ಗೋಣಿಕೊಪ್ಪ ವರದಿ, ಅ. ೩: ಕದನೂರು ಗ್ರಾಮ ಪಂಚಾಯಿತಿ ವತಿಯಿಂದ ಅರಮೇರಿ ಗ್ರಾಮಸ್ಥರ ಸಹಕಾರದಲ್ಲಿ ಶ್ರಮದಾನ ನಡೆಸಲಾಯಿತು.

ಭಗವತಿ ದವಸ ಭಂಡಾರದಿAದ ೨ ಕಿ.ಮೀ. ದೂರದ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹೆಕ್ಕಿ ಸ್ವಚ್ಛಗೊಳಿಸಲಾಯಿತು. ಗ್ರಾ.ಪಂ. ಅಧ್ಯಕ್ಷ ಮುಂಡಚಾಡೀರ ಭರತ್, ಪಿಡಿಓ ಮಂಜುಳ, ವಾರ್ಡ್ ಸದಸ್ಯೆ ಸೋಮೆಯಂಡ ರೇಷ್ಮ ತಿಮ್ಮಯ್ಯ, ಕಾವೇರಿ ಇದ್ದರು.ಮಡಿಕೇರಿ, ಅ. ೩: ಕುಂಜಿಲ-ಕಕ್ಕಬ್ಬೆ ಗ್ರಾಮ ಪಂಚಾಯಿತಿ ವತಿಯಿಂದ ಸ್ವಚ್ಛತಾ ಕಾರ್ಯಕ್ರಮವನ್ನು ಇಗ್ಗುತ್ತಪ್ಪ ದೇವಾಲಯ ಸುತ್ತಮುತ್ತ ಹಮ್ಮಿಕೊಳ್ಳಲಾಗಿತ್ತು.