ಕಾಯಪಂಡ ಶಶಿ ಸೋಮಯ್ಯ
ಮಡಿಕೇರಿ, ಅ. ೪: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿರುವ ಗಾಂಧಿ ಮೈದಾನದಲ್ಲಿ ಪ್ರಸ್ತುತ ಇರುವ ಗಾಂಧಿ ಮಂಟಪವನ್ನು ಗಾಂಧಿ ಸ್ಮಾರಕ ಭವನ ಉದ್ಯಾನವನ್ನಾಗಿ ರೂಪುಗೊಳಿಸಿ ರಾಷ್ಟçಪಿತನಿಗೆ ಗೌರವ ಸೂಚಕ ಸ್ಥಳವಾಗಿಸುವ ಯೋಜನೆಗೆ ಕೊನೆಗೂ ಕಾಲ ಕೂಡಿ ಬಂದಿದೆ. ಈ ಯೋಜನೆ ಕಳೆದ ಹಲವಷ್ಟು ವರ್ಷಗಳಿಂದಲೇ ಚರ್ಚೆಯಲ್ಲಿ ತ್ತಾದರೂ ಕೆಲವಾರು ಕಾರಣಗಳಿಂದ ಇದಕ್ಕೆ ಈತನಕವೂ ಚಾಲನೆ ಸಿಕ್ಕಿರಲಿಲ್ಲ. ಇದೀಗ ಈ ಯೋಜನೆಯನ್ನು ಕಾರ್ಯಗತಗೊಳಿಸುವ ಯೋಜನೆಗೆ ಮುಂದಿನ ವಾರ ಶಂಕುಸ್ಥಾಪನೆ ನೆರವೇರಿಸಲಾಗುತ್ತದೆ. ಕಳೆದ ಆರ್ಥಿಕ ವರ್ಷದಲ್ಲಿ ಇದಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೂಲಕ ಸದ್ಯಕ್ಕೆ ರೂ. ೫೦ ಲಕ್ಷ ಹಣವನ್ನು ಬಿಡುಗಡೆ ಗೊಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ ಇದಕ್ಕೆ ಮಂಜೂರಾತಿ ನೀಡಲಾಗಿದ್ದು, ಇದೀಗ ರಾಜ್ಯ ಸರಕಾರವೂ ಇದನ್ನು ಅನುಮೋದನೆ ಮಾಡಿದೆ.
ಮಡಿಕೇರಿಯಲ್ಲಿರುವ ಗಾಂಧಿ ಮೈದಾನ ಹಾಗೂ ಗಾಂಧಿ ಮಂಟಪಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಸ್ವಾತಂತ್ರö್ಯ ಹೋರಾಟದ ನೇತಾರರಾದ ಮಹಾತ್ಮ ಗಾಂಧೀಜಿ ಅವರು ೧೯೩೪ರಲ್ಲಿ ಕೊಡಗಿಗೆ ಆಗಮಿಸಿದ್ದ ಸಂದರ್ಭ ಈ ಸ್ಥಳದಲ್ಲಿರುವ ಗುಡ್ಡದ ಮೇಲಿಂದ ಜನರನ್ನುದ್ದೇಶಿಸಿ ಮಾತನಾಡಿದ್ದರು. ಬಳಿಕ ಇದನ್ನು ಗಾಂಧಿಗುಡ್ಡ ಎಂದೇ ಕರೆಯಲಾಗುತ್ತಿತ್ತು. ನಂತರದಲ್ಲಿ ಇದು ಗಾಂಧಿ ಮೈದಾನ ಎಂದಾಗಿತ್ತು. ಇದೇ ಮೈದಾನದ ಒಂದು ಬದಿಯಲ್ಲಿ ಮಡಿಕೇರಿಯಲ್ಲಿರುವ ಗಾಂಧಿ ಮೈದಾನ ಹಾಗೂ ಗಾಂಧಿ ಮಂಟಪಕ್ಕೆ ಐತಿಹಾಸಿಕ ಹಿನ್ನೆಲೆಯಿದೆ. ಸ್ವಾತಂತ್ರö್ಯ ಹೋರಾಟದ ನೇತಾರರಾದ ಮಹಾತ್ಮ ಗಾಂಧೀಜಿ ಅವರು ೧೯೩೪ರಲ್ಲಿ ಕೊಡಗಿಗೆ ಆಗಮಿಸಿದ್ದ ಸಂದರ್ಭ ಈ ಸ್ಥಳದಲ್ಲಿರುವ ಗುಡ್ಡದ ಮೇಲಿಂದ ಜನರನ್ನುದ್ದೇಶಿಸಿ ಮಾತನಾಡಿದ್ದರು. ಬಳಿಕ ಇದನ್ನು ಗಾಂಧಿಗುಡ್ಡ ಎಂದೇ ಕರೆಯಲಾಗುತ್ತಿತ್ತು. ನಂತರದಲ್ಲಿ ಇದು ಗಾಂಧಿ ಮೈದಾನ ಎಂದಾಗಿತ್ತು. ಇದೇ ಮೈದಾನದ ಒಂದು ಬದಿಯಲ್ಲಿ ಗಾಂಧಿ ಸ್ಮಾರಕ ಭವನದ ಚಿಂತನೆ
ಈ ಸ್ಥಳವನ್ನು ದೆಹಲಿಯ ರಾಜ್ಫಾಟ್ ಮಾದರಿಯಲ್ಲಿ ಗಾಂಧಿ ಸ್ಮಾರಕ ಭವನ ಉದ್ಯಾನವನವನ್ನಾಗಿ ಪರಿವರ್ತಿಸುವ ಚಿಂತನೆ ಕೆಲವು ದಶಕಗಳ ಹಿಂದಿನದ್ದು. ಆ ಸಂದರ್ಭದಲ್ಲಿ ಕೊಡಗಿನ ಜಿಲ್ಲಾಧಿಕಾರಿ ಗಳಾಗಿದ್ದ ಎಂ.ಕೆ. ಬಲದೇವ ಕೃಷ್ಣ ಅವರು ಈ ಬಗ್ಗೆ ಆಸಕ್ತಿ ತೋರಿ ಸ್ಥಳೀಯರ ಅಭಿಪ್ರಾಯದೊಂದಿಗೆ ಪ್ರಸ್ತಾವಿತ ಯೋಜನೆಯೊಂದನ್ನು ಸರಕಾರಕ್ಕೆ ಕಳುಹಿಸಿದ್ದರು. ನಂತರದಲ್ಲಿ ಇದು ಕಾರಣಾಂತರಗಳಿAದ ವಿಳಂಬ ವಾಗುತ್ತಲೇ ಬರುತ್ತಿತ್ತು. ಸ್ವಯಂಸೇವಾ ಸಂಸ್ಥೆ ಜಿಲ್ಲಾ ಸರ್ವೋದಯ ಸಮಿತಿ ಕೂಡ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಿಕೊಂಡು ಬಂದಿತ್ತು. ಈ ಹಿಂದೆ ಎಂ.ಆರ್. ಸೀತಾರಾಮ್ ಅವರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ರೂ. ೧ ಕೋಟಿಯ ಪ್ರಸ್ತಾವನೆ ಅಂತಿಮ ಪಡಿಸಿ ಸರಕಾರಕ್ಕೆ ರವಾನೆಯಾಗಿತ್ತು.
ಗಾಂಧಿ ಸ್ಮಾರಕ ಭವನದ ಚಿಂತನೆ

(ಮೊದಲ ಪುಟದಿಂದ) ಡಾ. ಬಿ.ಸಿ. ಸತೀಶ್, ಈಗಿನ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರುಗಳ ಸಹಕಾರದೊಂದಿಗೆ ಅಂತಿಮ ನಿರ್ಧಾರವಾಗಿದೆ. ೩೫ ಸೆಂಟ್ ಜಾಗವನ್ನು ಇದೀಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಹೆಸರಿಗೆ ಅಧಿಕೃತವಾಗಿ ನೀಡಲಾಗಿದೆ.
ಶಾಸಕರ ಪ್ರತಿಕ್ರಿಯೆ
ಈ ಬಗ್ಗೆ ಮಡಿಕೇರಿ ಶಾಸಕ ಡಾ. ಮಂಥರ್ಗೌಡ ಅವರು ‘ಶಕ್ತಿ’ಯೊಂದಿಗೆ ಪ್ರತಿಕ್ರಿಯಿಸಿದ್ದು, ಇದೀಗ ಯೋಜನೆ ನೀಲಿನಕ್ಷೆ ಅಂತಿಮಪಡಿಸಲಾಗಿದೆ. ಸರಕಾರವೂ ಸದ್ಯಕ್ಕೆ ರೂ. ೫೦ ಲಕ್ಷ ಅನುದಾನಕ್ಕೆ ಅನುಮೋದನೆ ನೀಡಿದೆ ಎಂದು ತಿಳಿಸಿದರು. ಇದೀಗ ಮುಂದಿನ ವಾರದಲ್ಲಿ ಈ ಯೋಜನೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಶಾಸಕರು ತಿಳಿಸಿದರು. ದೆಹಲಿಯ ರಾಜ್ಫಾಟ್ ಮಾದರಿಯಲ್ಲಿ ಸ್ಮಾರಕಭವನ, ಚಿತಾಭಸ್ಮ ಇರಿಸಲು ಸ್ಥಳ, ಉದ್ಯಾನವನ, ಗಾಂಧೀಜಿ ಅವರ ಜೀವನ ಚರಿತ್ರೆ ಸಾರುವ ಐತಿಹ್ಯಗಳನ್ನು ಒಳಗೊಂಡAತೆ ಈ ಗಾಂಧಿ ಸ್ಮಾರಕ ಭವನ ಉದ್ಯಾನವನದ ಜಿಲ್ಲಾ ಕೇಂದ್ರದಲ್ಲಿ ಮತ್ತೊಂದು ಆಕರ್ಷಣೆಯಾಗಿ ರೂಪುಗೊಳ್ಳಲಿದೆ.