಶ್ವರ ಜನ್ಮ ವರ್ಧಂತಿ ೫ನೇ ವರ್ಷದ ಮಹೋತ್ಸವ ಹಾಗೂ ಬಿಲ್ವಪತ್ರೆ- ರುದ್ರಾಕ್ಷಿ ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಕಿರಿಕೊಡ್ಲಿ ಮಠಾಧೀಶರಾದ ಸದಾ ಶಿವಸ್ವಾಮೀಜಿ ಚಾಲನೆ ನೀಡಿ ಮಾತನಾಡಿ, ವೀರಭದ್ರ ದೇವರು ಬದುಕಿನ ಶ್ರೇಷ್ಠ ನಡೆ-ನುಡಿಗೆ ಅಗತ್ಯವಾದ ಧರ್ಮ ಮಾರ್ಗದಲ್ಲಿ ಕೈ ಹಿಡಿದು ಮುನ್ನಡೆಸಲು ಬೆಳಕು ತೋರಿದ ಮಹಾನುಭವರು ಎಂದು ನುಡಿದರು.

ನಂತರ ಕೊಡ್ಲಿಪೇಟೆಯ ಶ್ರೀವೀರಭದ್ರೇಶ್ವರ ದೇವಾಲಯದಲ್ಲಿ ಏರ್ಪಡಿಸಿದ್ದ ಅಷ್ಟೋತ್ತರ ಪೂಜಾ ಕಾರ್ಯಕ್ರಮದಲ್ಲಿ ಕಲ್ಲುಮಠದ ಮಠಾಧೀಶ ಮಹಾಂತಸ್ವಾಮೀಜಿ ಆಶೀರ್ವಚನ ನೀಡಿ, ವೀರಭದ್ರ ಅಧರ್ಮಗಳ ವಿರುದ್ಧ ಹೋರಾಡಲು ಅವತರಿಸಿದ ಪ್ರೇರಣಾದಾಯಕನಾಗಿದ್ದು ಆತನ ಅವತಾರವೇ ಅತ್ಯಂತ ವಿಸ್ಮಯ ಮತ್ತು ಪವಾಡ ಸದೃಶವಾಗಿದೆ ಎಂದರು.

ಕಲ್ಲಳ್ಳಿ ಮಠಾಧೀಶ ರುದ್ರಮುನಿ ಸ್ವಾಮೀಜಿ, ದೊಡ್ಡಬಳ್ಳಪುರ ಮಠದ ನಿಶ್ಚಲ ದೇಶೀಕೇಂದ್ರ ಸ್ವಾಮೀಜಿ, ನೀರುಗುಂದ ಗ್ರಾಮದ ದೇವಾಲಯ ಸಮಿತಿಯ ಅಧ್ಯಕ್ಷ ಎನ್.ಎ. ಕುಮಾರ್, ಕೊಡ್ಲಿಪೇಟೆ ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್. ರುದ್ರಪ್ಪ, ಕಾರ್ಯದರ್ಶಿ ಉ.ಪಿ. ನಾಗೇಶ್, ಸಿದ್ದಗಂಗಾ ಮಠದ ಬೆಂಗಳೂರು ಶಾಖೆಯ ಮಹಿಳಾ ಸಂಘಟನಾ ಘಟಕದ ಅಧ್ಯಕ್ಷೆ ಉಷಾ ಯೋಗಾನಂದ್, ವೀರಶೈವ ಲಿಂಗಾಯತ ಸಂಘಟನಾ ವೇದಿಕೆ ರಾಷ್ಟಿçÃಯ ಸಂಜಾಲಕ ಎಸ್.ಮಹೇಶ್, ಜಿಲ್ಲಾ ಘಟಕದ ಅಧ್ಯಕ್ಷ ಹೆಚ್.ಎಂ. ದಿವಾಕರ್. ಕಾರ್ಯದರ್ಶಿ ದಯಾನಂದ್, ಸಮಿತಿ ಸದಸ್ಯರು, ಮತ್ತಿತರರು ಹಾಜರಿದ್ದರು.