ನಾಪೋಕ್ಲು, ಅ. ೩: ಮೂರ್ನಾಡು ಪದವಿ ಕಾಲೇಜಿನ ಉಪನ್ಯಾಸಕ ನಾಟೋಳಂಡ ನವೀನ್ ಹಾಗೂ ವೀರಾಜಪೇಟೆ ಕಾವೇರಿ ಪದವಿ ಕಾಲೇಜಿನ ಉಪನ್ಯಾಸಕ ರಾಘವೇಂದ್ರ ಎಲ್.ಆರ್. ಅವರು ಬರೆದಿರುವ ಫಿನಾಂಶಿಯಲ್ ಮ್ಯಾನೇಜ್ಮೆಂಟ್ ವಿಷಯದ ಪಠ್ಯಪುಸ್ತಕವನ್ನು ಕಟೀಲು ಶ್ರೀ ದುರ್ಗಾಪರಮೇಶ್ವರಿ ಪದವಿ ಕಾಲೇಜಿನಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಕೃಷ್ಣ ಕಾಂಚನ್ ಬಿಡುಗಡೆಗೊಳಿಸಿದರು.
ರಾಷ್ಟಿçÃಯ ಶಿಕ್ಷಣ ನೀತಿಯ ಅನ್ವಯ ಎಲ್ಲಾ ವಿಶ್ವವಿದ್ಯಾನಿಯಗಳ ತೃತೀಯ ಬಿಕಾಂ ಪದವಿ ವಿದ್ಯಾರ್ಥಿಗಳಿಗೆ ಅಭ್ಯಾಸಿಸಲು ಈ ಪುಸ್ತಕವನ್ನು ಹೊರತರಲಾಗಿದೆ ಎಂದು ಪುಸ್ತಕದ ಲೇಖಕರಾದ ನಾಟೋಳಂಡ ನವೀನ್ ಮತ್ತು ರಾಘವೇಂದ್ರ ತಿಳಿಸಿದ್ದಾರೆ.