ಮಡಿಕೇರಿ, ಅ. ೨: ಕೊಡಗು ಜಿಲ್ಲಾ ಮಟ್ಟದ ಅಂತರ ಪ್ರಾಥಮಿಕ ಶಾಲಾ ೧೪ ವಯೋಮಿತಿಯ ಬಾಲಕಿಯರ ಹಾಕಿ ಕ್ರೀಡಾಕೂಟವು ಮಡಿಕೇರಿಯ ಸಾಯಿ ಹಾಕಿ ಟರ್ಫ್ ಮೈದಾನದಲ್ಲಿ ನಡೆಯಿತು.

ಈ ಕ್ರೀಡಾಕೂಟದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಬಾಲಕರ ತಂಡ ಫೈನಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಬಾಲಕಿಯರು ಸೆಮಿಫೈನಲ್ ಪಂದ್ಯದಲ್ಲಿ ಓ.ಎಲ್.ವಿ ಕಾನ್ವೆಂಟ್ ಸೋಮವಾರಪೇಟೆ ತಂಡವನ್ನು ಮಣಿಸಿ ಫೈನಲ್ ಪ್ರವೇಶಿಸಿ ರೂಟ್ಸ್ ಶಾಲೆ, ಪೊನ್ನಂಪೇಟೆ, ವೀರಾಜಪೇಟೆ ತಂಡವನ್ನು ೨-೦ ಗೋಲುಗಳ ಅಂತರದಿAದ ಮಣಿಸಿ ಗೆಲುವು ಸಾಧಿಸಿತು. ಅಂಚಲ್ ದೇಚಮ್ಮ ಪಿ.ಕೆ ೨ ಗೋಲು ಹೊಡೆಯುವ ಮೂಲಕ ತಂಡಕ್ಕೆ ಜಯ ತಂದುಕೊಟ್ಟರು. ಮುಂದೆ ನಡೆಯುವ ವಿಭಾಗ ಮಟ್ಟದ ಕ್ರೀಡಾಕೂಟಕ್ಕೆ ಈ ತಂಡ ಆಯ್ಕೆಯಾಗಿದೆ. ದೈಹಿಕ ಶಿಕ್ಷಣ ಶಿಕ್ಷಕ ಸಂದೇಶ್ ಬಿ.ಎಲ್ ತರಬೇತುದಾರರಾಗಿದ್ದಾರೆ.