ಕೊಡವ ಭಾಷಾ ಸಾಹಿತಿ ಕಾಣತಂಡ ಮುತ್ತಪ್ಪ (೮೧) ಸೋಮವಾರÀ ನಿಧನರಾದರು. ತಿತಿಮತಿಯ ನಿವಾಸಿ (ಬಲ್ಯಮನೆ ಕದನೂರು) ಮುತ್ತಪ್ಪ ಅವರು ಕೊಡವ ಭಾಷೆಯಲ್ಲಿ ಮಹಾಭಾರತ ಬರೆದಿದ್ದರು. ಕನ್ನಡ ಹಾಗೂ ಕೊಡವ ಭಾಷೆಗಳಲ್ಲಿ ಹಲವು ಪುಸ್ತಕಗಳನ್ನು ಹೊರತಂದಿದ್ದರು. ಕೊಡವ ಸಾಹಿತ್ಯ ಅಕಾಡೆಮಿಯಿಂದಲೂ ಹಲವು ಪುಸ್ತಕ ಹೊರತಂದಿದ್ದು, ಅವರಿಗೆ ಗೌರವ ಪ್ರಶಸ್ತಿ ನೀಡಲಾಗಿತ್ತು. ೩೦ ವರ್ಷ ಕಾಲ ಶಿಕ್ಷಕರಾಗಿಯೂ ಸೇವೆ ಸಲ್ಲಿಸಿದ್ದರು. ಮೃತರು ಪತ್ನಿ ಮತ್ತು ಮೂವರು ಗಂಡು ಮಕ್ಕಳನ್ನು ಅಗಲಿದ್ದಾರೆ.