ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಸಕಾರಾತ್ಮಕ ಸ್ವಾತಂತ್ರö್ಯ ಅಗತ್ಯ. ಸ್ವಾತಂತ್ರö್ಯ ವ್ಯಕ್ತಿಯ ಹಕ್ಕುಗಳಲ್ಲೆಲ್ಲಾ ಪ್ರಧಾನವಾದ ಹಕ್ಕಾಗಿದ್ದು, ವ್ಯಕ್ತಿಯು ತನ್ನ ಉತ್ತಮ ಜೀವನವನ್ನು ರೂಪಿಸಿಕೊಳ್ಳುವಲ್ಲಿ ಅದು ಸಹಕಾರಿ. ವ್ಯಕ್ತಿಗಳಿಗೆ ಸ್ವಾತಂತ್ರö್ಯವಿಲ್ಲದಿದ್ದರೆ ಅವರು ಗುಲಾಮರಿದ್ದಂತೆ. ವ್ಯಕ್ತಿಗಳಿಗೆ ಪ್ರಾಣ ಹೇಗೆ ಮುಖ್ಯವೋ. ಹಾಗೆಯೇ ಸ್ವಾತಂತ್ರö್ಯ ಕೂಡ ಮುಖ್ಯ. ಸ್ವಾತಂತ್ರö್ಯವು ವ್ಯಕ್ತಿತ್ವ ವಿಕಾಸಕ್ಕೆ ಅತ್ಯಂತ ಅವಶ್ಯ. ವ್ಯಕ್ತಿಯ ಅರ್ಥಪೂರ್ಣ ಜೀವನಕ್ಕೆ ಅದು ಪೂರಕ. ಸ್ವಾತಂತ್ರö್ಯವು ಕೇವಲ ವ್ಯಕ್ತಿಯ ಅಭಿವೃದ್ಧಿಗೆ ಅಷ್ಟೇ ಅಲ್ಲದೆ, ಅದು ಸಮಾಜದ ಅಭಿವೃದ್ಧಿಗೆ ಮತ್ತು ರಾಜ್ಯದ ಅಭಿವೃದ್ಧಿಗೆ ಕೂಡ ಅತ್ಯವಶ್ಯ. ಎಲ್ಲ ಅಭಿವೃದ್ಧಿಗೂ ಸ್ವಾತಂತ್ರö್ಯವೇ ಮೂಲಾಧಾರವಾಗಿದ್ದು, ಅದು ವ್ಯಕ್ತಿಗಳು, ರಾಜಕೀಯ, ಆರ್ಥಿಕ, ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಮೊದಲಾದ ಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾಧಿಸಲು ಬೇಕಾದುದಾಗಿದೆ. ಆದ್ದರಿಂದಲೇ ವ್ಯಕ್ತಿಗಳು ಸ್ವಾತಂತ್ರö್ಯಕ್ಕಾಗಿ ಹೋರಾ ಡುತ್ತಾ ಬಂದಿರುವುದನ್ನು ಚರಿತ್ರೆಯಲ್ಲಿ ಕಾಣುತ್ತೇವೆ.

ಸ್ವಾತಂತ್ರö್ಯವೆAದರೆ ವ್ಯಕ್ತಿಗಳು ಶೋಷಣೆ ಯಿಂದ ಮುಕ್ತಗೊಳಿಸಿಕೊಳ್ಳಲು ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಹೋಗಲು ಮತ್ತು ಉತ್ತಮ ಜೀವನ ರೂಪಿಸಿಕೊಳ್ಳಲು ಅವಕಾಶವನ್ನು ಹೊಂದಿರುವುದೇ ಆಗಿದೆ. ವ್ಯಕ್ತಿಗಳು, ಸಮುದಾಯಗಳು, ದೇಶಗಳು ಸ್ವಾತಂತ್ರö್ಯಕ್ಕಾಗಿ ಹೋರಾಟ ಮಾಡುತ್ತಾ ಬಂದಿರುವುದನ್ನು ಇತಿಹಾಸ ದಾಖಲಿಸಿದೆ. ಭಾರತದ ಸ್ವಾತಂತ್ರö್ಯ ಹೋರಾಟದಲ್ಲಿ ಗಾಂಧೀಜಿ ಅವರ ಕೊಡುಗೆ ಅನನ್ಯವಾದುದು. ಭಾರತವನ್ನು ಪಾಶ್ಚಾತ್ಯ ದಾಸ್ಯದಿಂದ ಮುಕ್ತಗೊಳಿಸಲು ಅವರು ತಮ್ಮ ಜೀವನವನ್ನು ಮುಡಿಪಾಗಿಟ್ಟರು. ಸತ್ಯಾಗ್ರಹ, ಉಪವಾಸ, ಸತ್ಯ, ಅಹಿಂಸೆಗಳ ಮೂಲಕ ಸ್ವಾತಂತ್ರö್ಯ ಪಡೆಯಲು ಅವರು ನಾಂದಿ ಹಾಡಿದರು.

ಗಾಂಧೀಜಿ ಅವರು ವಸಾಹತುಶಾಹಿ ಪ್ರಭುತ್ವದಿಂದ ದೇಶದ ಬಿಡುಗಡೆ ಪಡೆಯಲು ರೂಪಿಸಿಕೊಂಡ ರಾಜಕೀಯ, ಧಾರ್ಮಿಕವಾದ ಪ್ರಮುಖ ಅಸ್ತçಗಳು ಸತ್ಯ, ಅಹಿಂಸೆ, ಸತ್ಯಾಗ್ರಹ. ಇವುಗಳನ್ನು ದೇಶೀಯ ನೆಲೆಯಲ್ಲಿ ಪ್ರಯೋಗ ಮಾಡುತ್ತಾ ವಸಾಹತುಶಾಹಿ ಪ್ರಭುತ್ವದ ವಿರುದ್ಧ ಜಗತ್ತಿಗೆ ತಮ್ಮ ಅಹಿಂಸಾ ತತ್ವವನ್ನು ಪ್ರಯೋಗಕ್ಕೆ ಒಡ್ಡಿದರು. ಹಾಗೆಯೇ ರಾಷ್ಟಿçÃಯತೆ ಮತ್ತು ದೇಶೀಯತೆಯ ಹಿನ್ನೆಲೆಯಲ್ಲಿ ನೋಡಿದಾಗ ಗಾಂಧೀಜಿ ಅವರ ಚಿಂತನಾ ಕ್ರಮ ಮತ್ತು ಅವರು ಮಾಡಿದ ಸಾಧನೆ ಮಹತ್ವವಾಗಿದೆ. ಗಾಂಧಿ ಅವರ ಸತ್ಯ, ಅಹಿಂಸೆ, ಸತ್ಯಾಗ್ರಹಗಳ ಜೊತೆಗೆ ಗ್ರಾಮ ಸ್ವರಾಜ್ಯದ ಕಲ್ಪನೆ, ಸರ್ವೋದಯದ ತತ್ವಗಳು ರಾಜಕೀಯ, ಸಾಮಾಜಿಕ, ಧಾರ್ಮಿಕ ಮತ್ತು ಅಧ್ಯಾತ್ಮಿಕ ವಿಚಾರಗಳನ್ನೊಳಗೊಂಡ ಅಂಶಗಳು ಗಾಂಧೀವಾದದ ಚಿಂತನೆಯಲ್ಲಿ ಅಭಿವ್ಯಕ್ತಗೊಂಡಿದೆ.

ಗಾAಧೀವಾದವು ರಾಜಕೀಯ ತತ್ವವಾಗಿ ರಾಷ್ಟಿçÃಯತೆಯ ಪರಿಕಲ್ಪನೆಯ ಮೂಲಕ ವಸಾಹತುಶಾಹಿ ಪ್ರಭುತ್ವಕ್ಕೆ ಪ್ರತಿರೋಧನಾ ನೆಲೆಯನ್ನು ದೇಶೀಯ ನೆಲೆಗಟ್ಟಿನಲ್ಲಿ ರೂಪಿಸಿಕೊಂಡಿತ್ತು. ಗಾಂಧೀಜಿ ಅವರು ಹೂಡಿದ ಎಲ್ಲ ರಾಜಕೀಯ ತಂತ್ರಗಳು ದೇಶೀಯ ನೆಲೆಯಲ್ಲಿ ರೂಪುಗೊಂಡಿದ್ದವು. ವಸಾಹತುಶಾಹಿ ಆಡಳಿತ ಕ್ರಮವನ್ನು ವಿರೋಧಿಸುವುದಕ್ಕೆ ಗಾಂಧೀಜಿ ಅವರು ಅಹಿಂಸಾತ್ಮಕ ರಾಜಕೀಯ ತಂತ್ರಗಳನ್ನು ಬಳಸಿದರು. ಇದಕ್ಕಾಗಿ ರಾಷ್ಟಿçÃಯತೆಯನ್ನು ಒಂದು ರಾಜಕೀಯ ಪರಿಭಾಷೆಯನ್ನಾಗಿ ಉಪಯೋಗಿಸಿದರು.

ಗಾಂಧೀಜಿ ಅವರು ಯೋಚನೆ, ಮಾತು ಮತ್ತು ಕೃತಿಗಳಲ್ಲಿ ಹಿಂಸೆಯನ್ನು ಬಯಸಿದವರಲ್ಲ. ಇವರು ಅಹಿಂಸೆ ಎಂಬ ಪದಕ್ಕೆ ಬಹಳ ವ್ಯಾಪಕವಾದ ಅರ್ಥವನ್ನು ಕೊಟ್ಟಿದ್ದರು. ಕೆಟ್ಟದನ್ನು ಯೋಚಿಸುವುದು, ದ್ವೇಷಿಸುವುದು, ಬೇರೆಯವರಿಗೆ ಕೇಡನ್ನು ಬಯಸುವುದು, ನಮ್ಮ ಅವಶ್ಯಕತೆಗಿಂತ ಹೆಚ್ಚಿಗೆ ಇಟ್ಟುಕೊಳ್ಳುವುದು ಈ ಎಲ್ಲವೂ ಹಿಂಸೆಯೇ ಎಂಬುದು ಗಾಂಧೀಜಿ ಅವರ ಅಭಿಪ್ರಾಯವಾಗಿತ್ತು. ಅಹಿಂಸೆಯು ಅಶಕ್ತರ, ಹೇಡಿಗಳ ಅಸ್ತç ಎಂಬ ಸಾಮಾನ್ಯ ಗ್ರಹಿಕೆಯನ್ನು ಗಾಂಧೀಜಿ ಒಪ್ಪಿರಲಿಲ್ಲ. ದಕ್ಷಿಣ ಆಫ್ರೀಕಾದಲ್ಲಿನ ಚಳವಳಿ, ಅಸಹಕಾರ ಚಳವಳಿ, ನಾಗರಿಕ - ಕಾನೂನುಭಂಗ ಚಳುವಳಿ, ಸತ್ಯಾಗ್ರಹ ಇವೆಲ್ಲವೂ ಗಾಂಧೀಜಿ ಅವರು ಅಹಿಂಸೆಯ ಮಾರ್ಗವನ್ನು ಜನಪ್ರಿಯವಾಗಿ ಉಪಯೋಗಿಸಿಕೊಂಡ ನಿದರ್ಶನಗಳಾಗಿವೆ. ಗಾಂಧೀಜಿ ಅವರ ಧ್ಯೇಯ ಎಷ್ಟು ಉತ್ತಮವಾಗಿರಬೇಕೆಂದು ತಿಳಿಸಿರುವರೋ ಆ ಧ್ಯೇಯವನ್ನು ಸಾಧಿಸಲು ಅನುಸರಿಸುವ ಮಾರ್ಗಗಳು ಸಹ ಅಷ್ಟೇ ಪರಿಶುದ್ಧವಾಗಿರಬೇಕೆಂದು ತಿಳಿಸಿದ್ದಾರೆ. ಧ್ಯೇಯ ಸಾಧನೆಯ ಮಾರ್ಗ ಕೂಡ ನ್ಯಾಯಯುತವಾಗಿ, ಪರಿಶುದ್ಧವಾಗಿ ಇರಬೇಕು. ನ್ಯಾಯ, ಧರ್ಮ, ಸಮಾನತೆ, ಸ್ವಾತಂತ್ರö್ಯ ಮುಂತಾದವುಗಳಿAದ ಕೂಡಿದ ಕಲ್ಪನೆಯನ್ನು ಅವರು ಭಾರತಕ್ಕೆ ಹಾಗೂ ಇಡೀ ವಿಶ್ವಕ್ಕೆ ನೀಡಿದರು. ನಮ್ಮ ಸಂವಿಧಾನದ ರಚನೆಕಾರರು ಇವುಗಳಿಂದ ಪ್ರಭಾವಿತರಾಗಿ ರಾಜ್ಯ ನಿರ್ದೇಶಕ ತತ್ವಗಳು, ಮೂಲಭೂತ ಹಕ್ಕುಗಳು ಮುಂತಾದವುಗಳನ್ನು ಸಂವಿಧಾನದಲ್ಲಿ ಅಳವಡಿಸಿದ್ದಾರೆ.

ಸತ್ಯಾಗ್ರಹದ ಮೂಲಕ ಸ್ವಾತಂತ್ರö್ಯ ಪಡೆಯಬಹುದೆಂಬ ಅಪರೂಪದ ಹಾಗೂ ವಿನೂತನವಾದ ಮಾರ್ಗವನ್ನು ವಿಶ್ವಕ್ಕೆ ತೋರಿಸಿಕೊಟ್ಟ ಅಸಮಾನ್ಯ ವ್ಯಕ್ತಿ ಗಾಂಧೀಜಿ. ಇಂದೂ ಗಾಂಧೀಜಿ ಅವರು ಹಾಕಿಕೊಟ್ಟ ಮಾರ್ಗ ಹೆಚ್ಚು ಉಪಯುಕ್ತವಾದದ್ದು. ಗಾಂಧೀಜಿ ಅವರ ತತ್ವಗಳು ಪ್ರಸ್ತುತ ಜಗತ್ತಿಗೆ ತೀರಾ ಅನಿವಾರ್ಯ. ಇವುಗಳ ಅನುಷ್ಠಾನದ ಬಗ್ಗೆ ಸರಕಾರ ಕಾನೂನುಗಳನ್ನು ಜಾರಿಗೊಳಿಸಬೇಕು. ಆಗ ನಮ್ಮ ನಾಡು ಶಾಂತಿಯ ನಾಡಾಗಲು ಸಾಧ್ಯವಿದೆ.

- ನಿರ್ಮಲ ಪೂವಯ್ಯ, ಸಹಾಯಕ ಪ್ರಾಧ್ಯಾಪಕರು, ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ಮಡಿಕೇರಿ. ಮೊ. ೯೪೪೯೯೪೬೧೪೨.