ಮಡಿಕೇರಿ, ಅ. ೨: ಶಾಂತಿನಿಕೇತನ ಯುವಕ ಸಂಘದ ೪೫ನೇ ವರ್ಷದ ಅದ್ಧೂರಿ ಗಣೇಶೋತ್ಸವದ ಗಣಪತಿ ವಿಸರ್ಜನಾ ಶೋಭಾಯಾತ್ರೆ ತಾ.೩ರಂದು (ಇಂದು) ನಡೆಯಲಿದೆ.

ಲೋಕ ಕಲ್ಯಾಣಕ್ಕಾಗಿ ಸಿಂಧೂರ ರಾಕ್ಷಸನನ್ನು ವಧಿಸುವ ಮೂಲಕ ಗಣಪತಿಗೆ ಸಿಂಧೂರ ಗಣಪ ಎಂಬ ಹೆಸರು ಬಂದ ಕಥಾ ಹಂದರವಿರುವ ಕಲಾಕೃತಿಗಳ ಚಲನವಲನಗಳಿರುವ ಮಂಟಪದೊAದಿಗೆ ವಿಸರ್ಜನಾ ಶೋಭಾಯಾತ್ರೆ ನಡೆಯಲಿದೆ.

ಸೆ.೧೯ ರಂದು ಪ್ರತಿಷ್ಠಾಪಿಸಲ್ಪಟ್ಟು ೧೫ ದಿನಗಳ ನಿತ್ಯ ಪೂಜೆಯೊಂದಿಗೆ ತಾ.೩ರಂದು ಸಂಜೆ ೫ ಗಂಟೆಗೆ ವಿಸರ್ಜನಾ ಪೂಜೆ ನಡೆಯಲಿದೆ. ಮಧ್ಯಾಹ್ನ ೧೨.೩೦ಕ್ಕೆ ಮಹಾಪೂಜೆ ನಂತರ ಭಕ್ತಾಧಿಗಳಿಗೆ ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಸಂಜೆ ೬ ಗಂಟೆಗೆ ಹೊರಡಲಿರುವ ಶೋಭಾ ಯಾತ್ರೆಯಲ್ಲಿ ಶಾಂತಿನಿಕೇತನ, ಕೆ.ಎಸ್.ಆರ್.ಟಿ.ಸಿ ಡಿಪೋ ಮುಂಭಾಗ ಜ.ತಿಮ್ಮಯ್ಯ ವೃತ್ತ, ಹಳೆಯ ಖಾಸಗಿ ಬಸ್ ನಿಲ್ದಾಣ, ಇಂದಿರಾಗಾAಧಿ ವೃತ್ತ, ಚೌಡೇಶ್ವರಿ ದೇವಾಲಯ ಹಾಗೂ ಸಮಯ ಬಳಸಿ ಪ್ರದರ್ಶನ ನೀಡಲಾಗುತ್ತದೆ. ಮಂಟಪದಲ್ಲಿ ಬೆಂಗಳೂರಿನ ಆರ್.ಜೆ. ಈವೆಂಟ್ಸ್ನ ಚೇತನ್ ಅವರಿಂದ ಅತ್ಯಾಧುನಿಕ ಕೂಲ್ ಫೈರ್ ಹಾಗೂ ಸ್ಟುಡಿಯೋ ಸೆಟ್ಟಿಂಗ್, ಮಡಿಕೇರಿಯ ಗುರು ಲೈಟಿಂಗ್ಸ್ನ ಲೋಕೇಶ್ ಅವರ ಸೌಂಡ್ಸ್, ವಿಜಯ್ ಮತ್ತು ತಂಡದಿAದ ಚಲನವಲನ, ಮಡಿಕೇರಿಯ ಕಲಾವಿದ ರವಿ ಮತ್ತು ತಂಡ ಕಲಾಕೃತಿಗಳನ್ನು ನಿರ್ಮಿಸಿದೆ. ೭೦ಕ್ಕೂ ಹೆಚ್ಚು ಕಾರ್ಯಕರ್ತರು ಸತತ ೨ ತಿಂಗಳಿAದ ಈ ಕಾರ್ಯದಲ್ಲಿ ಮಗ್ನರಾಗಿದ್ದು ರೂ. ೧೨ ಲಕ್ಷ ವೆಚ್ಚದಲ್ಲಿ ಮಂಟಪ ಹೊರಡಲಿದೆ.

ಕಲಾಕೃತಿ ತಂಡದಲ್ಲಿ ರವಿ ಪಿ.ಎ, ಮನು, ಮಂಜು, ಜಾಜು, ಶೇಖರ, ಮನೋಜ್, ನವೀನ್, ಮಿಟ್ಟು, ಮೋಹಿತ್, ಅಕ್ಷಿತ್, ಸಾಯಿ, ಹೇಮಂತ್.

ಚಲನವಲನ ಕಾರ್ಯದಲ್ಲಿ ವಿಜಯ್, ಅರುಣ್, ವಿನು, ರಾಜೇಶ್, ರಮೇಶ್, ಆದರ್ಶ್, ಜಗ್ಗ, ಪ್ರಶಾಂತ್ ಕಾರ್ಯ ನಿರ್ವಹಿಸಲಿದ್ದು, ಕಥಾ ಸಾರಾಂಶವನ್ನು ರವಿ ಆರ್.ಬಿ. ಮಾಡಿದರೆ, ಕಥಾ ಸಂಕಲನವನ್ನು ಸಂತೋಷ್ ನಿರ್ವಹಿಸಿದ್ದಾರೆ.