ಸುಂಟಿಕೊಪ್ಪ, ಅ. ೧: ಸುಂಟಿಕೊಪ್ಪದ ಶ್ರೀ ಕೋದಂಡರಾಮ ದೇವಾಲಯದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಗೌರಿ ಗಣೇಶೋತ್ಸವ ಆಚರಣಾ ಸಮಿತಿ ವತಿಯಿಂದ ಪ್ರತಿಷ್ಠಾಪಿಸಲಾಗಿದ್ದ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಭವ್ಯ ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಪಟ್ಟಣದ ಮುಖ್ಯಬೀದಿಗಳಲ್ಲಿ ಚಂಡೆ, ಡಿಜೆ ಮತ್ತು ವಾದ್ಯಗೋಷ್ಠಿಯೊಂದಿಗೆ ಮೆರವಣಿಗೆಯಲ್ಲಿ ಸಾಗಿಸಿ ನಂತರ ಗದ್ದೆಹಳ್ಳದ ಯಂಕನ ಉಲ್ಲಾಸ್, ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿಸರ್ಜಿಸಲಾಯಿತು.

ಸೆ. ೨೭ ರಂದು ಸಂಜೆ ೪ ಗಂಟೆಗೆ ವಿಸರ್ಜನೋತ್ಸವ ಪೂಜೆಯನ್ನು ಭಕ್ತಾದಿಗಳ ಸಮುಖದಲ್ಲಿ ಅರ್ಚಕರುಗಳಾದ ದರ್ಶನ್ ಬಾರಿತ್ತಾಯ, ಮನೋಜ್ ಭಟ್, ಕೃಷ್ಣಭಟ್ ನೆರವೇರಿಸಿದರು. ನಂತರ ೪ ಗಂಟೆಗೆ ಚಂಡೆಮೇಳ, ಡಿಜೆ ಹಾಗೂ ವಾದ್ಯಗೋಷ್ಠಿಯೊಂದಿಗೆ ಸುಂಟಿಕೊಪ್ಪದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮೂಲಕ ಶ್ರೀ ಗೌರಿ ಗಣೇಶ ಮೂರ್ತಿಯನ್ನು ಕರೆದೊಯ್ಯಲಾಯಿತು. ರಾತ್ರಿ ೧೧.೩೦ ಗಂಟೆಗೆ ಯಂಕನ ಉಲ್ಲಾಸ್, ಯಂಕನ ಕರುಂಬಯ್ಯ ಅವರ ಕೆರೆಯಲ್ಲಿ ವಿಸರ್ಜಿಸಲಾಯಿತು.

ಈ ಸಂದರ್ಭ ಗೌರಿ ಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಘ್ನೇಶ್, ನಿಕಟಪೂರ್ವ ಅಧ್ಯಕ್ಷ ಬಿ.ಎಂ. ಸುರೇಶ್, ಪ್ರಧಾನ ಕಾರ್ಯದರ್ಶಿ ಪಿ. ಲೋಕೇಶ್ (ಲೋಕಿ), ಉಪಾಧ್ಯಕ್ಷ ಬಿ.ಕೆ. ಪ್ರಶಾಂತ್ (ಕೊಕ), ಖಜಾಂಜಿ ಎಸ್. ಪೃಥ್ವಿರಾಜ್, ಕಾರ್ಯದರ್ಶಿಗಳಾದ ಸಿ.ಸಿ. ಸುನೀಲ್ ಕುಮಾರ್, ಪಿ.ಕೆ. ಸೂರ್ಯ, ಎಂ. ಪಾಂಡ್ಯನ್, ಸಹಕಾರ್ಯದರ್ಶಿಗಳಾದ ಹೆಚ್. ನವೀನ್, ಜಿ. ಹೃತಿಕ್, ಎಂ.ಹೆಚ್. ನಿಖಿಲ್ ಹಾಗೂ ಇತರರು ಇದ್ದರು.

ಕುಶಾಲನಗರ ತಾಲೂಕು ಡಿವೈಎಸ್‌ಪಿ ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕರಾದ ರಾಜೇಶ್ ಕೋಟ್ಯಾನ್, ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀಧರ್ ಮತ್ತು ಸಿಬ್ಬಂದಿಗಳು ರಾಜ್ಯ ಸಶಸ್ತç ಮೀಸಲು ಪಡೆಯ ಪೊಲೀಸರು ಬಿಗಿ ಬಂದೋಬಸ್ತನ್ನು ಏರ್ಪಡಿಸಿದ್ದರು.