ವೀರಾಜಪೇಟೆ, ಅ. ೨: ಆಟೋ ಚಾಲಕರು ಶ್ರಮಿಕ ವರ್ಗದವರು ಸಾರ್ವಜನಿಕರ ಸ್ನೇಹಿತರಂತೆ. ಬಡ, ಶ್ರೀಮಂತ, ಮಧ್ಯಮ ಎನ್ನದೆ ಕರೆದಾಗ ಸ್ಪಂದಿಸುವವರು. ಸಾರ್ವಜನಿಕ ರೊಂದಿಗೆ ಸ್ನೇಹಿಜೀವಿಯಾಗಿ ಪ್ರತಿಸಂದಿಸುವ ವ್ಯಕ್ತಿತ್ವ ಎಲ್ಲಾ ಚಾಲಕರು ಹೊಂದಬೇಕು ಎಂದು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಹೇಳಿದರು. ಜೈ ಭಾರತ್ ಅಟೋ ಚಾಲಕ ಮತ್ತು ಮಾಲೀಕರ ಸಂಘ ವೀರಾಜಪೇಟೆ ಆಶ್ರಯದಲ್ಲಿ ನಗರದ ಕಾರು ನಿಲ್ದಾಣದಲ್ಲಿ ಏರ್ಪಡಿಸಲಾಗಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕೆದಮುಳ್ಳೂರು ಗ್ರಾಮದ ದಿವಂಗತ ಮಾಳೇಟಿರ ಬಿದ್ದಪ್ಪ (ಬಿದ್ದು) ವೇದಿಕೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಶಾಸಕರು ಸಮಾಜದಲ್ಲಿ ಗುರುತಿಸುವ ಶ್ರಮಿಕ ವರ್ಗವು ಇಲ್ಲದೆ ಯಾವುದೇ ಕಾರ್ಯಕ್ರಮ ಅಪೂರ್ಣ, ಆಟೋ ಚಾಲಕರು ಗ್ರಾಹಕರಿಂದ ಬರುವ ಬಾಡಿಗೆ ಹಣವನ್ನು ಕ್ರೋಢೀಕರಿಸಿ ಮಾಲೀಕ ಮತ್ತು ತನ್ನ ಸಂಸಾರವನ್ನು ಸರಿದೂಗಿಸಿಕೊಂಡು ಸಾಗುತಿದ್ದಾರೆ. ಆರ್ಥಿಕವಾಗಿ ಸಬಲರಾಗಲು ಕಷ್ಟ ಸಾಧ್ಯವಾದರೂ, ಜೀವನದಲ್ಲಿ ಮುಂದು ಬರಲು ಶ್ರಮಿಸುತಿದ್ದಾರೆ ಎಂದರು. ಸಂಘ ಸ್ಥಾಪಿಸಿ ಹಲವು ಜನಪರ ಕಾರ್ಯಕ್ರಮ, ಸದಸ್ಯರ ಮಕ್ಕಳಿಗೆ ಸನ್ಮಾನ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ, ಸಂಘದ ಬೇಡಿಕೆಯಂತೆ ಜಿಲ್ಲಾದ್ಯಂತ ಅಟೋ ಚಾಲನೆ ಮಾಡಲು ಪರವಾನಿಗೆ ನೀಡುವ ಬೇಡಿಕೆಯನ್ನು ಸಂಬAಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಕಾನೂನು ಅಡಿಯಲ್ಲಿ ಕ್ರಮಕ್ಕೆ ಮುಂದಾಗುವ ಭರವಸೆ ನೀಡಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿ ಮಾತನಾಡಿದ ರಾಜ್ಯ ವಿಧಾನ ಪರಿಷತ್ ಸದಸ್ಯರಾದ ಸುಜಾ ಕುಶಾಲಪ್ಪ ಅವರು ಬಡವರ ಬಂದು ಎಂದು ಕರೆಸಿಕೊಂಡವರು ಆಟೋ ಚಾಲಕರು.. ಸೇವೆ ಮಾತ್ರ ಪರಿಗಣಿಸದೇ ಸಂಘದಿAದ ಸಮಾಜದ ಬಹುಮುಖ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಯಶಸ್ಸನ್ನು ಕಂಡಿದ್ದಾರೆ. ಅಟೋ ಚಾಲಕ ಮತ್ತು ಮಾಲೀಕರ ಕ್ಷೇಮಾಭಿವೃದ್ದಿಗಾಗಿ ಸಂಬAಧಿಸಿದ ಇಲಾಖೆಯೊಂದಿಗೆ ಚರ್ಚಿಸಿ ಸರ್ಕಾರದ ವತಿಯಿಂದ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ರೂಪಿಸಲು ಮುಂದಾಗು ತ್ತೇನೆ ಎಂದು ಹೇಳಿದರು. ಕಾರ್ಯಕ್ರಮ ಉದ್ದೇಶಿಸಿ ಸಂಘದ ಕಾನೂನು ಸಲಹೆಗಾರರು ಮತ್ತು ವಕೀಲರಾದ ಪುಷ್ಪರಾಜ್, ಗೌರವ ಅಧ್ಯಕ್ಷ, ಮಾಜಿ ಸೈನಿಕÀ ಪ್ರಭು ಕುಟ್ಟಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ, ಕಾಫಿ ಬೆಳೆಗಾರರಾದ ಮಾಳೇಟಿರ ಚುಕ್ಕು ದೇವಯ್ಯ, ಮತ್ತು ಮೈಸೂರು ಶಾಂತವೇರಿ ಗೋಪಾಲ ಗೌಡ ಆಸ್ಪತ್ರೆಯ ಪ್ರಮುಖರಾದ ಡಾ. ಶುಶೃತ್ ಗೌಡ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎನ್.ಎಸ್. ಶಿವು ಅವರು ಆಟೋ ಚಾಲಕ ಮತ್ತು ಮಾಲೀಕರು ಹಲವು ಬಗೆಯ ಆರ್ಥಿಕ ಸಮಸ್ಯೆಗಳನ್ನು ಎದುರಿಸುತಿದ್ದಾರೆ. ಆಟೋವನ್ನು ನಂಬಿಕೊAಡು ಜೀವನ ಸಾಗಿಸುವುದು ದುಸ್ತರ ಬದುಕು. ಸಂಘವು ಸಾರ್ವಜನಿಕ ಸೇವೆಗೆ ಮಾತ್ರ ಸೀಮಿತವಾಗದೆ ಸಾಮಾಜಿಕ ಕಳಕಳಿಯೋಂದಿಗೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ. ವೀರಾಜಪೇಟೆ ನಗರದ ಚಿಕ್ಕಪೇಟೆಯಲ್ಲಿ ಸರ್ಕಾರಿ ಕಚೇರಿಗಳು ಮತ್ತು ಶಾಲೆ ಕಾಲೇಜುಗಳು ಅಂಗಡಿ ಮಳಿಗೆಗಳು ಕಾರ್ಯನಿರ್ವಹಸುತ್ತಿದೆ. ಈ ಭಾಗದಲ್ಲಿ ಸುಸಜ್ಜಿತವಾದ ಮಹಿಳೆ ಮತ್ತು ಪುರುಷರಿಗಾಗಿ ಶೌಚಾಲಯ ನಿರ್ಮಾಣ, ನಗರದ ರಸ್ತೆ ಆಗಲೀಕರಣ ಮಾಡುವಂತೆ ಶಾಸಕದ್ವಯರಲ್ಲಿ ಮನವಿ ಮಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿಗಳಾದ ಬಡುವಮಂಡ ಜೀವನ್ ಅವರು ಸಂಘವು ನಡೆಸಿದ ವಾರ್ಷಿಕ ಕಾರ್ಯಕ್ರಮಗಳ ವರದಿ ವಾಚನ ಮಾಡಿದರು. ವೇದಿಕೆಯಲ್ಲಿ ಸಂಘದ ಉಪಧ್ಯಕ್ಷರಾದ ಜಗದೀಶ್, ಸಹ ಕಾರ್ಯದರ್ಶಿ ಜಕೋಬ್ ನರೋನ, ಖಜಾಂಚಿ ಅರ್ಜುನ್ ತಿಮ್ಮಯ್ಯ, ಗೌ ಸಲಹೆಗಾರ ಪ್ರದೀಪ್ ಕುಮಾರ್, ನಿರ್ಧೆಶಕರಾದ ಬೀಕಚಂಡ ಪುಟ್ಟ ಬೆಳ್ಯಪ್ಪ, ಕಿರಣ್, ದಿನೇಶ್ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಸಂಘದ ಸದಸ್ಯರ ಮಕ್ಕಳಿಗೆ ಸನ್ಮಾನ ಕಾರ್ಯಕ್ರಮ ಮತ್ತು ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಬಳಿಕ ಮೈಸೂರು ಸ್ವರ ಸಂಗಮ ಮೆಲೋಡಿಯಸ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಜೈ ಭಾರತ್ ಅಟೋ ಚಾಲಕ ಮತ್ತು ಮಾಲೀಕರ ಸಂಘ ವೀರಾಜಪೇಟೆಯ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಾರ್ವಜನಿಕರು ಹಾಜರಿದ್ದರು.