ಎಲ್ಪಿಜಿ ಸಬ್ಸಿಡಿ ಮೊತ್ತ ಹೆಚ್ಚಳ
ನವದೆಹಲಿ, ಅ. ೪: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಫಲಾನುಭವಿಗಳಿಗೆ ಪ್ರತಿ ಎಲ್ಪಿಜಿ ಸಿಲಿಂಡರ್ಗೆ ನೀಡಲಾಗುತ್ತಿದ್ದ ಸಬ್ಸಿಡಿ ಮೊತ್ತವನ್ನು ೨೦೦ ರೂ.ನಿಂದ ೩೦೦ ರೂ.ಗೆ ಸರ್ಕಾರ ಹೆಚ್ಚಿಸಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ತಿಳಿಸಿದ್ದಾರೆ. ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಉಜ್ವಲ ಯೋಜನೆಯ ಫಲಾನುಭವಿಗಳು ಪ್ರಸ್ತುತ ೧೪.೨ ಕೆ.ಜಿ. ಸಿಲಿಂಡರ್ಗೆ ೭೦೩ ರೂ.ಗಳನ್ನು ಪಾವತಿಸುತ್ತಿದ್ದಾರೆ. ಇದರ ಮಾರುಕಟ್ಟೆ ಬೆಲೆ ೯೦೩ ರೂ. ಇದ್ದು, ಈಗ ಅದನ್ನು ಈಗ ೬೦೩ ರೂ. ಇಳಿಸಲಾಗಿದೆ ಎಂದು ಠಾಕೂರ್ ಹೇಳಿದ್ದಾರೆ.
ಅಬಕಾರಿ ನೀತಿ ಹಗರಣ-ಸಂಜಯ್ ಸಿಂಗ್ ಬಂಧನ
ನವದೆಹಲಿ, ಅ. ೪: ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬAಧಿಸಿದAತೆ ಜಾರಿ ನಿರ್ದೇಶನಾಲಯ ಬುಧವಾರ ಎಎಪಿ ಸಂಸದ ಸಂಜಯ್ ಸಿಂಗ್ ಅವರನ್ನು ಬಂಧಿಸಿದೆ. ಅಬಕಾರಿ ನೀತಿ ಪ್ರಕರಣಕ್ಕೆ ಸಂಬAಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬAಧ ಇಂದು ಬೆಳಿಗ್ಗೆ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಅವರ ನಿವಾಸದ ಮೇಲೆ ದಾಳಿ ನಡೆಸಿದ್ದ ಇಡಿ ಅಧಿಕಾರಿಗಳು, ಸತತ ೧೧ ಗಂಟೆಗಳ ವಿಚಾರಣೆ ಬಳಿಕ ಅವರನ್ನು ಬಂಧಿಸಿದೆ. ಸಂಜಯ್ ಸಿಂಗ್ ಅವರು ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬAಧಿಸಿದAತೆ ಬಂಧಿತರಾದ ಎರಡನೇ ಎಎಪಿ ನಾಯಕರಾಗಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖ ಸಾಕ್ಷಿದಾರನಾಗಿರುವ ಆರೋಪಿ ಉದ್ಯಮಿ ದಿನೇಶ್ ಅರೋರಾ ಅವರು ಸಂಜಯ್ ಸಿಂಗ್ ಹೆಸರು ಪ್ರಸ್ತಾಪಿಸಿದ್ದರು.
ಪ್ರಮುಖ ಹೆದ್ದಾರಿಗಳಲ್ಲಿ ಎ.ಐ. ಕ್ಯಾಮರಾ!
ಬೆಂಗಳೂರು, ಅ. ೪: ವಾಹನಗಳ ಅತಿಯಾದ ವೇಗ ಹಾಗೂ ಸಂಚಾರ ನಿಯಮ ಉಲ್ಲಂಘನೆ ಮೇಲೆ ಕಣ್ಗಾವಲು ಇಡಲು ರಾಜ್ಯದ ಪ್ರಮುಖ ಹೆದ್ದಾರಿಗಳಲ್ಲಿ ಎ.ಐ. (ಕೃತಕ ಬುದ್ಧಿಮತ್ತೆ) ಕ್ಯಾಮರಾ ಅಳವಡಿಸಲು ಸಾರಿಗೆ ಇಲಾಖೆ ಮುಂದಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಆರು ಹೆದ್ದಾರಿಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಸಂಚಾರ ನಿಯಮ ಉಲ್ಲಂಘಿಸಿದ್ದರೆ ವಾಹನದ ಮಾಲೀಕರಿಗೆ ದಂಡ ಸಹ ಬೀಳಲಿದೆ. ಬೆಂಗಳೂರು-ಮೈಸೂರು ಹೆದ್ದಾರಿ, ರಾಷ್ಟಿçÃಯ ಹೆದ್ದಾರಿ-೪ರ ಪಾರ್ಲೆ-ಜಿ ಕಾರ್ಖಾನೆ ಬಳಿ, ತುಮಕೂರಿನ ಕ್ಯಾತ್ಸಂದ್ರ, ರಾಷ್ಟಿçÃಯ ಹೆದ್ದಾರಿ ೭ರ ದೇವನಹಳ್ಳಿ ಟೋಲ್ಗೇಟ್, ಹೊಸೂರು ರಸ್ತೆಯ ಅತ್ತಿಬೆಲೆ ಹಾಗೂ ರಾಷ್ಟಿçÃಯ ಹೆದ್ದಾರಿ ೭೩ರ ಹಿಟ್ನಾಳ ಟೋಲ್ಗೇಟ್ ಬಳಿ ಎ.ಐ. ಕ್ಯಾಮೆರಾ ಅಳವಡಿಸಲು ಇಲಾಖೆ ತೀರ್ಮಾನಿಸಿದೆ. ಇತ್ತೀಚೆಗೆ ಹೆದ್ದಾರಿಗಳಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ವಾಹನಗಳ ಅತಿಯಾದ ವೇಗದಿಂದ ಸಾವು ಸಂಭವಿಸುತ್ತಿವೆ. ವಾಹನಗಳ ವೇಗ ತಗ್ಗಿಸಲು ಈ ಕ್ರಮ ಕೈಗೊಳ್ಳಲಾಗಿದೆ.
ಬಾಲಿವುಡ್ ನಟ ರಣಬೀರ್ಗೆ ಇಡಿ ಸಮನ್ಸ್
ನವದೆಹಲಿ, ಅ. ೪: ಛತ್ತೀಸ್ಗಢದ ಮಹದೇವ್ ಬೆಟ್ಟಿಂಗ್ ಆ್ಯಪ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬAಧಿಸಿದAತೆ ಬಾಲಿವುಡ್ ನಟ ರಣಬೀರ್ ಕಪೂರ್ ಅವರಿಗೆ ಜಾರಿ ನಿರ್ದೇಶನಾಲಯ ನೋಟೀಸ್ ಜಾರಿ ಮಾಡಿದ್ದು, ಶುಕ್ರವಾರ ವಿಚಾರಣೆಗೆ ಕರೆಸಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. ಕಳೆದ ತಿಂಗಳು ಮಹದೇವ್ ಆನ್ಲೈನ್ ಬೆಟ್ಟಿಂಗ್ ಪ್ರಕರಣ ಸಂಬAಧಪಟ್ಟAತೆ ೪೧೭ ಕೋಟಿ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದು ಏಜೆನ್ಸಿಯೊಂದು ತನಿಖೆ ಮಾಡಿ ಹೇಳಿತ್ತು. ಈಗ ಈ ವಿಚಾರವಾಗಿ ನಟ ಬಾಲಿವುಡ್ ನಟ ರಣಬೀರ್ ಕಪೂರ್ಗೆ ಸಮನ್ಸ್ ಜಾರಿಗೊಳಿಸಲಾಗಿದೆ. ಈ ಪ್ರಕರಣದಲ್ಲಿ ಸುಮಾರು ೧೪-೧೫ ಸೆಲೆಬ್ರಿಟಿಗಳು ಮತ್ತು ನಟರನ್ನು ಸಹ ವಿಚಾರಣೆಗೆ ಒಳಪಡಿಸಲು ಜಾರಿ ನಿರ್ದೇಶನಾಲಯ ಶೀಘ್ರದಲ್ಲೇ ಸಮನ್ಸ್ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಏಷ್ಯನ್ ಗೇಮ್ಸ್ನಲ್ಲಿ ಭಾರತ ಸಾಧನೆ
ಹ್ಯಾಂಗ್ಝೌ, ಅ. ೪: ಚೀನಾದ ಹ್ಯಾಂಗ್ಝೌನಲ್ಲಿ ನಡೆಯುತ್ತಿರುವ ೨೦೨೩ರ ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರೆದಿದ್ದು, ಟೋಕಿಯೊ ಒಲಿಂಪಿಕ್ ಪದಕ ವಿಜೇತೆ ಲೊವ್ಲಿನಾ ಬೊರ್ಗೊಹೈನ್ ಅವರು ಬೆಳ್ಳಿ ಪದಕ ಗೆದ್ದಿದ್ದಾರೆ. ಇಂದು ನಡೆದ ಬಾಕ್ಸಿಂಗ್ ಸ್ಪರ್ಧೆಯ ಮಹಿಳೆಯರ ೭೫ ಕೆ.ಜಿ. ವಿಭಾಗದ ಫೈನಲ್ನಲ್ಲಿ ಲೊವ್ಲಿನಾ ಬೊರ್ಗೊಹೈನ್ ಅವರು, ಹಾಲಿ ವಿಶ್ವ ಚಾಂಪಿಯನ್ ಮತ್ತು ಎರಡು ಬಾರಿ ಒಲಿಂಪಿಕ್ ಪದಕ ವಿಜೇತ ಲಿ ಕಿಯಾನ್ ವಿರುದ್ಧ ಸೋಲು ಅನುಭವಿಸುವುದರೊಂದಿಗೆ ಬೆಳ್ಳಿಗೆ ತೃಪ್ತಿಪಟ್ಟರು. ಇನ್ನು ಬಾಕ್ಸಿಂಗ್ ಸ್ಪರ್ಧೆಯ ಮಹಿಳೆಯರ ೫೭ ಕೆ.ಜಿ. ವಿಭಾಗದ ಸೆಮಿಫೈನಲ್ನಲ್ಲಿ ಪರ್ವೀನ್ ಹೂಡಾ ಅವರು ಎರಡು ಬಾರಿಯ ವಿಶ್ವ ಚಾಂಪಿಯನ್ ಚೈನೀಸ್ ತೈಪೆಯ ಲಿನ್ ಯು ಟಿಂಗ್ ವಿರುದ್ಧ ಸೋಲು ಅನುಭವಿಸುವುದರೊಂದಿಗೆ ಕಂಚಿಗೆ ತೃಪ್ತಿಪಟ್ಟರು. ಈ ಮೂಲಕ ಭಾರತದ ಬಾಕ್ಸರ್ಗಳು ಒಂದು ಬೆಳ್ಳಿ ಮತ್ತು ನಾಲ್ಕು ಕಂಚು ಸೇರಿದಂತೆ ಐದು ಪದಕಗಳನ್ನು ಗೆದ್ದಿದ್ದಾರೆ. ಕಳೆದ ಆವೃತ್ತಿಯಲ್ಲಿ ಭಾರತ ಒಂದು ಚಿನ್ನ ಮತ್ತು ಒಂದು ಕಂಚು ಗೆದ್ದಿತ್ತು.