ಗೋಣಿಕೊಪ್ಪ ವರದಿ, ಅ. ೨: ಕ್ಯಾಲ್ಸ್ ಶಾಲೆಯಲ್ಲಿ ಆಯೋಜಿಸಿದ್ದ ಕ್ಯಾಲ್ಸ್ಯಾನ್ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಚಂದ್ರಯಾನದ ವಿಶೇಷ ಅನುಭವ ನೀಡಿತು. ಹಸಿವು ನೀಗಿಸಲು ಸುಸ್ಥಿರ ಆಹಾರ ಉತ್ಪಾದನೆ, ಹೈಡ್ರೋಪೋನಿಕ್ಸ್ ಮತ್ತು ಅಕ್ವಾಪೋನಿಕ್ಸ್ ಕೃಷಿ, ರಾಗಿ ಬೆಳೆಯ ಮಹತ್ವ, ಮಳೆ ಕೊಯ್ಲು, ನೀರು ಸಂರಕ್ಷಣೆ, ಮಣ್ಣಿನ ಫಲವತ್ತತೆ, ದೃಷ್ಠಿ ಇಲ್ಲದವರಿಗೆ ದಾರಿ ತೋರುವ ಅಡಚಣೆ ಪತ್ತೆಕಾರಕ ತಂತ್ರಜ್ಞಾನ ವಿಶೇಷವಾಗಿ ಮೂಡಿ ಬಂದವು.

ಆರೋಗ್ಯಕರ ರೀತಿಯಲ್ಲಿ ಆಹಾರ ಉತ್ಪಾದನೆಗೆ ಬೇಕಾದ ಹಣ್ಣು, ತರಕಾರಿ ಬೆಳೆಯುವ ವಿಧಾನ, ಜೀವಸತ್ವ ಮತ್ತು ಪೋಷಕಾಂಶ ಪೋಷಣೆಗೆ ಒತ್ತು ನೀಡಲಾಯಿತು. ಜಾಗತಿಕವಾಗಿ ಆಹಾರ ಬೇಡಿಕೆ ಪೂರೈಸಲು ಕೃಷಿಯಲ್ಲಿ ನಾವಿನ್ಯತೆಯ ಮಹತ್ವ, ಸುಸ್ಥಿರ ಕೃಷಿ ಪದ್ಧತಿ ಉತ್ತೇಜಿಸುವ ಜಾಗತಿಕ ಆಹಾರ ಭದ್ರತೆಯಲ್ಲಿ ರಾಗಿ ಬೆಳೆಯ ಪ್ರಾಮುಖ್ಯತೆಯನ್ನು ತಿಳಿಸಲಾಯಿತು.

ಹೈಡ್ರೋಪೋನಿಕ್ಸ್ ಮತ್ತು ಅಕ್ವಾಪೋನಿಕ್ಸ್ ಪ್ರದರ್ಶನವು ಆಕರ್ಷಣೆಗಳಲ್ಲಿ ಒಂದಾಗಿತ್ತು. ಹೈಡ್ರೋಪೋನಿಕ್ಸ್, ಮಣ್ಣಿಲ್ಲದೆ ಸಸ್ಯಗಳನ್ನು ಬೆಳೆಸುವ ವಿಧಾನ, ಜಲಕೃಷಿಗಳ ಸಂಯೋಜನೆಯಾದ ಅಕ್ವಾಪೋನಿಕ್ಸ್ ಬೆಳೆಗೆ ಉತ್ತೇಜನ, ಪೋಷಕಾಂಶಗಳಿAದ ಸಮೃದ್ಧವಾಗಿರುವ ನೀರಿನಲ್ಲಿ ಬೆಳೆಯುತ್ತಿರುವ ಸಸ್ಯಗಳು, ನೀರು ಸಂರಕ್ಷಿಸುವ ವಿಧಾನ, ಹಸಿವು ನೀಗಿಸಲು ಸಮಗ್ರ ಕೃಷಿ ವ್ಯವಸ್ಥೆಯ ಪ್ರಯೋಜನ, ಪೋಷಕಾಂಶಗಳ ಉತ್ಪಾದನೆಯಿಂದ ಸ್ವಾವಲಂಬನೆಗಾಗಿ ಗ್ರಾಮೀಣ ಸಮುದಾಯಗಳಿಗೆ ಭರವಸೆಯ ಪರಿಹಾರವಾಗಿದೆ ಎಂಬುವುದನ್ನು ತಿಳಿಸಲಾಯಿತು.

ರಾಗಿ ಬೆಳೆಯಂತಹ ನಿರ್ಲಕ್ಷಿಸಲ್ಪಟ್ಟಿರುವ ಧಾನ್ಯಗಳನ್ನು ಪುನರುಜ್ಜೀವನ ಗೊಳಿಸಲು ರಾಗಿ ಉತ್ಪನ್ನ ಪ್ರದರ್ಶನ ಗಮನ ಸೆಳೆಯಿತು. ವಿಶ್ವಸಂಸ್ಥೆಯು ೨೦೨೩ ಅನ್ನು ಅಂರ‍್ರಾಷ್ಟಿçÃಯ ರಾಗಿ ವರ್ಷವೆಂದು ಘೋಷಿಸುವುದರೊಂದಿಗೆ, ಅಪೌಷ್ಟಿಕತೆಯನ್ನು ಎದುರಿಸುವ ಸಾಮರ್ಥ್ಯದ ಬಗ್ಗೆ ಅರಿವು ಮೂಡಿಸಿದನ್ನು ತಿಳಿಸಲಾಯಿತು. ಮಳೆ ನೀರು ಕೊಯ್ಲು, ನೀರಿನ ಮಟ್ಟದ ಸೂಚಕದ ತಂತ್ರಜ್ಞಾನದ ಮಾಹಿತಿ ನೀಡಲಾಯಿತು.

ಭೂಮಿಯ ಮೇಲಿನ ಎಲ್ಲ ಜೀವಿಗಳ ಜೀವನ, ಬದುಕಲು ಸೂರ್ಯನ ಬೆಳಕು ಮತ್ತು ಶಾಖದ ಶಕ್ತಿಯ ಅಗತ್ಯತೆ, ಸೌರಶಕ್ತಿ, ಗಾಳಿ ಶಕ್ತಿ, ಬೆಳಕಿನ ಶಕ್ತಿ, ಜಲವಿದ್ಯುತ್ ಶಕ್ತಿ, ಉಷ್ಣ ಶಕ್ತಿ, ಕಾಂತೀಯ ಶಕ್ತಿ ವಿವಿಧ ಶಕ್ತಿ ಮೂಲಗಳ ಬಳಕೆಯ ಮಾದರಿಗಳನ್ನು ಮಕ್ಕಳು ಪ್ರದರ್ಶಿಸಿದರು. ಶಕ್ತಿಯನ್ನು ಸೃಷ್ಟಿಸಲು ಅಥವಾ ನಾಶಪಡಿಸಲು ಸಾಧ್ಯವಿಲ್ಲ, ಮೆಕ್ಯಾನಿಕಲ್‌ನಿಂದ ಎಲೆಕ್ಟಿçಕಲ್, ಮ್ಯಾಗ್ನೆಟಿಕ್‌ನಿಂದ ಚಲನೆ, ಸೌರದಿಂದ ವಿದ್ಯುಚ್ಛಕ್ತಿ ಶಕ್ತಿಯ ವಿವಿಧ ರೂಪಾಂತರ ಗಳನ್ನು ತಿಳಿಸಲಾಯಿತು. ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳುವ ನೈಸರ್ಗಿಕ ಮಾರ್ಗವಾಗಿರುವ ಎರೆಹುಳ ಗೊಬ್ಬರ ಉತ್ಪಾದನೆ, ಇಳುವರಿ, ನೈಸರ್ಗಿಕ ಶಕ್ತಿ ವೃದ್ಧಿಸಲು ಎರೆಹುಳಗಳ ರಕ್ಷಣೆಗೆ ಒತ್ತು ನೀಡಲು ಸಂದೇಶ ನೀಡಲಾಯಿತು.

ವಿಶೇಷತೆಯ ಡಾರ್ಕ್ ರೂಮ್ : ಸ್ಪೆಕ್ಟೊçÃಸ್ಕೋಪಿ ಬಳಸಿ ಬಣ್ಣದ ಅಂಚುಗಳನ್ನು ಬಳಸಿಕೊಂಡು ವಿಶೇಷವಾಗಿ ಡಾರ್ಕ್ ರೂಮ್ ರೂಪಿಸಲಾಗಿತ್ತು. ಐಆರ್ ಸಂವೇದಕವನ್ನು ಬಳಸುವ ಸೌಂಡ್ ಡಿಟೆಕ್ಟರ್, ತ್ರಿಡಿ ನಕ್ಷತ್ರ ಪುಂಜದ ವೀಕ್ಷಣೆ, ಬೆಳಕಿನ ಪ್ರತಿಫಲನದ ಆಧಾರದ ಮೇಲೆ ತ್ರಿಡಿ ಹಾಲೋಗ್ರಾಮ್, ಯಾಂತ್ರಿಕ ಶಕ್ತಿಯನ್ನು ಬೆಳಕಿನ ಶಕ್ತಿಯಾಗಿ ಪರಿವರ್ತಿಸುವ ವಿಧಾನ, ಆಂತರಿಕ ಪ್ರತಿಫಲನ ಪ್ರಯೋಗಗಳಲ್ಲಿ ಆಪ್ಟಿಕಲ್ ಫೈಬರ್ ಸಂವಹನ, ಮಸೂರಗಳ ಕನ್ವರ್ಜಿಂಗ್ ಮತ್ತು ಡೈವರ್ಜಿಂಗ್ ಕ್ರಿಯೆ, ಬೆಳಕಿನ ಪ್ರಸರಣವನ್ನು ಆಧರಿಸಿ ಮಳೆಬಿಲ್ಲು ನೃತ್ಯ, ಪ್ರತಿಫಲನ ಗುಣಲಕ್ಷಣದ ಆಧಾರದ ಮೇಲೆ ಅನಂತ ಕನ್ನಡಿ ಮೂಲಕ ಬಿಂಬಿಸಲಾಯಿತು. ಪವನ ಶಕ್ತಿಯ ಆಧಾರದ ಮೇಲೆ ಸೌರ ಶಕ್ತಿ ಪ್ರಯೋಗಗಳಲ್ಲಿ ಬೆಳಕಿನ ಶಕ್ತಿಯ ಸಂರಕ್ಷಣೆಯ ತಂತ್ರಜ್ಞಾನ ಮೂಡಿ ಬಂದವು. ಸೌರ ಫಲಕಗಳು, ವಾಹನಗಳಲ್ಲಿ ಐಆರ್ ಸಂವೇದಕವನ್ನು ಆಧರಿಸಿ ಅಡಚಣೆ ಪತ್ತೆಕಾರಕ, ಪ್ರಾಣಿಗಳ ಅತಿಕ್ರಮಣ ಪತ್ತೆಕಾರಕ, ಲಾವಾ ದೀಪ, ಬೆಳಕಿನ ಪ್ರತಿಫಲನ, ಲೇಸರ್ ಲೈಟ್ ಡಿಟೆಕ್ಟರ್, ದೂರದ ಅಂತರದ ಪತ್ತೆಕಾರಕ, ದೃಷ್ಠಿ ಇಲ್ಲದವರಿಗೆ ನಡೆದುಕೊಂಡು ಹೋಗಲು ಅಡಚಣೆ ಪತ್ತೆಕಾರಕ ಯಂತ್ರವನ್ನು ಅನಾವರಣಗೊಳಿಸಲಾಯಿತು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿಸ್ತರಣಾ ಶಿಕ್ಷಣ ಘಟಕದ ಮುಖ್ಯಸ್ಥ ಡಾ. ಆರ್. ಎನ್. ಕೆಂಚರೆಡ್ಡಿ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದಲ್ಲಿ ಸಾಕಷ್ಟು ಆವಿಷ್ಕಾರಕ್ಕೆ ಮುಂದಾಗಿರುವುದು ಉತ್ತಮ ಬೆಳವಣಿಗೆ. ಸಾಕಷ್ಟು ಮಾದರಿಗಳು ಭವಿಷ್ಯಕ್ಕೆ ಉಪಯುಕ್ತವಾಗಿದೆ. ದೃಷ್ಟಿ ಇಲ್ಲದವರಿಗೆ ದಾರಿ ತೋರುವ ಪತ್ತೆಕಾರಕ ತಂತ್ರಜ್ಞಾನ ಹೆಚ್ಚು ಪ್ರಯೋಜಕನಕಾರಿ ಎಂದರು.

ಪ್ರಾAಶುಪಾಲ ಗೌರಮ್ಮ ನಂಜಪ್ಪ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವಿಜ್ಞಾನದ ಮಹತ್ವ, ಸಂಶೋಧನೆಗೆ ನೆರವಾಗುವ ಯೋಜನೆಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ವೀಕ್ಷಣೆಗೆ ಅವಕಾಶ ನೀಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದರು.