ಗೋಣಿಕೊಪ್ಪ ವರದಿ, ಅ. ೪: ಲಯನ್ಸ್ ಸೇವೆ ಸಾರ್ವಜನಿಕರಿಗೆ ನೆರವಾಗುತ್ತಿದೆ ಎಂದು ಲಯನ್ಸ್ ಪ್ರಾದೇಶಿಕ ಮುಖ್ಯಸ್ಥ ನವೀನ್ ಅಂಬೆಕಲ್ ಹೇಳಿದರು.

ಗೋಣಿಕೊಪ್ಪ ಲಯನ್ಸ್ ಕ್ಲಬ್ ವತಿಯಿಂದ ಆಂತುರ ಕೂರ್ಗ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾದೇಶಿಕ ಲಯನ್ಸ್ ಮುಖ್ಯಸ್ಥರ ಭೇಟಿ ಕಾರ್ಯಕ್ರಮದಲ್ಲಿ ಮಾತನಾಡಿ, ಲಯನ್ಸ್ ಸಂಸ್ಥೆ ವಿಶ್ವ ಮಟ್ಟದಲ್ಲಿ ತನ್ನದೇ ಆದ ರೀತಿಯಲ್ಲಿ ಸಾಕಷ್ಟು ಯೋಜನೆಗಳನ್ನು ನೀಡುತ್ತಾ ಬಂದಿದೆ. ಗೋಣಿಕೊಪ್ಪ ಲಯನ್ಸ್ ಕ್ಲಬ್ ೫೦ ವರ್ಷದ ಸೇವೆ ಸ್ಥಳೀಯರಿಗೆ ಲಭಿಸಿದೆ. ಶಿಕ್ಷಣ ಸಂಸ್ಥೆ, ಡಯಾಲಿಸಿಸ್ ಘಟಕ, ಮೊಬೈಲ್ ಚಿತಾಗಾರ ಸೇವೆ ಎಲ್ಲ ವರ್ಗಕ್ಕೂ ಹಂಚಿಕೆಯಾಗುತ್ತಿದೆ ಎಂದು ಶ್ಲಾಘಿಸಿದರು.

ಅಧ್ಯಕ್ಷ ಪೊನ್ನಿಮಾಡ ಲೋಕೇಶ್ ಕಾರ್ಯಪ್ಪ, ವಲಯ ಅಧ್ಯಕ್ಷ ಮನ್ನಕಮನೆ ಬಾಲಕೃಷ್ಣ, ವಲಯ ರಾಯಭಾರಿ ಧನು ಉತ್ತಯ್ಯ, ಗೋಣಿಕೊಪ್ಪ ಲಯನ್ಸ್ ಕಾರ್ಯದರ್ಶಿ ಸಿ.ಟಿ. ಅಪ್ಪಣ್ಣ, ಖಜಾಂಚಿ ಎಂ.ಬಿ. ಕುಶಾಲಪ್ಪ ಇದ್ದರು.