ಮಡಿಕೇರಿ, ಅ. ೨: ಇಂದಿನ ಸ್ಪರ್ಧಾಯುಗದಲ್ಲಿ ವಿದ್ಯಾರ್ಥಿಗಳು ಸ್ಪರ್ಧಾ ಚಟುವಟಿಕೆಗಳಲ್ಲಿ ಸದಾ ಸಕ್ರಿಯರಾಗಿರಬೇಕೆಂದು ಕೊಡಗು ಗೌಡ ವಿದ್ಯಾ ಸಂಘದ ಅಧ್ಯಕ್ಷ ಅಂಬೆಕಲ್ ನವೀನ್ ಕುಶಾಲಪ್ಪ ಕರೆ ನೀಡಿದರು.
ಕೊಡಗು ಗೌಡ ವಿದ್ಯಾ ಸಂಘದ ವತಿಯಿಂದ ವಿದ್ಯಾರ್ಥಿಗಳಿಗೆ ಸ್ವಾತಂತ್ರೊö್ಯÃತ್ಸವ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾ ಸಂಘದ ವತಿಯಿಂದ ವರ್ಷಂಪ್ರತಿ ವಿದ್ಯಾರ್ಥಿಗಳಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿಕೊಂಡು ಬರುತ್ತಿದ್ದೇವೆ. ವಿದ್ಯಾರ್ಥಿಗಳು ಭಾಗವಹಿಸಿ ತಮ್ಮಲ್ಲಿರುವ ಪ್ರತಿಭೆಗಳನ್ನು ಹೊರ ಹಾಕಲು ಇದೊಂದು ಸದವಕಾಶವಾಗಿದೆ. ಇದರೊಂದಿಗೆ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳುವಂತೆ ಹೇಳಿದರು.
ಸ್ಪರ್ಧಾ ವಿಜೇತರು
ಛದ್ಮವೇಶ ಸ್ಪರ್ಧೆಯಲ್ಲಿ ಕೊಂಪುಳಿರ ಧ್ವನಿ ಪ್ರಥಮ, ಕರ್ಣಯ್ಯನ ಯುಕ್ತ ದ್ವಿತೀಯ, ಅಯ್ಯಂಡ್ರ ಶಾನ್ ಚಂಗಪ್ಪ ತೃತೀಯ, ಚಿತ್ರಕಲೆಯಲ್ಲಿ ಸೋಂಗೇರಿ ನಿಶ್ಮಿತಾ ಪ್ರಥಮ, ಮೂಲೆಮಜಲು ಆರ್ಥ ಪೊನ್ನಪ್ಪ ದ್ವಿತೀಯ, ಮೂಲೆಮಜಲು ಆರ್ಹ ಪೊನ್ನಪ್ಪ ತೃತೀಯ ಬಹುಮಾನ ಪಡೆದುಕೊಂಡರು. ಗೌಡ ಮನೆತನ ಹೆಸರು ಹೇಳುವ ಸ್ಪರ್ಧೆಯಲ್ಲಿ ಪರಿಚನ ಜನ್ಯ ಹರೀಶ್ ಪ್ರಥಮ, ಕಾಳೇರಮ್ಮನ ರಾಜೇಶ್ ದ್ವಿತೀಯ, ನಡುವಟ್ಟಿರ ಹಿಮಾನಿ ತೃತೀಯ, ಗೌಡ ಸಂಸ್ಕೃತಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಪಳಂಗೋಟು ತುಳಸಿ ಪ್ರಥಮ, ದೇಶಕೋಡಿ ಮಾನ್ಯ ದ್ವಿತೀಯ, ಅಂಬ್ರಾಟಿ ವೀಕ್ಷಾ ಗೌಡ ತೃತೀಯ ಬಹುಮಾನ ಪಡೆದುಕೊಂಡರು.
ಸ್ವಾತAತ್ರö್ಯ ಹೋರಾಟದಲ್ಲಿ ಗೌಡ ಜನಾಂಗದವರ ಪಾತ್ರದ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಕರ್ಣಯ್ಯನ ಸುಶ್ಮಿತ ಪ್ರಥಮ, ನಿಡ್ಯಮಲೆ ದ್ವಿತೀಯ, ಬಾರನ ಸುಭಿಕ್ಷ ಮತ್ತು ಕೋರನ ಹೃತ್ಪೂರ್ವಿಕ ತೃತೀಯ, ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳ ಪೋಷಕರಿಗೆ ಏರ್ಪಡಿಸಿದ್ದ ಅರೆಭಾಷೆ ಹಾಡಿನ ಸ್ಪರ್ಧೆಯಲ್ಲಿ ಕುಲ್ಲಚನ ಭಾಗೀರಥಿ ಪ್ರಥಮ, ಕಾಳೆರಮ್ಮನ ರಶಿ ದ್ವಿತೀಯ, ಪೈಕೇರ ಸುಚಿ ಮನೋಹರ್ ತೃತೀಯ ಬಹುಮಾನ ಪಡೆದುಕೊಂಡರು.
ಸ್ಫರ್ಧೆಯ ತೀರ್ಪುಗಾರರಾಗಿ ಕೋಡಿ ಭರತ್, ಮಿಲನಾ ಭರತ್, ಪರಿಚನ ತೇಜಸ್ವಿನಿ, ಪಟ್ಟಡ ಮಂಜುಳ ಕಾರ್ಯನಿರ್ವಹಿಸಿದರು. ಪುಟಾಣಿ ಮಕ್ಕಳು ಕಾರ್ಯಕ್ರಮ ಉದ್ಘಾಟಿಸಿದರೆ, ಪೇರಿಯನ ಪ್ರಣವಿ ಮತ್ತು ಪೇರಿಯನ ಉದಯ ಪ್ರಾರ್ಥಿಸಿದರು. ಸಂಘದ ನಿರ್ದೇಶಕರುಗಳಾದ ಪರಿಚನ ಸತೀಶ್, ಪುದಿಯನೆರವನ ರೇವತಿ ರಮೇಶ್, ಕೆದಂಬಾಡಿ ಕಾಂಚನ ನಿರೂಪಿಸಿದರೆ, ಕಾರ್ಯದರ್ಶಿ ಪೇರಿಯನ ಉದಯ ವಂದಿಸಿದರು.