ನೇಪಾಳ-ದೆಹಲಿಯಲ್ಲಿ ಭೂಕಂಪ
ನವದೆಹಲಿ, ಅ. ೩: ನೆರೆಯ ನೇಪಾಳದಲ್ಲಿ ಇಂದು ಪ್ರಬಲ ಭೂಕಂಪನ ಸಂಭವಿಸಿದ್ದು, ಕೇವಲ ೧ ಗಂಟೆಗಳ ಅವಧಿಯಲ್ಲಿ ಸತತ ೪ ಭೂಕಂಪನಗಳು ವರದಿಯಾಗಿವೆ. ಪಶ್ಚಿಮ ನೇಪಾಳದಲ್ಲಿ ೧೦ ಕಿಲೋಮೀಟರ್ ಆಳದಲ್ಲಿ ಮಧ್ಯಾಹ್ನ ೨.೨೫ಕ್ಕೆ ೪.೬ ತೀವ್ರತೆಯ ಮೊದಲ ಭೂಕಂಪ ಸಂಭವಿಸಿದೆ, ನಂತರ ಮೊದಲ ಕಂಪನ ಸಂಭವಿಸಿದ ೨೫ ನಿಮಿಷಗಳಲ್ಲಿ ಅಂದರೆ ೨.೫೧ಕ್ಕೆ ೬.೨ ತೀವ್ರತೆಯ ೨ನೇ ಕಂಪನ ಸಂಭವಿಸಿದೆ. ಇದಾದ ಬಳಿಕ ಮತ್ತೆ ಅರ್ಧ ಗಂಟೆಯ ಅವಧಿಯಲ್ಲಿ ಇನ್ನೂ ಎರಡು ಕಂಪನಗಳು ದಾಖಲಾಗಿದ್ದು, ಮಧ್ಯಾಹ್ನ ೩.೦೬ರಲ್ಲಿ ೩.೬ ತೀವ್ರತೆಯೊಂದಿಗೆ ೧೫ ಕಿ.ಮೀ. ಆಳದಲ್ಲಿ ೩ನೇ ಕಂಪನ ದಾಖಲಾಗಿದೆ. ಇದಾದ ಕೆಲವೇ ನಿಮಿಷಗಳ ಅಂತರದಲ್ಲಿ ೪ನೇ ಕಂಪನ ೩.೧ ತೀವ್ರತೆಯಲ್ಲಿ ೧೦ ಕಿ.ಮೀ. ಆಳದಲ್ಲಿ ದಾಖಲಾಗಿದೆ. ನೇಪಾಳ ಮಾತ್ರವಲ್ಲದೇ ದೆಹಲಿ-ಎನ್ಸಿಆರ್ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿ ಕಂಪನಗಳು ದಾಖಲಾಗಿವೆ. ಎರಡನೇ ಭೂಕಂಪದ ನಂತರ ದೆಹಲಿ ಮತ್ತು ರಾಷ್ಟಿçÃಯ ರಾಜಧಾನಿ ಪ್ರದೇಶದ ಜನರು ಪ್ರಬಲವಾದ ಕಂಪನಗಳನ್ನು ವರದಿ ಮಾಡಿದ್ದಾರೆ ಮತ್ತು ತಮ್ಮ ಕಚೇರಿಗಳು ಮತ್ತು ಬಹುಮಹಡಿ ವಸತಿ ಕಟ್ಟಡಗಳಿಂದ ಹೊರಬಂದಿದ್ದಾರೆ. ಅಂತೆಯೇ ಚಂಡೀಗಢ, ಜೈಪುರ ಮತ್ತು ಉತ್ತರ ಭಾರತದ ಇತರ ಭಾಗಗಳಲ್ಲಿಯೂ ಕಂಪನದ ಅನುಭವವಾಗಿದೆ.
ಭಾರತ ಮಹಿಳಾ ತಂಡ ಸೆಮಿಗೆ ಪ್ರವೇಶ
ಹ್ಯಾಂಗ್ಝೌ, ಅ. ೩: ಭಾರತ ವನಿತೆಯರ ಹಾಕಿ ತಂಡವು ಹಾಂಕಾAಗ್ ಚೀನಾ ವಿರುದ್ಧ ೧೩ ಗೋಲುಗಳನ್ನು ಗಳಿಸಿ ಏಳ್ಯನ್ ಗೇಮ್ಸ್ ಸೆಮಿಫೈನಲ್ಗೆ ಪ್ರವೇಶಿಸಿದೆ. ಏಷ್ಯನ್ ಗೇಮ್ಸ್ನಲ್ಲಿ ಮಹಿಳೆಯರ ಹಾಕಿ ಪಂದ್ಯದಲ್ಲಿ ಭಾರತ ತಂಡವು ಸೆಮಿಫೈನಲ್ ಪ್ರವೇಶಿಸಿದೆ. ಹಾಂಗ್ಝೌನಲ್ಲಿ ನಡೆದ ಪೂಲ್ ಎ ಪಂದ್ಯದಲ್ಲಿ ಹಾಂಕಾAಗ್ ಚೀನಾ ವಿರುದ್ಧ ಭಾರತ ಮಹಿಳಾ ಹಾಕಿ ತಂಡ ೧೩-೦ ಅಂತರದ ಭರ್ಜರಿ ಜಯ ಸಾಧಿಸಿದೆ.
ಏಷ್ಯನ್ ಗೇಮ್ಸ್-ಸೆಮೀಸ್ಗೆ ಭಾರತ ಕ್ರಿಕೆಟ್ ತಂಡ ಲಗ್ಗೆ
ಹ್ಯಾಂಗ್ಝೌ, ಅ. ೩: ಏಷ್ಯನ್ ಗೇಮ್ಸ್ ೨೦೨೩ ಕ್ರೀಡಾಕೂಟದ ಪುರುಷರ ಕ್ರಿಕೆಟ್ ವಿಭಾಗದಲ್ಲಿ ನೇಪಾಳ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ಮಾಡಿರುವ ಭಾರತ ತಂಡದ ಬ್ಯಾಟರ್ ಯಶಸ್ವಿ ಜೈಸ್ವಾಲ್ ಭರ್ಜರಿ ಬ್ಯಾಟಿಂಗ್ ಮೂಲಕ ದಾಖಲೆಗಳನ್ನೆಲ್ಲಾ ಧೂಳಿಪಟ ಮಾಡಿದ್ದಾರೆ. ಚೀನಾದ ಹ್ಯಾಂಗ್ ಝೌನಲ್ಲಿ ನಡೆದ ಏಷ್ಯನ್ ಗೇಮ್ಸ್ನ ಪುರುಷರ ಕ್ರಿಕೆಟ್ನ ಮೊದಲ ಕ್ವಾರ್ಟರ್ ಫೈನಲ್ನಲ್ಲಿ ಯಶಸ್ವಿ ನೇಪಾಳ ವಿರುದ್ಧ ಶತಕ ಬಾರಿಸಿದರು. ಯಶಸ್ವಿ ಜೈಸ್ವಾಲ್ ೪೯ ಎಸೆತಗಳಲ್ಲಿ ೧೦೦ ರನ್ಗಳಿಸಿ ಔಟಾದರು. ಈ ಇನ್ನಿಂಗ್ಸ್ನಲ್ಲಿ ಅವರು ೭ ಸಿಕ್ಸರ್ಗಳು ಮತ್ತು ೮ ಬೌಂಡರಿಗಳನ್ನು ಹೊಡೆದರು, ಅವರ ಸ್ಟೆçöÊಕ್ ರೇಟ್ ೨೦೪ ಆಗಿತ್ತು. ಈ ಅದ್ಭುತ ಬ್ಯಾಟಿಂಗ್ ಮೂಲಕ ಜೈಸ್ವಾಲ್, ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪರ ಮೊದಲ ಶತಕ ಬಾರಿಸಿದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಈದ್ ಮೆರವಣಿಗೆ ವೇಳೆ ಗಲಭೆ-೬೦ ಮಂದಿ ಬಂಧನ
ಬೆAಗಳೂರು, ಅ. ೩: ಜಿಲ್ಲಾ ಕೇಂದ್ರ ಶಿವಮೊಗ್ಗ ನಗರದಲ್ಲಿ ಈದ್ ಮಿಲಾದ್ ಮೆರವಣಿಗೆ ವೇಳೆ ನಡೆದ ಹಿಂಸಾಚಾರಕ್ಕೆ ಸಂಬAಧಿಸಿದAತೆ ೨೪ ಪ್ರಕರಣಗಳು ದಾಖಲಾಗಿದ್ದು, ೬೦ ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ. ರಾಗಿಗುಡ್ಡ ಪ್ರದೇಶದಲ್ಲಿ ಭಾನುವಾರ ನಡೆದ ಕಲ್ಲು ತೂರಾಟದ ನಂತರ ಉದ್ವಿಗ್ನತೆ ಉಂಟಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಪರಿಸ್ಥಿತಿ ಈಗ ಶಾಂತಿಯುತ ವಾಗಿದೆ ಮತ್ತು ನಿಯಂತ್ರಣದಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ರಾಗಿಗುಡ್ಡದಲ್ಲಿನ ಘಟನೆಗೆ ಸಂಬAಧಿಸಿದAತೆ ೨೪ ಎಫ್ಐಆರ್ ದಾಖಲಿಸಿದ್ದು, ೬೦ ಜನರನ್ನು ಬಂಧಿಸಿದ್ದೇವೆ. ಈಗ ಪರಿಸ್ಥಿತಿ ಶಾಂತವಾಗಿದ್ದು, ಇದು ನಗರದ ಇತರೆಡೆ ಯಾವುದೇ ಪರಿಣಾಮ ಬೀರಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಸುದ್ದಿಗಾರರಿಗೆ ತಿಳಿಸಿದರು. ಈ ಮಧ್ಯೆ ಬೆಂಗಳೂರಿನಲ್ಲಿ ಮಾತನಾಡಿದ ಗೃಹ ಸಚಿವ ಡಾ. ಜಿ.ಪರಮೇಶ್ವರ, ಎಲ್ಲವೂ ನಿಯಂತ್ರಣದಲ್ಲಿದೆ, ಆತಂಕಪಡುವ ಅಗತ್ಯವಿಲ್ಲ. ತನಿಖೆ ನಡೆಯುತ್ತಿದೆ, ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿಪಿಯನ್ನು ಅಲ್ಲಿಗೆ ಕಳುಹಿಸಲಾಗಿತ್ತು. ಅವರು ಈಗ ಬರುತ್ತಿದ್ದು, ತನಿಖೆ ಪೂರ್ಣಗೊಂಡ ಅವರು ವರದಿಯನ್ನು ಸಲ್ಲಿಸಲಿದ್ದಾರೆ ಎಂದರು.
ಶAಕಿತ ಐಸಿಸ್ ಉಗ್ರನಿಗೆ ಕರ್ನಾಟಕದ ನಂಟು
ಹುಬ್ಬಳ್ಳಿ, ಅ. ೩: ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯೊAದಿಗೆ ನಂಟು ಹೊಂದಿದ್ದ ಎನ್ನಲಾಗಿರುವ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಶಹನವಾಜ್ ಅಲಿಯಾಸ್ ಶಫಿ ಉಜ್ ಎಂಬಾತನನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಈ ವಿಚಾರಕ್ಕೆ ಸಂಬAಧಿಸಿದAತೆ ಕರ್ನಾಟಕ ಪೊಲೀಸರು ದೆಹಲಿ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ. ಭಯೋತ್ಪಾದಕ ಶಹನವಾಜ್ ಬಂಧನದ ನಂತರ, ಆತನಿಗೆ ಕರ್ನಾಟಕದ ನಂಟಿರುವ ಕುರಿತು ಬೆಳಕಿಗೆ ಬಂದಿತ್ತು. ಬಂಧಿತ ಉಗ್ರನಿಗೆ ಹುಬ್ಬಳ್ಳಿ-ಧಾರವಾಡದ ನಂಟಿರುವುದು ಬೆಳಕಿಗೆ ಬಂದಿರುವುದರಿAದ ಎಲ್ಲ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದರು.
ಕೇರಳ ರಾಜ್ಯದಲ್ಲಿ ಭಾರಿ ಮಳೆ-ಪ್ರವಾಹ ಪರಿಸ್ಥಿತಿ ಸೃಷ್ಟಿ
ತಿರುವನಂತಪುರ, ಸೆ. ೩: ಕಳೆದ ಕೆಲವು ದಿನಗಳಿಂದ ಕೇರಳದ ಹಲವು ಭಾಗಗಳಲ್ಲಿ ಭಾರಿ ಮಳೆಯಾಗುತ್ತಿರುವ ಪರಿಣಾಮ ವಿವಿಧ ಪ್ರದೇಶಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಮಂಗಳವಾರ ಶಾಲೆಗಳಿಗೆ ರಜೆ ಘೋಷಿಸ ಲಾಗಿದೆ. ತೀವ್ರ ಮಳೆ ಹಿನ್ನೆಲೆಯಲ್ಲಿ ಕೊಟ್ಟಾಯಂ, ವೈಕಂ ಮತ್ತು ಚಂಗನಾಕ್ಕೇರಿ ತಾಲೂಕುಗಳಲ್ಲಿ ಜಿಲ್ಲಾಡಳಿತವು ರಜೆ ಘೋಷಿಸಿದೆ. ಅಲ್ಲಿ ೧೭ ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ೨೪೬ ಮಂದಿ ಆಶ್ರಯ ಪಡೆದಿದ್ದಾರೆ. ಇಂದು ಕೇರಳದ ತಿರುವನಂತಪುರ, ಕೊಲ್ಲಂ, ಪತ್ತನಂತಿಟ್ಟ, ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಯೆಲ್ಲೋ ಅಲರ್ಟ್ ಘೋಷಿಸಿದೆ.