ಮಡಿಕೇರಿ, ಅ. ೨: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ೨೦೨೩ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರ ಹೆಸರುಗಳನ್ನು ಸಾರ್ವಜನಿಕರು ಸೇವಾ ಸಿಂಧು ಪೋರ್ಟಲ್ನಲ್ಲಿ ನಾಮನಿರ್ದೇಶನ ಮಾಡಬಹು ದಾಗಿದ್ದು, ನಾಮನಿರ್ದೇಶನದ ಅವಧಿಯು ತಾ.೧ರಿಂದ ಪ್ರಾರಂಭವಾಗಿ ತಾ.೧೫ ಕಡೆಯ ದಿನವಾಗಿರುತ್ತದೆ. ಸೇವಾಸಿಂಧು ಪೋರ್ಟಲ್ನಲ್ಲಿ ವೆಬ್ಸೈಟ್ ವಿಳಾಸ hಣಣಠಿs://sevಚಿsiಟಿಜhu.ಞಚಿಡಿಟಿಚಿಣಚಿಞಚಿ.gov.iಟಿ ಇಲ್ಲಿ ನಾಮನಿರ್ದೇಶನ ಮಾಡಿಕೊಳ್ಳುವಂತೆ ಪ್ರಕಟಣೆ ತಿಳಿಸಿದೆ.