ಸೋಮವಾರಪೇಟೆ, ಅ. ೨: ಕೊಡಗಿನಲ್ಲಿರುವ ಪರಿಸರ, ಹವಾಗುಣ ವಿಶ್ವದ ಯಾವುದೇ ಭಾಗದಲ್ಲಿ ಸಿಗುವುದಿಲ್ಲ. ಯಾರೂ ಇಲ್ಲಿನ ಆಸ್ತಿಯನ್ನು ಮಾರಬೇಡಿ ಎಂದು ವಿಧಾನ ಪರಿಷತ್ ಸದಸ್ಯ ಮಂಡೇಪAಡ ಸುಜಾ ಕುಶಾಲಪ್ಪ ಕಿವಿಮಾತು ಹೇಳಿದರು.

ಸೋಮವಾರಪೇಟೆ ಕೊಡವ ಸಮಾಜದ ವತಿಯಿಂದ ನಡೆದ ಕೈಲುಮುಹೂರ್ತ ಸಂತೋಷ ಕೂಟ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಲ್ಲಿನ ಯುವಜನಾಂಗ ಉದ್ಯೋಗದ ಕಾರಣ ದಿಂದ ಹೊರ ರಾಜ್ಯ, ಹೊರದೇಶಕ್ಕೆ ತೆರಳುತ್ತಿರುವುದರಲ್ಲಿ ತಪ್ಪೇನಿಲ್ಲ. ಆದರೆ ನಮ್ಮ ಮಣ್ಣಿನ ಸಂಸ್ಕೃತಿ, ಇಲ್ಲಿನ ಕಲೆ, ಆಚಾರ -ವಿಚಾರ, ಪದ್ಧತಿ ಪರಂಪರೆಯನ್ನು ಎಂದಿಗೂ ಬಿಡ ಬಾರದು ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಮಾತನಾಡಿ, ಕೊಡವರ ಭಾವನೆ ಯನ್ನು ಅರ್ಥ ಮಾಡಿಕೊಂಡು ಬೇಡಿಕೆÀಯನ್ನು ಈಡೇರಿಸಬೇಕು ಹಾಗೂ ಕೊಡವರಿಗೆ ಬುಡಕಟ್ಟು ಜನಾಂಗದ ಪ್ರಾತಿನಿದ್ಯ ನೀಡಿ ಸರ ಕಾರದ ಸೌಲಭ್ಯಗಳನ್ನು ನೀಡು ವಂತಾಗಬೇಕು ಎಂದರು.

ಸಮಾಜದ ವತಿಯಿಂದ ಸನ್ಮಾನಿತರಾದ ಮಡಿಕೇರಿ ಆಕಾಶ ವಾಣಿಯ ನಿವೃತ್ತ ಉದ್ಘೋಷಕಿ ಕೂಪದಿರ ಶಾರದಾ ನಂಜಪ್ಪ ಮಾತನಾಡಿ, ಜಿಲ್ಲೆಯ ಕೊಡವ ಸಮಾಜಗಳು ಕೇವಲ ಸಭೆ, ಸಮಾರಂಭ, ಮದುವೆ ಕಾರ್ಯಗಳಿಗೆ ಸೀಮಿತವಾಗದೆ ಕೊಡವ ಸಂಸ್ಕೃತಿ, ಕೊಡವಾಮೆಯನ್ನು ಪೋಷಿಸುವ ಕೇಂದ್ರವಾಗಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಾಜದ ಅಧ್ಯಕ್ಷರಾದ ಮಾಳೇಟಿರ ಅಭಿಮನ್ಯು ಕುಮಾರ್ ಮಾತನಾಡಿ, ತಾಲೂಕಿನಲ್ಲಿ ಕೊಡವರ ಸಂಖ್ಯೆ ಕಡಿಮೆ ಇದ್ದರೂ ಎಲ್ಲಾ ಸದಸ್ಯರ ಸºಕಾರದಿಂದ ಸಮಾಜ ಅಭಿವೃದ್ದಿಯಾಗಿದೆ. ವಿದ್ಯಾನಿಧಿಯ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಾಗಿದೆ ಎಂದರು.

ವೇದಿಕೆಯಲ್ಲಿ ಮಹಿಳಾ ಘಟಕದ ಅಧ್ಯಕ್ಷರಾದ ಕೋಚಮಂಡ ಮನುಬಾಯಿ, ಸಮಾಜದ ಉಪಾಧ್ಯಕ್ಷರಾದ ಬೊಳಂದAಡ ಕುಟ್ಟಪ್ಪ, ಕಾರ್ಯದರ್ಶಿ ಕೊಚ್ಚೇರ ಅನಿಲ್ ಮತ್ತು ಪದಾಧಿಕಾರಿಗಳು ಇದ್ದರು. ವಿವಿಧ ಸಾಂಸೃತಿಕ ಕಾರ್ಯ ಕ್ರಮಗಳು, ಸ್ಪರ್ಧಾ ಕಾರ್ಯಕ್ರಮಗಳು ಜರುಗಿದವು.