ಜಾರ್ಖಂಡ್ : ಮಳೆಯಿಂದ ೮ ಸಾವು
ರಾಂಚಿ, ಅ. ೨: ಜಾರ್ಖಂಡ್ನಲ್ಲಿ ಸುರಿಯುತ್ತಿರುವ ಭಾರೀ ಮಳೆ ಹಾಗೂ ಸಿಡಿಲು ಬಡಿದು ರಾಂಚಿಯಲ್ಲಿ ಒಬ್ಬರು ಸೇರಿದಂತೆ ಕಳೆದ ೨೪ ಗಂಟೆಗಳಲ್ಲಿ ಎಂಟು ಜನರು ಮೃತಪಟ್ಟಿದ್ದಾರೆ. ಜಾರ್ಖಂಡ್ನ ಕೆಲವು ಭಾಗಗಳಲ್ಲಿ ಶನಿವಾರ ಸಂಜೆಯಿAದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯು ಹಲವು ಜೀವಗಳನ್ನು ಬಲಿ ತೆಗೆದುಕೊಂಡಿದ್ದು, ರಸ್ತೆಗಳು ಹಾಳಾಗಿವೆ. ಭಾನುವಾರ ರಾಂಚಿಯ ಲಾಲ್ಪುರ ಪ್ರದೇಶದ ಹತ್ಮಾ ಸರೈತಂಡ್ನಲ್ಲಿ ೨೮ ವರ್ಷದ ಯುವಕನೊಬ್ಬ ತುಂಬಿ ಹರಿಯುತ್ತಿದ್ದ ಚರಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಸೋಮವಾರ ಬೆಳಿಗ್ಗೆ ಘಟನೆಯ ಸ್ಥಳದಿಂದ ಸುಮಾರು ೨.೫ ಕಿ.ಮೀ ದೂರದಲ್ಲಿ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಗೊಂಡಾ ಪೊಲೀಸ್ ಠಾಣೆಯ ಪ್ರಭಾರಿ ರವಿ ಠಾಕೂರ್ ತಿಳಿಸಿದ್ದಾರೆ. ಜಾರ್ಖಂಡ್ನ ಜಮ್ರಾರಾ ಜಿಲ್ಲೆಯಲ್ಲಿ ಭಾನುವಾರ, ಸಿಡಿಲು ಬಡಿದು ಮಹಿಳೆ ಮತ್ತು ಆಕೆಯ ಮೂವರು ಮಕ್ಕಳು ಸಾವಿಗೀಡಾಗಿದ್ದಾರೆ. ಬೊಕಾರೊ ಜಿಲ್ಲೆಯಲ್ಲಿ ಮಣ್ಣಿನ ಮನೆಯ ಗೋಡೆ ಕುಸಿದು ಮಗುವೊಂದು ಮೃತಪಟ್ಟರೆ, ಪಲಾಮು ಜಿಲ್ಲೆಯ ಮಾಯಾಪುರ ಗ್ರಾಮದ ಕೊಳದಲ್ಲಿ ಮುಳುಗಿ ಒಂಬತ್ತು ಮತ್ತು ಹನ್ನೆರಡು ವರ್ಷ ವಯಸ್ಸಿನ ಇಬ್ಬರು ಬಾಲಕಿಯರು ಅಸುನೀಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಆವಿಷ್ಕಾರಕ್ಕೆ ವೈದ್ಯಕೀಯ ನೋಬೆಲ್ ಘೋಷಣೆ
ನವದೆಹಲಿ, ಅ. ೨: ಶರೀರಶಾಸ್ತç ಅಥವಾ ವೈದ್ಯಕೀಯ ವಿಭಾಗದಲ್ಲಿ ೨೦೨೩ನೇ ಸಾಲಿನ ನೋಬೆಲ್ ಪ್ರಶಸ್ತಿಯನ್ನು ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್ಮನ್ ಅವರುಗಳಿಗೆ ಘೋಷಿಸಲಾಗಿದೆ. ಎಂಆರ್ಎನ್ಎ ಕೋವಿಡ್ ಲಸಿಕೆಯ ಆವಿಷ್ಕಾರಕ್ಕೆ ಈ ಕ್ಯಾಟಲಿನ್ ಕಾರಿಕ್ ಮತ್ತು ಡ್ರೂ ವೈಸ್ಮನ್ಗೆ ನೀಡಲಾಗುತ್ತಿದೆ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಎಮ್ಆರ್ಎನ್ಎ ಹೇಗೆ ಸಂವಹನ ನಡೆಸುತ್ತದೆ ಎಂಬುದರ ಕುರಿತು ನಮ್ಮ ತಿಳುವಳಿಕೆಯನ್ನು ಅವರ ಅದ್ಭುತ ಸಂಶೋಧನೆಗಳು ಮೂಲಭೂತವಾಗಿ ಬದಲಾಯಿಸಿದೆ. ಈ ಮೂಲಕ, ಪ್ರಶಸ್ತಿ ವಿಜೇತರು ಆಧುನಿಕ ಕಾಲದಲ್ಲಿ ಮಾನವನ ಆರೋಗ್ಯಕ್ಕೆ ದೊಡ್ಡ ಅಪಾಯಗಳಲ್ಲಿ ಒಂದಾದ ಕೋವಿಡ್ಗೆ ಲಸಿಕೆ ಅಭಿವೃದ್ಧಿಪಡಿಸಿ ಅಭೂತಪೂರ್ವ ಕೊಡುಗೆ ನೀಡಿದ್ದಾರೆ ಎಂದು ಸಮಿತಿ ಉಲ್ಲೇಖಿಸಿದೆ.
ಶಿವಮೊಗ್ಗದಲ್ಲಿ ಗಲಭೆ : ಪರಿಸ್ಥಿತಿ ಸಹಜ ಸ್ಥಿತಿಯತ್ತ
ಶಿವಮೊಗ್ಗ, ಅ. ೨: ಈದ್ ಮಿಲಾದ್ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಉದ್ರಿಕ್ತಗೊಂಡ ಗುಂಪೊAದು ಹಿಂಸಾಚಾರ ನಡೆಸಿದ ನಂತರ ನಿಷೇಧಾಜ್ಞೆ ಜಾರಿಗೊಳಿಸಿರುವ ಶಿವಮೊಗ್ಗ ನಗರದ ರಾಗಿಗುಡ್ಡ ಪ್ರದೇಶದಲ್ಲಿ ಪರಿಸ್ಥಿತಿ ಈಗ ಶಾಂತಿಯುತವಾಗಿದ್ದು, ನಿಯಂತ್ರಣದಲ್ಲಿದೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ. ಭಾನುವಾರ ಕಲ್ಲು ತೂರಾಟದ ಘಟನೆ ನಡೆದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ. ಮಿಥುನ್ ಕುಮಾರ್ ತಿಳಿಸಿದ್ದಾರೆ. ಘಟನೆಯಲ್ಲಿ ಪೊಲೀಸರು ಸೇರಿದಂತೆ ಕೆಲವರಿಗೆ ಗಾಯಗಳಾಗಿದ್ದು, ಕೆಲವು ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ. ಗಾಯಗಳು ಮತ್ತು ಆಸ್ತಿ ಹಾನಿಗೊಳಗಾದವರಿಗೆ ದೂರು ಸಲ್ಲಿಸಲು ಹೇಳಿದ್ದೇವೆ. ಘಟನೆಯಲ್ಲಿ ಭಾಗಿಯಾದ ಕೆಲವರನ್ನು ನಾವು ಈಗಾಗಲೇ ರಕ್ಷಿಸಿದ್ದೇವೆ. ವೀಡಿಯೋಗ್ರಫಿ, ಸಿಸಿಟಿವಿ ಕ್ಯಾಮೆರಾ ಮತ್ತು ಡ್ರೋನ್ ಕ್ಯಾಮರಾ ಪರಿಶೀಲಿಸುತ್ತಿದ್ದು, ಗಲಭೆಯಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪ್ರಾರ್ಥನೆ ಸಲ್ಲಿಸಿ, ಪಾತ್ರೆ ತೊಳೆದ ರಾಹುಲ್
ಅಮೃತಸರ, ಅ. ೨: ಹಿರಿಯ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೋಮವಾರ ಪಂಜಾಬ್ನ ಅಮೃತಸರದಲ್ಲಿರುವ ಗೋಲ್ಡನ್ ಟೆಂಪಲ್ಗೆ ಭೇಟಿ ನೀಡಿದ್ದು, ಪ್ರಾರ್ಥನೆ ಸಲ್ಲಿಸಿದ್ದಾರೆ. ಅಲ್ಲದೇ, ಸ್ವಯಂ ಪ್ರೇರಿತರಾಗಿ ದೇವಾಲಯದಲ್ಲಿ ಪಾತ್ರೆ ತೊಳೆದಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅಮೃತಸರದ ಗೋಲ್ಡನ್ ಟೆಂಪಲ್ನ ಗರ್ಭಗುಡಿಯಲ್ಲಿ ಜನಸಮೂಹದ ನಡುವೆ ಗಾಂಧಿಯವರು ಕೈಮುಗಿದು ಪ್ರಾರ್ಥನೆ ಸಲ್ಲಿಸುತ್ತಿರುವುದು ವಿಡಿಯೋದಲ್ಲಿದೆ. ಪ್ರಾರ್ಥನೆ ಸಲ್ಲಿಸಿದ ನಂತರ ಅವರು, ಸಿಖ್ಖರ ಅತ್ಯುನ್ನತ ತಾತ್ಕಾಲಿಕ ಸ್ಥಾನವಾದ ಅಕಲ್ ತಖ್ತ್ಗೆ ಭೇಟಿ ನೀಡಿದ್ದು, ಭಕ್ತರು ಬಳಸುವ ನೀರಿನ ಬಟ್ಟಲುಗಳನ್ನು ಸ್ವಚ್ಛಗೊಳಿಸುವ ಮೂಲಕ ಸೇವಾ ಕಾರ್ಯ ಮಾಡಿದರು. ಇತರ ಭಕ್ತರ ನಡುವೆ ಕುಳಿತು, ಗಾಂಧಿ ಪಾತ್ರೆಗಳನ್ನು ತೊಳೆಯುತ್ತಿರುವುದು ಕಂಡುಬAದಿತು.
‘ಗ್ರಾಮ ನ್ಯಾಯಾಲಯ ವ್ಯವಸ್ಥೆ ಜಾರಿಗೆ ಚಿಂತನೆ’
ಬೆAಗಳೂರು, ಅ. ೨: ಗ್ರಾಮ ನ್ಯಾಯಾಲಯ ವ್ಯವಸ್ಥೆ ಜಾರಿ ಮಾಡಲು ಚಿಂತನೆ ನಡೆಸಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಹಮ್ಮಿಕೊಂಡಿದ್ದ ೨೦೨೩ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸ್ವಚ್ಛ ಸರ್ವೇಕ್ಷಣಾ ಗ್ರಾಮೀಣ ರಾಜ್ಯ ಮಟ್ಟದ ಪ್ರಶಸ್ತಿ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ವಿತರಸಿ ಅವರು ಮಾತನಾಡಿದರು. ಖಾದಿ-ಗ್ರಾಮೋದ್ಯೋಗ ಸ್ಥಳಗಳನ್ನು ಅಭಿವೃದ್ಧಿಪಡಿಸಲಾಗುವುದು ಮತ್ತು ಗ್ರಾಮೋದ್ಯೋಗ ಉತ್ಪನ್ನಗಳಿಗೆ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗುವುದು. ಗ್ರಾಮಗಳ ವ್ಯಾಜ್ಯಗಳು ಗ್ರಾಮಗಳಲ್ಲೇ ಬಗೆಹರಿಯಬೇಕು ಎನ್ನುವ ಮಹತ್ವಾಕಾಂಕ್ಷೆಯಿAದ ಗ್ರಾಮ ನ್ಯಾಯಾಲಯಗಳನ್ನು ಸ್ಥಾಪಿಸುವ ಬಗ್ಗೆ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಮಹಾತ್ಮಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಗ್ರಾಮ ಸ್ವರಾಜ್ಯ ಮತ್ತು ಅಧಿಕಾರ ವಿಕೇಂದ್ರೀಕರಣ ಆಶಯದಂತೆ ಗ್ರಾಮ ನ್ಯಾಯಾಲಯಗಳ ಸ್ಥಾಪನೆಯಾದರೆ ಗ್ರಾಮಸ್ಥರಿಗೆ ಬಹಳ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
ಹೊತ್ತಿ ಉರಿದ ಎಲೆಕ್ಟಿçಕ್ ಕಾರು
ಬೆಂಗಳೂರು, ಅ. ೨: ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ರಸ್ತೆ ಮಧ್ಯೆಯಲ್ಲೇ ಎಲೆಕ್ಟಿçಕ್ ಕಾರು ಹೊತ್ತಿ ಉರಿದಿದ್ದು, ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲೆಕ್ಟಿçಕ್ ವಾಹನಗಳ ಮಾಲೀಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಜೆಪಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದಾಲ್ಮಿಯಾ ವೃತ್ತದಲ್ಲಿ ಶನಿವಾರ ಈ ಘಟನೆ ನಡೆದಿದೆ. ಇಬ್ಬರು ಸ್ನೇಹಿತರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಮತ್ತು ಇದ್ದಕ್ಕಿದ್ದಂತೆ ವಾಹನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಹೊಗೆ ಹೊರಹೊಮ್ಮಲು ಪ್ರಾರಂಭಿಸಿತು. ಅಷ್ಟರಲ್ಲೇ ಎಲೆಕ್ಟಿçಕ್ ಕಾರಿಗೆ ಬೆಂಕಿ ಹತ್ತಿಕೊಂಡಿತು. ಕಾರಿನಲ್ಲಿದ್ದ ಇಬ್ಬರು ಸ್ನೇಹಿತರು ಸರಿಯಾದ ಸಮಯಕ್ಕೆ ಜಿಗಿದು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಮಾನದ ತುರ್ತು ಬಾಗಿಲು ತೆರೆಯಲು ಯತ್ನ
ಬೆಂಗಳೂರು, ಅ. ೨: ಇಂಡಿಗೋ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೋರ್ವ ತುರ್ತು ನಿರ್ಗಮನದ ಬಾಗಿಲನ್ನು ತೆರೆಯಲು ಪ್ರಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ. ಮಹಾರಾಷ್ಟç ಮೂಲದ ಸ್ವಪ್ನಿಲ್ ಹೊಲೆ (೩೬) ವಿಮಾನ ಸಂಖ್ಯೆ ೬ಇ ೬೮೦೩ ರಲ್ಲಿ ನಿರ್ಗಮನ ಬಾಗಿಲು ತೆರೆಯಲು ಪ್ರಯತ್ನಿಸಿದ್ದ ಎಂದು ತಿಳಿದುಬಂದಿದೆ. ಇಂಟರ್ಗ್ಲೋಬ್ನ ಸಹಾಯಕ ವ್ಯವಸ್ಥಾಪಕ ಅನು ಪಿ ಟಾಮ್ ಅವರು ಏರ್ಲೈನ್ ಪರವಾಗಿ ಏರ್ಪೋರ್ಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ದೂರಿನ ಆಧಾರದ ಮೇಲೆ ಪೊಲೀಸರು ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಿಸಿದ್ದಾರೆ. ವಿಮಾನದ ೫ಇ ಸೀಟ್ನಲ್ಲಿ ವ್ಯಕ್ತಿ ಕುಳಿತುಕೊಂಡಿದ್ದರು. ಅವರು ಬೆಂಗಳೂರಿನಿAದ ಬ್ಯಾಂಕಾಕ್ಗೆ ಪ್ರಯಾಣಿಸುತ್ತಿದ್ದರು. ಬೆಂಗಳೂರು ವಿಮಾನಕ್ಕೆ ತಲುಪಲು ನಾಗ್ಪುರ ವಿಮಾನ ನಿಲ್ದಾಣದಲ್ಲಿ ವಿಮಾನ ಏರಿದ್ದರು. ಸೆಪ್ಟೆಂಬರ್ ೩೦ ರ ರಾತ್ರಿ ೧೦:೧೫ ಕ್ಕೆ ವಿಮಾನವು ಟೇಕ್ ಆಫ್ ಆಗಬೇಕಿತ್ತು. ಆ ಸಮಯದಲ್ಲಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದರು. ವಿಮಾನವು ರಾತ್ರಿ ೧೧:೫೫ ಕ್ಕೆ ಬೆಂಗಳೂರಿಗೆ ತಲುಪಿದ ನಂತರ ವ್ಯಕ್ತಿಯನ್ನು ಪೊಲೀಸರು ಠಾಣೆಗೆ ಕರೆದೊಯ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ ೩೩೬ ರ ಅಡಿಯಲ್ಲಿ ಎಫ್ಐಆರ್ ದಾಖಲಾಗಿದೆ.