ಸೋಮವಾರಪೇಟೆ, ಅ. ೧: ಪಟ್ಟಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನದ ಉಳಿಕೆ ಕಾಮಗಾರಿಯನ್ನು ಪೂರ್ಣಗೊಳಿಸಿ ನಮಗೆ ಹಸ್ತಾಂತರ ಮಾಡಬೇಕೆಂದು ಜಿಲ್ಲೆಯ ದಲಿತ ಹಿತರಕ್ಷಣಾ ಒಕ್ಕೂಟ ತಹಶೀಲ್ದಾರ್ ಅವರಿಗೆ ಮನವಿ ಮಾಡಿದೆ.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಮೀಪ ಒಂದು ಮುಕ್ಕಾಲು ಕೋಟಿ ವೆಚ್ಚದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ಪ್ರಾರಂಭಿಸಿ ಹತ್ತು ವರ್ಷ ಕಳೆದಿದ್ದರೂ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಹಲವು ಕೆಲಸಗಳು ಬಾಕಿ ಇದ್ದು ಅಧಿಕೃತವಾಗಿ ಉದ್ಘಾಟನೆ ಕೂಡ ಆಗಿರುವುದಿಲ್ಲ. ಸಮಾಜ ಕಲ್ಯಾಣ ಇಲಾಖೆಗೆ ತಾತ್ಕಾಲಿಕವಾಗಿ ಒಂದು ವರ್ಷದ ಅವಧಿಗೆ ನೀಡಲಾಗಿದ್ದು, ಈಗ ಅವಧಿಯು ಮುಗಿದಿರುತ್ತದೆ. ಈ ಭವನವು ದಲಿತ ಸಮುದಾಯದ ಕಾರ್ಯಕ್ರಮಗಳಿಗೆ ಬೇಕಾಗಿದ್ದು ತಕ್ಷಣವೇ ಉಳಿದ ಕಾಮಗಾರಿ ಮುಗಿಸಿ ಕಟ್ಟಡವನ್ನು ಹಸ್ತಾಂತರಿಸಬೇಕೆAದು ತಹಶೀಲ್ದಾರ್ ನರಗುಂದ್ ಅವರಿಗೆ ಮನವಿ ಮಾಡಿದೆ.