ಇಂಡೋ-ಕೆನಡಾ ಕಥೆ ಕಾಣುತಿರುವಷ್ಟು ಸರಳವಲ್ಲ. ಈ ಕಥೆಯ ಕೆಳಗೆ ಅನೇಕ ಪದರಗಳಿವೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿ ರುವ ಘಟನೆಗಳನ್ನು ನೋಡಿದರೆ, ಭಾರತ ಮತ್ತು ಕೆನಡಾ ನಡುವಿನ ಸಂಬAಧವು ಏಕೆ ವೇಗವಾಗಿ ಕುಸಿಯುತ್ತಿದೆ ಎಂದು ಅನೇಕರು ಆಶ್ಚರ್ಯಪಡುತ್ತಿರಬಹುದು.

ಈ ಮೊದಲು ಭಾರತವನ್ನು ಕಾಡುತ್ತಿದ್ದ ‘ಸಿ' ಪದ ಚೀನಾ. ಈಗ, ಕೆನಡಾ ಎಂಬ ಮತ್ತೊಂದು ‘ಸಿ' ಅನ್ನು ಅದಕ್ಕೆ ಸೇರಿಸಲಾಗಿದೆ. ಭಾರತ ಮತ್ತು ಕೆನಡಾ ನಡುವಿನ ಸಂಬAಧವನ್ನು ಹಾಳು ಮಾಡಿದ ಕಳೆದ ಕೆಲವು ದಿನಗಳಲ್ಲಿ ನಡೆದ ಘಟನೆಗಳನ್ನು ನಾನು ವಿವರಿಸುವುದಿಲ್ಲ, ಎಲ್ಲರಿಗೂ ತಿಳಿದದ್ದೆ. ಅದರ ಹಿಂದಿನ ಹಿನ್ನೆಲೆಯನ್ನು ವಿವರಿಸಲು ಪ್ರಯತ್ನಿಸುತ್ತೇನೆ.

೨೦೧೮ ರಲ್ಲಿ ಕೆನಡಾ ಪ್ರಧಾನಿ ಟ್ರುಡೊ ಅವರು ಭಾರತಕ್ಕೆ ಮೊದಲ ಭೇಟಿ ನೀಡಿದಲ್ಲಿಂದ ನಡೆದು ಬರುತ್ತಿರುವ ಪಿತೂರಿ ಇದು. ಟ್ರುಡೊ ಎಡ ಪಂಥದ ಪರಿಸರದ ವ್ಯವಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಾರೆ. ಈ ವ್ಯವಸ್ಥೆಯಲ್ಲಿ ಜಗತ್ತನ್ನು ನೋಡುವ ಮಾನದಂಡ ವಿಭಿನ್ನ. ಅವರು ಸ್ವಾವಲಂಬನೆ ಅಥವಾ ರಾಷ್ಟಿçÃಯತೆಗೆ ಪ್ರಾಮುಖ್ಯತೆ ನೀಡುವುದಿಲ್ಲ. ಅವರಿಗೆ ಮುಕ್ತ ಮೌಲ್ಯಗಳು ಮತ್ತು ವಾಕ್ ಸ್ವಾತಂತ್ರ‍್ಯ ಪ್ರಾಮುಖ್ಯತೆಯನ್ನು ಪಡೆದಿರುತ್ತದೆ. ಭಾರತದ ಪ್ರಧಾನಿ ಮೋದಿ ಇದಕ್ಕೆ ತದ್ವಿರುದ್ಧ. ಅವರು ಕಟ್ಟಾ ರಾಷ್ಟಿçÃಯವಾದಿ ಸ್ವಾವಲಂಬನೆ ಮತ್ತು ಅಖಂಡ ಭಾರತ ತತ್ವ ನಂಬುವವರು. ಮೋದಿಯವರ ೨೦೧೯ರ ಗೆಲುವು, ವಿಶ್ವದಾದ್ಯಂತದ ಅನೇಕ ನಾಯಕರ ಅನೇಕ ಲೆಕ್ಕಾಚಾರಗಳನ್ನೂ ಬುಡಮೇಲು ಮಾಡಿದೆ. ಇದು ಪಾಶ್ಚಿಮಾತ್ಯರ ನಿದ್ದೆಗೆಡಿಸಿತ್ತು.

೨೦೨೦ ರ ಚುನಾವಣೆಯಲ್ಲಿ ಅಮೇರಿಕಾದಲ್ಲಿ ಬೈಡನ್ ಅವರ ರಾಷ್ಟçಪತಿ ಸ್ಥಾನದ ಗೆಲುವು ಎಡಪಂಥೀಯರಿಗೆ ಪೂರ್ಣ ಶಕ್ತಿ ತುಂಬಿತು. ಬೈಡನ್, ಮೋದಿಯನ್ನು ಇಷ್ಟಪಡದಿದ್ದರೂ, ‘ಯು.ಎಸ್.ಎ.'ಗೆ - ಅವರ ಆರ್ಥಿಕ ಯೋಜನೆಯಲ್ಲಿ ಭಾರತವು ಬಹಳ ಮುಖ್ಯವಾದ ಕಾರಣವಾದ್ದರಿಂದ ಅವರು ತಮ್ಮ ಸಂಬAಧಗಳನ್ನು ಸರಿಪಡಿಸಿಕೊಳ್ಳಲು ಪ್ರಾರಂಭಿಸಿದರು. ಆದರೆ ಮೋದಿ ಕೇವಲ ಬಲಪಂಥೀಯ ನಾಯಕ ಮಾತ್ರವಲ್ಲ, ಎಡಪಂಥೀಯ ಪರಿಸರ ವ್ಯವಸ್ಥೆಗೆ ಅಡ್ಡಿಪಡಿಸುವವರೂ ಹೌದು. ಅವರಿಗೆ ಅದಾನಿ ನೇತೃತ್ವದ ರಾಷ್ಟಿçÃಯವಾದಿ ವಿಭಾಗವು ಸಹಾಯ ನೀಡುತ್ತದೆ.

ಹೀಗಾಗಿ ರಾಹುಲ್ ಗಾಂಧಿ ಅದಾನಿಯನ್ನು ಟೀಕಿಸುವುದು ಮತ್ತು ಅವರನ್ನು ಮೋದಿಯೊಂದಿಗೆ ಜೋಡಿಸುವುದನ್ನು ತಮ್ಮ ಏಕೈಕ ಕಾರ್ಯಸೂಚಿ ಯನ್ನಾಗಿ ಮಾಡಿಕೊಂಡರು. ಎಡಪಂಥೀಯ ಮಾಧ್ಯಮಗಳಾದ, ಎಕನಾಮಿಸ್ಟ್ ಮತ್ತು ವಾಷಿಂಗ್ಟನ್ ಪೋಸ್ಟ್ (ಯುಎಸ್ ಮತ್ತು ಕೆನಡಾದ ಪ್ರಮುಖ ದಿನಪತ್ರಿಕೆ) ರಾಹುಲ್ ಗಾಂಧಿಗೆ ಮೈಲೇಜ್ ನೀಡಲು ಪ್ರಾರಂಭಿಸಿ, ಅದಾನಿ ಮತ್ತು ಮೋದಿ ವಿರುದ್ಧ ಬರೆಯಲು ಪ್ರಾರಂಭಿಸಿದವು.

ಇದಾದ ನಂತರ ಉದ್ಯಮಿ ಜಾರ್ಜ್ ಸೊರೊಸ್ ಅವರ ಹಿಂಡೆನ್ಬರ್ಗ್ ವರದಿ ಕಾಣಿಸಿಕೊಂಡಿತು. ಅದು ಅದಾನಿ ಮೇಲಿನ ನೇರ ದಾಳಿಯಾಗಿತ್ತು. ವರದಿಯ ನಂತರ ವಿಶ್ವದ ೨ ನೇ ಶ್ರೀಮಂತರಾಗಿದ್ದ ಅದಾನಿ ಅಗ್ರ ೨೦ ರಿಂದಲೂ ಹೊರಗಾದರು. ಅವರ ಹಣದ ಜಾಲದಿಂದ ಬಿಜೆಪಿಗೆ ಬೆಂಬಲ ಸಿಗುತ್ತಿದ್ದುದನ್ನು ಕಡಿತಗೊಳಿಸುವುದು ಇದರ ಉದ್ದೇಶವಾಗಿತ್ತು. ನಂತರ ಟ್ರುಡೊ ಹಾಗೂ ಅವರಂತಹದೇ ಎಡಪಂಥೀಯರು ಭಾರತದ ಬಲಪಂಥೀಯ ಸರ್ಕಾರವನ್ನು ಗುರಿಯಾಗಿಸಲು ಪ್ರಾರಂಭಿಸಿದರು. ಭಾರತವು ರಷ್ಯಾಕ್ಕೆ ಹತ್ತಿರವಾಗುತ್ತಿದ್ದಂತೆ ಉಕ್ರೇನ್ ಕೂಡ ಜಾರ್ಜ್ ಸೊರೊಸ್ ಹಾಗೂ ಟ್ರುಡೊ ಜೊತೆ ಸೇರಿಕೊಂಡಿತು.

ಅಮೆರಿಕಾದ ರಾಷ್ಟçಪತಿ ಜೋ ಬೈಡನ್ ಮಾತ್ರ ತಟಸ್ಥರಾಗಿದ್ದರು. ಆದರೆ ಜಿ ೨೦ ಎಲ್ಲವನ್ನೂ ಬದಲಾಯಿಸಿತು. ಭಾರತವು ಜಿ ೨೦ ಯನ್ನು ನಡೆಸಿದ ರೀತಿ ಅನೇಕ ವಿಶ್ವ ನಾಯಕರನ್ನು ಅಸುರಕ್ಷಿತರನ್ನಾಗಿ ಮಾಡಿತು. ಆಫ್ರಿಕನ್ ಯೂನಿಯನ್ ಜೊತೆ ಹೊಂದಾಣಿಕೆ ಮತ್ತು ದೆಹಲಿ ಘೋಷಣೆಯನ್ನು ಸರ್ವಾನುಮತದಿಂದ ಅಂಗೀಕರಿಸಿರುವುದು, ಮೋದಿಯವರ ಜನಪ್ರಿಯತೆ ಯನ್ನು ಗಗನಕ್ಕೇರಿಸಿತು. ಇದು ಬೈಡನ್ ಅವರಲ್ಲೂ ಸ್ವಲ್ಪ ಅಸೂಯೆಯನ್ನು ಉಂಟು ಮಾಡಿತು. ಟ್ರುಡೊ ತಮ್ಮ ವಿನಾಶಕಾರಿ ಜಿ ೨೦ ಭಾರತ ಪ್ರವಾಸದಿಂದ ಹಿಂದಿರುಗಿದ ನಂತರ - ಭಾರತವು ತನ್ನ ನಾಗರಿಕರನ್ನು ರಾಜಕೀಯ ಪ್ರಾಯೋಜಿತ ಹತ್ಯೆ ಮಾಡಿದೆ ಎಂದು ಆರೋಪಿಸುವ ನೇರ ಕ್ರಮಕ್ಕೆ ಇಳಿದರು.

ಅವರು ಈ ವಿಷಯವನ್ನು ಫೈವ್ ಐಸ್ ಗುಂಪಿನೊAದಿಗೆಯು ಎತ್ತಿದರು. ಫೈವ್ ಐಸ್ ಎಂದರೆ "ಯು ಎಸ್ ಎ- ಕೆನಡಾ,-ಯುಕೆ,- ಆಸ್ಟೆçÃಲಿಯಾ ಮತ್ತು ನ್ಯೂಜಿಲೆಂಡ್ ಎಂಬ ೫ ದೇಶಗಳ ಗುಪ್ತಚರ ವಿಭಾಗ. ಟ್ರುಡೊ ಈ ವೇದಿಕೆಯನ್ನು ಬಳಸಿ ಭಾರತವನ್ನು ಟೀಕಿಸಲು ಮತ್ತು ಅದರ ಸದಸ್ಯರಿಂದ ಇದಕ್ಕೆ ಪ್ರೋತ್ಸಾಹ ಪಡೆಯಲು ಬಯಸಿದ್ದರು. ಇದು ಭಾರತವನ್ನು ಕೆಟ್ಟದಾಗಿ ಬಿಂಬಿಸುವ ಮತ್ತು ಈ ದೇಶಗಳೊಂದಿಗೆ ಬಿರುಕು ಮೂಡಿಸುವ ಪ್ರಯತ್ನ ವಾಗಿತ್ತು. ಯುಕೆ ಮತ್ತು ಅದರ ಪ್ರಧಾನಿ "ರಿಷಿ" ಈ ವಿಷಯದಲ್ಲಿ ತಟಸ್ಥ ರಾಗಿ ಬಿಟ್ಟರು. ಆಸ್ಟೆçÃಲಿಯಾ ಮತ್ತು ನ್ಯೂಜಿಲೆಂಡ್ ಇದುವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಬೈಡನ್ ಕೆನಡಾದತ್ತ ಸ್ವಲ್ಪ ಆಕರ್ಷಿತರಾಗಿರುವಂತೆ ಕಾಣುತ್ತದೆ ಮತ್ತು ಭಾರತಕ್ಕೆ ಕೆನಡಾವನ್ನು ಬೆಂಬಲಿಸುವAತೆ ಸಲಹೆ ನೀಡುತ್ತಿದ್ದಾರೆ. ಇದು ಸಹಜ, ಏಕೆಂದರೆ ಬೈಡನ್ ಮತ್ತು ಮೋದಿ, ಪರಸ್ಪರ ಎಷ್ಟೇ ತಬ್ಬಿಕೊಂಡರೂ, ಸೈದ್ಧಾಂತಿಕವಾಗಿ ಎಂದಿಗೂ ಸ್ನೇಹಿತರಾಗಲು ಸಾಧ್ಯವಿಲ್ಲ. ಬೈಡನ್ ಅವರಿಗೆ ೨೦೨೪ ರಲ್ಲಿ ಚುನಾವಣೆ ಇದೆ ಹಾಗೆಯೇ ಮೋದಿಗೂ ಕೂಡ. ಈಗ ಬೈಡನ್ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕಾಗಿದೆ. ರಿಪಬ್ಲಿಕನ್ ಅಭ್ಯರ್ಥಿಯಾಗಿ ಮತ್ತೆ ಸ್ಪರ್ಧಿಸಲು ಯೋಜಿಸುತ್ತಿರುವ ಟ್ರಂಪ್ ಅವರನ್ನು ಎದುರಿಸಲು ಡೆಮಾಕ್ರಟಿಕ್ ಪಕ್ಷ , ಮತ್ತೆ ಬೈಡನ್ನನ್ನು ನಿಲ್ಲಿಸಲು ಯೋಜನೆ ರೂಪಿಸುತ್ತಿದೆ.

ಮೋದಿ ಮತ್ತು ಟ್ರಂಪ್ ಮಧ್ಯೆ ಇರುವ ಸಮೀಕರಣ ಎಲ್ಲರಿಗೂ ತಿಳಿದಿದೆ. ೨೦೨೪ರಲ್ಲಿ ಬಲಪಂಥೀಯ ವಾದದ ಇಂಡೋ-ಅಮೆರಿಕನ್ ವಿವೇಕ್ ರಾಮಸ್ವಾಮಿ ಅವರನ್ನು ತಮ್ಮ ಆಪ್ತ ಅಭ್ಯರ್ಥಿಯನ್ನಾಗಿ ಮಾಡಲು ಟ್ರಂಪ್ ಯೋಜಿಸುತ್ತಿದ್ದಾರೆ. ಟ್ರಂಪ್ ಗೆದ್ದರೆ, ಕಮಲಾ ಹ್ಯಾರಿಸ್ ಬದಲಿಗೆ ವಿವೇಕ್ ಬರಲಿದ್ದಾರೆ. ಕಮಲಾ ಅವರಿಗೆ ಮೋದಿ ಬಗ್ಗೆ ಯಾವುದೇ ಒಲವು ಇಲ್ಲ. ವಿವೇಕ್ ಬಿಜೆಪಿ ಮತ್ತು ಮೋದಿಯವರ ದೊಡ್ಡ ಅಭಿಮಾನಿ. ಆದ್ದರಿಂದ, ಕೆನಡಾ ವಿಚಾರ ಕೇವಲ ಖಲಿಸ್ತಾನಿ ಅನುಕಂಪ ಹೊಂದಿರುವವರ ಹೋರಾಟವಲ್ಲ. ಅದರಲ್ಲಿ ಇನ್ನೂ ಹೆಚ್ಚಿನದಿದೆ.

ಇದು ೨೦೨೪ ರಲ್ಲಿ ಭಾರತದಲ್ಲಿ ಆಡಳಿತ ಬದಲಾವಣೆ ಖಚಿತವಾಗಿ ಆಗುವಂತೆ ಮಾಡಲು, ಹೋರಾಟವಾಗಿದೆ. ೨೦೨೪ರಲ್ಲಿ ಮೋದಿ ಗೆಲ್ಲುತ್ತಾರೆ ಎಂದು ಊಹಿಸಲೂ ಈ ವ್ಯಕ್ತಿಗಳಿಗೆ ಇಷ್ಟವಿಲ್ಲ. ಇತರ ಪಕ್ಷಗಳ ಬೆಂಬಲ ದೊಂದಿಗೆ ರಾಹುಲ್ ಗಾಂಧಿ, ಅಧಿಕಾರಕ್ಕೆ ಬರಬೇಕೆಂದು ಅವರು ಬಯಸು ತ್ತಾರೆ. ಇದರಿಂದ ಭಾರತದ ಆಡಳಿತದ ಮೇಲೆ ಮತ್ತೆ ಹಿಡಿತ ಸಾಧಿಸ ಬಹುದು. ಮೋದಿ ಇರುವರೆಗೂ ಭಾರತದಲ್ಲಿ ನಡೆಯುವ ನೀತಿ ನಿರ್ಧಾರಗಳನ್ನು ನಿಯಂತ್ರಿಸುವುದು ಅವರಿಗೆ ಅಸಾಧ್ಯ.

ಈಗ ಬಿಜೆಪಿ ಮತ್ತು ಆರ್‌ಎಸ್‌ಎಸ್ ಇದನ್ನು ಹೇಗೆ ನಿರ್ವಹಿಸುತ್ತದೆ ಎಂಬುದನ್ನು ಕಾದು ನೋಡಬೇಕು. ೨೦೨೪ ರ ಗಣರಾಜ್ಯೋತ್ಸವಕ್ಕೆ ಬೈಡನ್ ಬರುತ್ತಾರೋ ಇಲ್ಲವೋ ಎಂಬುದು ಮುಂದಿನ ದೊಡ್ಡ ವಿಷಯ ವಾಗಿದೆ. ಇಲ್ಲಿಯವರೆಗೆ ವೈಟ್ ಹೌಸ್ ಇದನ್ನು ದೃಢಪಡಿಸಿಲ್ಲ. ಅವರು ಬರದೇ ಹೋದರೆ ಖಂಡಿತವಾಗಿಯೂ ಇದು ಬರುವ ದಿನಗಳಲ್ಲಿ ಭಾರತದ ಎಡ ಮತ್ತು ಬಲ ಪರಿಸರ ವ್ಯವಸ್ಥೆಗಳ ನಡುವಿನ ಬಹಿರಂಗ ಯುದ್ಧ ಎಂದು ಖಚಿತಗೊಳ್ಳುತ್ತದೆ. ಈ ಕೆನಡಾದ ಕಥೆ ಕೇವಲ ಟ್ರೆöÊಲರ್ ಮತ್ತು ಸೈಡ್ ಶೋ ಆಗಿದೆ. ನಿಜವಾದ ಕಥೆ ಈಗಷ್ಟೇ ಪ್ರಾರಂಭವಾಗುತ್ತಿದೆ.

-ಮೇ. ಬಿದ್ದಂಡ ನಂದ ನಂಜಪ್ಪ

ಹಾಕತ್ತೂರು, ಮೊ: ೯೪೮೩೫೩೯೫೫೯